ETV Bharat / state

ನೈಟ್ ಪಾರ್ಟಿಗೆ ಕರೆದು‌ ಸಹಪಾಠಿಯ ಮೇಲೆ ಲೈಂಗಿಕ ದೌರ್ಜನ್ಯ

ರಾತ್ರಿ ಪಾರ್ಟಿ ಮಾಡಿದ ನಂತರ ಸಂತ್ರಸ್ತೆ ಮತ್ತೊಬ್ಬ ಗೆಳೆಯನ ಜೊತೆ ತನ್ನ ಅಪಾರ್ಟ್ಮೆಂಟ್‌ಗೆ ಹೋಗಲು ಮುಂದಾಗಿದ್ದಾಳೆ. ಈ ವೇಳೆ ತಡೆದಿದ್ದ ಆರೋಪಿ ತುಷಾರ್, ಈಗಾಗಲೇ ಪಾರ್ಟಿ ಮಾಡಿ ತಡವಾಗಿದೆ. ಇಲ್ಲೇ ಬೆಡ್ ಇದೆ ಮಲಗಿಕೊಳ್ಳಿ ಎಂದು ಒತ್ತಾಯಿಸಿದ್ದಾನೆ.

author img

By

Published : Dec 15, 2020, 6:01 PM IST

sexual-harassment-of-a-classmate-by-calling-her-to-a-night-party
ನೈಟ್ ಪಾರ್ಟಿಗೆ ಕರೆದು‌ ಸಹಪಾಠಿಯ ಮೇಲೆಯೇ ಲೈಂಗಿಕ ದೌರ್ಜನ್ಯ

ಬೆಂಗಳೂರು: ದೂರದ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬಳು ಕ್ಲಾಸ್​ಮೇಟ್​ ಜೊತೆ ನೈಟ್ ಪಾರ್ಟಿಗೆ ಹೋಗಿದ್ದಾಗ ಅಕ್ಷರಶಃ ರಾಕ್ಷಸನಂತೆ ವರ್ತಿಸಿರುವ ಸಹಪಾಠಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಘಟನೆಯ ವಿವರ:

ಆರ್.ಆರ್.ನಗರದ ನಿವಾಸಿಯಾಗಿರುವ ತುಷಾರ್ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದಾನೆ. ಈತ ಡಿಸೆಂಬರ್ 9ರಂದು ರಾತ್ರಿ ತನ್ನ ಅಪಾರ್ಟ್ಮೆಂಟ್‌ನಲ್ಲಿ ಪಾರ್ಟಿ ಮಾಡಲು ಗೆಳೆಯರಿಗೆ ಆಹ್ವಾನ ನೀಡಿದ್ದಾನೆ. ಅದರಂತೆ ಛತ್ತೀಸ್‌ಗಢ ಮೂಲದ ತನ್ನ ಕ್ಲಾಸ್​ಮೇಟ್​ ಯುವತಿಗೆ ಕರೆ ಮಾಡಿ ಪಾರ್ಟಿಗೆ ಕರೆದಿದ್ದ. ಪಾರ್ಟಿಗೆ ಬರುವಾಗ ಮದ್ಯ ತರುವಂತೆಯೂ ಸೂಚಿಸಿದ್ದಾನೆ. ಆತನ ಸೂಚನೆ ಮೇರೆಗೆ ಮದ್ಯ ಖರೀದಿಸಿ ತಂದಿದ್ದ ಆಕೆ, ರಾತ್ರಿ ಒಂದು ಘಂಟೆವರೆಗೂ ತುಷಾರ್ ಹಾಗೂ ಅವನ ಇನ್ನಿಬ್ಬರು ಗೆಳೆಯರ ಜೊತೆ ಎಣ್ಣೆಪಾರ್ಟಿಯಲ್ಲಿ ಭಾಗವಹಿಸಿದ್ದಳು.

ನೈಟ್ ಪಾರ್ಟಿಗೆ ಕರೆದು‌ ಲೈಂಗಿಕ ದೌರ್ಜನ್ಯ

ಪಾರ್ಟಿ ಮಾಡಿದ ನಂತರ ಸಂತ್ರಸ್ತೆ ಮತ್ತೊಬ್ಬ ಗೆಳೆಯನ ಜೊತೆ ತನ್ನ ಅಪಾರ್ಟ್ಮೆಂಟ್‌ಗೆ ಹೋಗಲು ಮುಂದಾಗಿದ್ದಾಳೆ. ಈ ವೇಳೆ ಇಬ್ಬರನ್ನು ತಡೆದ ಆರೋಪಿ ತುಷಾರ್, ಈಗಾಗಲೇ ಪಾರ್ಟಿ ಮಾಡಿ ತಡವಾಗಿದೆ. ಇಲ್ಲೇ ಬೆಡ್ ಇದೆ, ಮಲಗಿಕೊಳ್ಳಿ ಎಂದಿದ್ದಾನೆ. ಅದರಂತೆ ಆರೋಪಿ ತುಷಾರ್, ಆತನ ಸ್ನೇಹಿತ, ಸಂತ್ರಸ್ತ ಯುವತಿಯ ಗೆಳೆಯ ಹಾಲ್‌ನ ಸೋಫಾ ಮೇಲೆ ನಿದ್ದೆಗೆ ಜಾರಿದ್ದಾರೆ. ಯುವತಿ ಮಾತ್ರ ತುಷಾರ್‌ನ ಅಪಾರ್ಟ್ಮೆಂಟ್ ರೂಂನಲ್ಲಿ ಮಲಗಲು ತೆರಳಿದ್ದಾಳೆ. ಹಾಲ್‌ನಲ್ಲಿ ಮಲಗಿದ್ದ ಇನ್ನಿಬ್ಬರು ನಿದ್ರೆಗೆ ಜಾರಿರೋದನ್ನು ಗಮನಿಸಿದ ತುಷಾರ್, ಯುವತಿ ಮಲಗಿದ್ದ ಕೋಣೆಗೆ ತೆರಳಿದ್ದಾನೆ. ಬಳಿಕ ಬಲವಂತವಾಗಿ ಆಕೆಯ ಮೇಲೆ ಮೃಗೀಯವಾಗಿ ವರ್ತಿಸಿದ್ದಾನೆ.

ಈ ವೇಳೆ ಹಾಲ್‌ನಲ್ಲಿ ಮಲಗಿದ್ದ ತನ್ನ ಇತರೆ ಸ್ನೇಹಿತರ ಸಹಾಯದಿಂದ ಯುವತಿ ತಪ್ಪಿಸಿಕೊಂಡು ಅಪಾರ್ಟ್ಮೆಂಟ್‌ನಿಂದ ಹೊರಬಂದಿದ್ದಾಳೆ.

ಓದಿ: ಅಡವಿಟ್ಟ ಚಿನ್ನ ಮಾರಾಟ ಮಾಡ್ತೀನಿ‌ ಅಂತಾ ₹5.5 ಲಕ್ಷ ಪಂಗನಾಮ ಹಾಕಿದ ವಂಚಕ!!

ಈ ಘಟನೆ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ತುಷಾರ್ ವಿರುದ್ದ ಐಪಿಸಿ ಸೆಕ್ಷನ್‌ 354ರ ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿರೋ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.