ETV Bharat / state

ಲೋಕ​ ಅದಾಲತ್​ನಲ್ಲಿ 24 ಲಕ್ಷ ಪ್ರಕರಣಗಳ ಇತ್ಯರ್ಥ, 1420 ಕೋಟಿ ರೂ. ಪರಿಹಾರ ವಿತರಣೆ - ಈಟಿವಿ ಭಾರತ ಕನ್ನಡ

ಶನಿವಾರ ರಾಜ್ಯಾದ್ಯಂತ ನಡೆದ ಲೋಕ​ ಅದಾಲತ್​ನಲ್ಲಿ 24 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

ಲೋಕ​ ಅದಾಲತ್​ ಇತ್ಯರ್ಥ ಪ್ರಕರಣಗಳು
ಲೋಕ​ ಅದಾಲತ್​ ಇತ್ಯರ್ಥ ಪ್ರಕರಣಗಳು
author img

By ETV Bharat Karnataka Team

Published : Sep 12, 2023, 9:20 PM IST

Updated : Sep 12, 2023, 10:02 PM IST

ಬೆಂಗಳೂರು: ಕಳೆದ ಶನಿವಾರ ರಾಜ್ಯಾದ್ಯಂತ ನಡೆದ ಲೋಕ ಅದಾಲತ್​ನಲ್ಲಿ ಒಟ್ಟು 24,36,270 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 1420 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಿ. ನರೇಂದರ್​ ವಿವರಿಸಿದರು.

ಹೈಕೋರ್ಟ್​ನ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಹೈಕೋರ್ಟ್​ನ ಮೂರು ಪೀಠಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1,012 ಪೀಠಗಳು ಅದಾಲತ್​ಗಾಗಿ ಕಾರ್ಯನಿರ್ವಹಣೆ ಮಾಡಿದ್ದು, ನ್ಯಾಯಾಲಯದಲ್ಲಿ ಬಾಕಿಯಿರುವ 2,14,925 ಪ್ರಕರಣಗಳು ಹಾಗೂ 22,21,345 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 24,36,270 ಪ್ರಕರಣಗಳ ಇತ್ಯರ್ಥ ಪಡಿಸಲಾಗಿದೆ ಎಂದು ವಿವರಿಸಿದರು.

ಅಲ್ಲದೆ, ಲೋಕ ಅದಾಲತ್​ನಿಂದ ಸಾರ್ವಜನಿಕರಿಗೆ ಯಾವುದೇ ವೆಚ್ಚವಿಲ್ಲದೇ ಪರಿಹಾರ ಲಭ್ಯವಾಗುತ್ತಿದೆ. ಜತೆಗೆ, ನ್ಯಾಯಾಲಯದ ಸಮಯವೂ ಉಳಿಯುತ್ತಿದೆ ಎಂದು ತಿಳಿಸಿದರು. ಅದಾಲತ್​ನ ಕುರಿತು ವಿವರಣೆ ನೀಡಿದ ಹೈಕೋರ್ಟ್​ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ. ಸೋಮಶೇಖರ್,​ ಅದಾಲತ್​ನಲ್ಲಿ 1305 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 255 ದಂಪತಿಗಳು ಮತ್ತೆ ಒಂದಾಗುವಂತೆ ಮಾಡಲಾಗಿದೆ ಎಂದರು.

ಮೊಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ 3,303 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಒಟ್ಟು 166 ಕೋಟಿ ರು.ಗಳನ್ನು ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 9,269 ಚೆಕ್​ ಬೌನ್ಸ್​ ಪ್ರಕರಣಗಳ ಇತ್ಯರ್ಥ ಪಡಿಸಿದ್ದು, 373 ಕೋಟಿ ರು,ಗಳ ಪರಿಹಾರ ವಿತರಣೆ ಮಾಡಲಾಗಿದೆ. 430 ಭೂಸ್ವಾಧೀನ ಅಮ್ಲಜಾರಿ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿದ್ದು 88 ಕೋಟಿ ರು.ಗಳ ಪರಿಹಾರ ವಿತರಣೆ ಮಾಡಲಾಗಿದೆ. 767 ಮೋಟಾರು ವಾಹನ ಅಮಲ್ಜಾರಿ ಪ್ರಕರಣಗಳು ಇತ್ಯರ್ಥ ಪಡಿಸಿದ್ದು 48 ಕೋಟಿ ರೂ.ಗಳ ಪರಿಹಾರ ವಿತರಣೆ ಮಾಡಲಾಗಿದೆ. ಇದಲ್ಲದೆ, ಇತರೆ 2,899 ಅಮಲ್ಜಾರಿ ಪ್ರಕರಣಗಳು ಇತ್ಯರ್ಥವಾಗಿದ್ದು 103 ಕೋಟಿ ರು. ಪರಿಹಾರ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ಅಲ್ಲದೆ, 35 ರೇರಾ ಪ್ರಕರಣಗಳಲ್ಲಿ 7.40 ಕೋಟಿ ಪರಿಹಾರ, 95 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳಲ್ಲಿ 2 ಕೋರಿ ರು.ಗಳ ಪರಿಹಾರ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಅದಾಲತ್​ನ ವಿಶೇಷ ಪ್ರಕರಣಗಳು :

  • ಕಳೆದ 13 ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿಯಿದ್ದ ಸ್ಪೇಸಿಫಿಕ್​ ಪರಫಾರ್​ಮೆನ್ಸ್​ ಪ್ರಕರಣದ ಇತ್ಯರ್ಥ
  • ಮೋಟಾರ್​ ವಾಹನ ಪ್ರಕರಣವೊಂದರಲ್ಲಿ 51,46,820 ರು.ಗಳ ಪರಿಹಾರ, ಹಾಗೂ ಮತ್ತೊಂದು ಪ್ರಕರಣದಲ್ಲಿ 53 ಲಕ್ಷ ರು.ಗಳ ಪರಿಹಾರ ವಿತರಣೆ.
  • ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್​ ಹಾಗೂ ಬಿ.ವಿ.ಮಂಜುನಾಥ್​ ವಿರುದ್ಧದ ಪ್ರಕರಣದಲ್ಲಿ 6.85 ಕೋಟಿ ರು.ಗಳ ಪರಿಹಾರ, ಹಾಗೂ ಟಾಟಾ ಕ್ಯಾಪಿಟಲ್​ ಫೈನಾನ್ಸ್​ ಸರ್ವೀಸ್​ ಲಿಮಿಟೆಡ್​ ಮತ್ತು ಗಿರಿ ಸಹಜನ್ಯ ಪ್ರೋಜೆಕ್ಟ್​ ವಿರುದ್ಧದ ಪ್ರಕರಣದಲ್ಲಿ 3.35 ಕೋರಿ ರು.ಗಳ ಪರಿಹಾರ, ಟಾಟಾ ಕ್ಯಾಪಿಟಲ್​ ಸರ್ವೀಸ್​ ಮತ್ತು ವೆಂಕಟೇಶ್ವರ ಕ್ರಷರ್ಸ್​ ನಡುವಿನ ಪ್ರಕರಣದಲ್ಲಿ 3.35 ಕೋಟಿ ರು.ಗಳ ಪರಿಹಾರ ನೀಡಿ ಇತ್ಯರ್ಥ ಪಡಿಸಲಾಗಿದೆ.
  • ಐಡಿಎಫ್​ಸಿ ಫಸ್ಟ್​ ಬ್ಯಾಂಕ್​ ಲಿಮಿಟೆಡ್​ ಮತ್ತು ಜೆ.ಲಾಲ್​ ಅಂಡ್​ ಸನ್ಸ್​ ಮತ್ತಿತರರು ಪ್ರಕರಣದಲ್ಲಿ 2.53 ಕೋಟಿ ರು. ಪರಿಹಾರ.
  • ಟಾಟಾ ಕ್ಯಾಪಿಟಲ್​ ಫೈನಾನ್ಸ್​ ಸರ್ವೀಸ್​ ಲಿಮಿಟೆಡ್​ ಹಾಗೂ ಶ್ಯಾನ್​ ಬಾಗ್​ ವಿನಾಯಕ್ ಟಿಂಬರ್​ ಡಿಪೋ ವಿರುದ್ಧದ ಚೆಕ್​ ಬೌನ್ಸ್​ ಪ್ರಕರಣದಲ್ಲಿ 2.53 ಕೋಟಿ ರು.ಗಳ ಪರಿಹಾರ ವಿತರಣೆ ಮಾಡಿ ಪ್ರಕರಣ ಇತ್ಯರ್ಥ ಪಡಿಸಲಾಗಿದೆ.
  • ಕೊಡಗಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬಿ.ಡಿ.ಸ್ಪೂರ್ತಿ ಹಾಘೂ ಕೋರಮಂಡಲಂ ಜನರಲ್​ ಇನ್ಶೂರೆನ್ಸ್​ ಕಂಪನಿ ವಿರುದ್ಧದ ಪ್ರಕರಣದಲ್ಲಿ 2.25 ಲಕ್ಷ ಪರಿಹಾರ.
  • ಮಂಗಳೂರಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಪ್ರಕರಣದಲ್ಲಿ ನವ ಮಂಗಳೂರು ಬಂಧರು ಪ್ರಾಧಿಕಾರ ಮತ್ತು ಮೆಸ್​ ಅಡ್ಮಿರಲ್​ ಹರೇನ್​ ಸರ್ವೀಸಸ್​ ಪ್ರೈವೇಟ್​ ಲಿಮಿಟೆಡ್​ ಪ್ರಕರಣದಲ್ಲಿ 2.66 ಕೋಟಿ ರು.ಗಳ ಪರಿಹಾರ ಎಂದು ನ್ಯಾಯಮೂರ್ತಿ ಸೋಮಶೇಖರ್​ ವಿವರಿಸಿದರು.

ಇದನ್ನೂ ಓದಿ: ರಾಷ್ಟ್ರೀಯ ಲೋಕ್​ ಅದಾಲತ್ :​ ರಾಜೀ ಸಂಧಾನದ ಮೂಲಕ ವ್ಯಾಜ್ಯಗಳ ಪರಿಹಾರ ಕಂಡುಕೊಳ್ಳಬೇಕು.. ನ್ಯಾ.ಆರ್.ದೇವದಾಸ್

Last Updated : Sep 12, 2023, 10:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.