ETV Bharat / state

ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಸವಾಲ್​... ಏನದು ಗೊತ್ತಾ? - ಮಲ್ಲೇಶ್ವರಂನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ

ಸಿದ್ದರಾಮಯ್ಯ ಅವರು ಗೌಪ್ಯ ಮತದಾನದ ಮೂಲಕ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ತೋರಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲೆಸೆದಿದ್ದಾರೆ.

ಸಿದ್ದರಾಮಯ್ಯಗೆ ಸಂಸದೆ ಶೋಭಾ ಕರಂದ್ಲಾಜೆ ಸವಾಲ್
author img

By

Published : Nov 25, 2019, 3:46 PM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಬೆಂಬಲವೇ ಇಲ್ಲ. ಹೈಕಮಾಂಡ್ಅ​ನ್ನು ಬ್ಲಾಕ್​​ಮೇಲ್ ಮಾಡಿ ಪ್ರತಿಪಕ್ಷದ ನಾಯಕರಾಗಿದ್ದಾರೆ‌. ತಾಕತ್ತಿದ್ದರೆ ಶಾಸಕರಿಂದ ಗೌಪ್ಯ ಮತದಾನ ಮಾಡಿಸಿ ಆಯ್ಕೆಯಾಗಿ ನೋಡೋಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲೆಸೆದಿದ್ದಾರೆ.

ಸಿದ್ದರಾಮಯ್ಯಗೆ ಸಂಸದೆ ಶೋಭಾ ಕರಂದ್ಲಾಜೆ ಸವಾಲ್

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಏಕಾಂಗಿಯಾಗಿ ಓಡಾಡ್ತಿದ್ದಾರೆ ಪಾಪಾ ಸಿದ್ದರಾಮಯ್ಯ. ಏಕೋಪಾಧ್ಯಯ ಶಾಲೆಯ ಮುಖ್ಯೋಪಾಧ್ಯಾಯ ಆಗಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದಂತೆ ಕಾಂಗ್ರೆಸ್ ಪತನಕ್ಕೂ ಸಿದ್ದರಾಮಯ್ಯ ಕಾರಣವಾಗಲಿದ್ದಾರೆ. ತಾವೊಬ್ಬರೇ ಹಿಂದುಳಿದ ಸಮುದಾಯದ ನಾಯಕನಂತೆ ಸಿದ್ದರಾಮಯ್ಯ ವರ್ತಿಸ್ತಿದ್ದಾರೆ. ಸಿದ್ದರಾಮಯ್ಯನವರನ್ನ ಕಾಂಗ್ರೆಸ್​​ಗೆ ಕರೆ ತಂದಿದ್ದೇ ಹೆಚ್.ವಿಶ್ವನಾಥ್. ಆದರೆ ವಿಶ್ವನಾಥ್ ಪಕ್ಷ ಬಿಡುವಂತೆ ಸಿದ್ದರಾಮಯ್ಯ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

ಶ್ರೀರಾಮುಲು ಜನಪ್ರಿಯತೆ ಸಹಿಸಿಕೊಳ್ಳಲು ಆಗದೇ ಅವರನ್ನ ಟಾರ್ಗೆಟ್ ಮಾಡ್ತಿದ್ದೀರಿ. ಇದೇ ಶ್ರೀರಾಮುಲು ಅವರ ವಿರುದ್ಧ ಬಾದಾಮಿಯಲ್ಲಿ ಅತಿ ಕಡಿಮೆ ಅಂತರದಿಂದ ಸೋತಿದ್ದಾರೆ. ಶ್ರೀರಾಮುಲು ಅವರನ್ನ ಪೆದ್ದ ಅಂತಾ ಕರೆದು ಹಿಂದುಳಿದ ನಾಯಕರಿಗೆ ಅವಮಾನ ಮಾಡಿದ್ದೀರಿ. ಈ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಮುನಿಯಪ್ಪ, ಪರಮೇಶ್ವರ್, ರಾಮಲಿಂಗಾರೆಡ್ಡಿ, ಹರಿಪ್ರಸಾದ್ ಎಲ್ಲಿದ್ದಾರೆ? ಈಗಲೂ ನಿಮ್ಮ ಶಾಸಕರನ್ನೇ ಕೇಳಿದರೆ ನಿಮ್ಮನ್ನ ನಾಯಕ ಅಂತಾ ಒಪ್ಕೊಳ್ಳಲ್ಲ. ಹೈಕಮಾಂಡ್​​ನ್ನು ಬ್ಲಾಕ್​​ಮೇಲ್ ಮಾಡಿ ವಿಪಕ್ಷ ನಾಯಕರಾಗಿದ್ದೀರಿ. ನಿಮ್ಮ ಶಾಸಕರೇ ನಿಮ್ಮನ್ನು ನಾಯಕ ಎಂದು ಒಪ್ಪಿಕೊಳ್ಳಲು‌ ಸಿದ್ಧರಿಲ್ಲ. ಇವತ್ತು ನೀವು ಕಾಂಗ್ರೆಸ್ ಶಾಸಕರನ್ನು‌ ಸೇರಿಸಿ ಗೌಪ್ಯ ಮತದಾನ ಮಾಡಿಸಿದರೆ ನಿಮಗೆ ಮತ ಬೀಳಲ್ಲ. ಬೇಕಿದ್ದರೆ ಒಮ್ಮೆ ಶಾಸಕರಿಂದ ಗುಪ್ತ ಮತದಾನ ಮಾಡಿಸಿ ನೋಡಿ ಎಂದು ಸವಾಲೆಸೆದರು.

Intro:

ಬೆಂಗಳೂರು:ಸಿಎಲ್ಪಿ ನಾಯಕ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಬೆಂಬಲವೇ ಇಲ್ಲ, ಹೈಕಮಾಂಡ್ ಅನ್ನು ಬ್ಲಾಕ್ ಮೇಲ್ ಮಾಡಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ‌ ತಾಕತ್ತಿದ್ದರೆ ಶಾಸಕರಿಂದ ಗೌಪ್ಯ ಮತದಾನ ಮಾಡಿಸಿ ಆಯ್ಕೆಯಾಗಿ ನೋಡೋಣಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲೆಸೆದಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಏಕಾಂಗಿಯಾಗಿ ಓಡಾಡ್ತಿದ್ದಾರೆ ಪಾಪಾ ಸಿದ್ದರಾಮಯ್ಯ ಏಕೋಪಾದ್ಯಾಯ ಶಾಲೆಯ ಮುಖ್ಯೋಪಾಧ್ಯಾಯ ಆಗಿದ್ದಾರೆ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದಂತೆ ಕಾಂಗ್ರೆಸ್ ಪತನಕ್ಕೂ ಸಿದ್ದರಾಮಯ್ಯ ಕಾರಣವಾಗಲಿದ್ದಾರೆ. ತಾವೊಬ್ಬರೇ ಹಿಂದುಳಿದ ನಾಯಕನಂತೆ ಸಿದ್ದರಾಮಯ್ಯ ವರ್ತಿಸ್ತಿದ್ದಾರೆ ಸಿದ್ದರಾಮಯ್ಯನವರನ್ನ ಕಾಂಗ್ರೆಸ್ಗೆ ಕರೆ ತಂದಿದ್ದೆ ಹೆಚ್ ವಿಶ್ವನಾಥ್ ಆದರೆ ವಿಶ್ವನಾಥ್ ಪಕ್ಷ ಬಿಡುವಂತೆ ಸಿದ್ಧರಾಮಯ್ಯ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

ಶ್ರೀರಾಮುಲು ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಆಗದೇ ಅವರನ್ನ ಟಾರ್ಗೆಟ್ ಮಾಡ್ತಿದ್ದೀರಿ. ಇದೇ ಶ್ರೀರಾಮುಲು ಅವರ ಮೇಲೆ ಬದಾಮಿಯಲ್ಲಿ ಅತಿ ಕಡಿಮೆ ಅಂತರದಿಂದ ಗೆದ್ದಿದ್ದೀರಿ ಶ್ರೀರಾಮುಲು ಅವರನ್ನ ಪೆದ್ದ ಅಂತಾ ಕರೆದು ಹಿಂದುಳಿದ ನಾಯಕರಿಗೆ ಅವಮಾನ ಮಾಡಿದ್ದೀರಿ ಈ ಚುನಾವಣೆಯಲ್ ಮಲ್ಲಿಕಾರ್ಜುನ್ ಖರ್ಗೆ,ಮುನಿಯಪ್ಪ,ಪರಮೇಶ್ವರ್, ರಾಮಲಿಂಗಾರೆಡ್ಡಿ, ಹರಿಪ್ರಸಾದ್ ಎಲ್ಲಿದ್ದಾರೆ? ಈಗಲೂ ನಿಮ್ಮ ಶಾಸಕರನ್ನೇ ಕೇಳಿದರೆ ನಿಮ್ಮನ್ನ ನಾಯಕ ಅಂತಾ ಒಪ್ಕೊಳ್ಳಲ್ಲ ಹೈಕಮಾಂಡ್ ನ್ನು ಬ್ಲಾಕ್ ಮೇಲ್ ಮಾಡಿ ವಿಪಕ್ಷ ನಾಯಕರಾಗಿದ್ದೀರಿ ನಿಮ್ಮ ಶಾಸಕರೇ ನಿಮ್ಮನ್ನು ನಾಯಕ ಎಂದು ಒಪ್ಪಿಕೊಳ್ಳಲು‌ ಸಿದ್ದರಿಲ್ಲ ಇವತ್ತೂ ನೀವು ಕಾಂಗ್ರೆಸ್ ಶಾಸಕರನ್ನು‌ ಸೇರಿಸಿ ಗೌಪ್ಯ ಮತದಾನ ಮಾಡಿಸಿದರೆ ನಿಮಗೆ ಮತ ಬೀಳಲ್ಲ, ಬೇಕಿದ್ದರೆ ಒಮ್ಮೆ ಶಾಸಕರಿಂದ ಸಿಎಲ್ಪಿ ನಾಯಕ ಸ್ಥಾನಕ್ಕೆ ಗುಪ್ತ ಮತದಾನ ಮಾಡಿಸಿ ನೋಡಿ ಎಂದು ಸವಾಲೆಸೆದರು.

12ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದಿದ್ದೀರಿ ಆದರೆ 76 ರಲ್ಲಿ 12 ಹೊರಹೋದರು ಈಗ 12 ಗೆದ್ದರೂ ಆಗುವುದು 76 ಸ್ಥಾನ ಮಾತ್ರ ಅಷ್ಟರಲ್ಲಿ‌ ಸರ್ಕಾರ‌ ರಚನೆ ಹೇಗೆ ಸಾಧ್ಯ? ಅತಿ ಹೆಚ್ಚು ಬಾರಿ ಬಕೆಟ್ ಮಂಡಿಸೊದ ಅನುಭವಿಯಾಗಿ ನಿಮಗೆ ನಮ್ಮ‌ ರಾಜ್ಯದಲ್ಲಿ ಸರ್ಕಾರ ರಚನೆಗೆ113 ಸ್ಥಾನ ಬೇಕು ಎಂದು ಗೊತ್ತಿಲ್ಲವೇ?
ಒಮ್ಮೆ‌ ಜೆಡಿಎಸ್ ನವರಿಗೆ ಮೋಸ ಮಾಡಿದ ‌ಇಮಗೆ ಮತ್ತೆ ಅವರ ಬೆಂಬಲ ಸಿಗುವ ವಿಶ್ವಾಸ ಇದೆಯಾ? ಯಾವ ಆಧಾರದಲ್ಲಿ ಸರ್ಕಾರ‌ ರಚನೆ ಮಾಡಲಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಶಾಸಕ ತನ್ವೀರ್ ಸೇಠ್ ಮೇಲೆ ಹತ್ಯೆ ಯತ್ನವಾಗಿದೆ
ಇದಕ್ಕೆ ಕಾರಣ ಸಿದ್ದರಾಮಯ್ಯ.ಎಸ್ಡಿಪಿಐ ಮತ್ತು ಪಿಎಫ್ಐ ಮೇಲಿನ ಕೇಸ್ ಗಳನ್ನ ಸಿದ್ದರಾಮಯ್ಯ ವಾಪಾಸ್ ಪಡೆದರು ನಮ್ಮ ಕಾರ್ಯಕರ್ತ ಕುಟ್ಟಪ್ಪನನ್ನ ಕಳೆದುಕೊಂಡೆವು ಈಗ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆಯಾಗಿದೆ ಇದಕ್ಕೆಲ್ಲ ಕಾರಣ ಸಿದ್ದರಾಮಯ್ಯ ತೆಗೆದುಕೊಂಡಿದ್ದ ನಿರ್ಧಾರ ಈಗ ನಾವು ಅಧಿಕಾರಕ್ಕೆ ಬಂದಿದ್ದು,ಎಸ್ಡಿಪಿಐ ಮತ್ತು ಪಿಎಫ್ಐ ನಿಷೇಧಕ್ಕೆ ನಮ್ಮ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ ಎಂದರು.

ಹಿಂದೆ 2014 ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ‌ ಬಚ್ಚೇಗೌಡರ ವಿರುದ್ಧ ಕುಮಾರಸ್ವಾಮಿ ನಿಂತರು, ಬಚ್ಚೇಗೌಡರನ್ನು ಸೋಲಿಸಲು ನಿಂತಿದ್ದೇನೆ ಎಂದು ಹೇಳಿದ್ದರು ಆದರೆ ಇಂದು ಅದೇ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡಗೆ ಬೆಂಬಲ ಕೊಡುತ್ತಿದ್ದೇನೆ ಎನ್ನುತ್ತಿದ್ದಾರೆ ಇದು ಅವರನ್ನು ಉಳಿಸಲೋ ಅಥವಾ ಮುಳುಗಿಸಲೋ‌ ಗೊತ್ತಿಲ್ಲ.ಆದರೆ ಬಚ್ಚೇಗೌಡ ಮತ್ತು ಶರತ್ ಗೆ ಬಿಜೆಪಿ ಯಾವುದೇ ದ್ರೋಹ ಮಾಡಿಲ್ಲ,ಶಾಸಕ,ಸಚುವ ಸಂಸದರನ್ನಾಗಿ ಬಚ್ಚೇಗೌಡರನ್ನು ಮಾಡಿರುವ ಬಿಜೆಪಿ ಸೋತಿದ್ದ ಶರತ್ ಗೆ ವಸತಿ ನಿಗಮ ಕೊಡಲಾಗಿತ್ತು ಆದರೂ ಯಾರ ಕುಮ್ಮಕ್ಕಿನಿಂದ‌ ರೆಬಲ್ ಆಗಿ ನಿಂತಿದಾರೆ ಗೊತ್ತಿಲ್ಲ,‌ಈಗ‌ ಜೆಡಿಎಸ್ ಅವರಿಗೆ ಬೆಂಬಲ ನೀಡಿದೆ, ಜೆಡಿಎಸ್ ಅಭ್ಯರ್ಥಿ ಸಿಕ್ಕಿಲ್ಲ ಎಂದು ಬೆಂಬಲ ಕೊಟ್ಟಿದ್ದಾರೋ ಅಥವಾ ಜೆಡಿಎಸ್ ಕಾಂಗ್ರೆಸ್ ಒಳ‌ಒಪ್ಪಂದ‌ ನಡೆದಿದೆಯಾ ,ಗೋಮುಖ ವ್ಯಾಘ್ರ ರೀತಿ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದಾರೋ ಗೊತ್ತಿಲ್ಲ ಆದರೂ ಬಿಜೆಪಿ ಗೆಲ್ಲಲಿದೆ ಎಂದರು.

ಮೂರು ಬಾರಿ ಮೂರನೇ ಸ್ಥಾನಕ್ಕೆ ಬಂದಿದ್ದ ಜೆಡಿಎಸ್ ಗೆ ಆಡಳಿತ ನಡೆಸುವ ಅವಕಾಶ ಕೊಡಲಾಗಿತ್ತು ಆದರೆ ಮೂರೂ ಬಾರಿ ಅವರು ಸ್ಥಿರ ಸರ್ಕಾರ ನೀಡಲು ವಿಫಲರಾದರು.2004 ರಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದರು. 2006 ರಲ್ಲಿ ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿ ಜೊತೆ 20-20 ಸರ್ಕಾರ ರಚಿಸಿ ತಮ್ಮ ಅವದಿ ಮುಗಿಯುತ್ತಿದ್ದಂತೆ ಬಿಜೆಪಿಗೂ ಕೈ ಕೊಟ್ಟರು ಇಷ್ಟೆಲ್ಲಾ ಗೊತ್ತಿದ್ದೂ ಕಾಂಗ್ರೆಸ್ ಮತ್ತೆ 2018 ರಲ್ಲಿ ಜೆಡಿಎಸ್ ಗೆ ಬೆಂಬಲ ಕೊಡುವ ಆತುರದ ನಿರ್ಧಾರ ಕೈಗೊಂಡಿತು ಅವರದ್ದೇ ಪಕ್ಷಗಳ ಶಾಸಕ ರಾಜೀನಾಮೆಯಿಂದ 14 ತಿಂಗಳಲ್ಲೇ ಸರ್ಕಾರ ಪತನವಾಯಿತು, ಜೆಡಿಎಸ್ ಗೆ ಮೂರು ಬಾರಿ ಸಿಕ್ಕ ಅವಕಾಶವನ್ನೂ ಸರಿಯಾಗಿ ಬಳಸಿಕೊಂಡು ಆಡಳಿತ ನೀಡಲು ಸಾಧ್ಯವಾಗಿಲ್ಲ ಈಗ ಬಿಜೆಪಿ ಸರ್ಕಾರ ಬಂದಿದೆ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ ಮುಂದಿನ ಮೂರೂವರೆ ವರ್ಷ ಉತ್ತಮ ಆಡಳಿಯ ನೀಡಲಿದೆ ಎಂದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.