ETV Bharat / state

ಪ್ರತ್ಯೇಕ ನಾಡಧ್ವಜ ಪ್ರಸ್ತಾವನೆಗೆ ಹಿನ್ನೆಡೆ: ತಟಸ್ಥ ನಿಲುವಿಗೆ ಒಗ್ಗಿಕೊಂಡ ಸರ್ಕಾರ - government of karnataka

ಈ ಹಿಂದಿನ ಸರ್ಕಾರದ ಪ್ರಸ್ತಾವನೆಯಲ್ಲಿನ ಬಲವಾದ ಅಂಶವೇ ಈಗ ಇಲ್ಲದ ಕಾರಣ ಈಗಿನ ಸರ್ಕಾರ ಪ್ರಸ್ತಾವನೆ ವಿಷಯದಲ್ಲಿ ತಟಸ್ಥ ನಿಲುವು ತಳೆಯಲು ನಿರ್ಧರಿಸಿದೆ. ಈ ವಿಚಾರವನ್ನು ಅನಗತ್ಯವಾಗಿ ಕೆದಕದಿರಲು ಬಿಜೆಪಿ ಸರ್ಕಾರ ತೀರ್ಮಾನಿಸಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಪ್ರತ್ಯೇಕ ನಾಡಧ್ವಜ ಪ್ರಸ್ತಾವನೆಗೆ ಹಿನ್ನೆಡೆ
author img

By

Published : Nov 1, 2019, 4:07 PM IST

Updated : Nov 1, 2019, 5:20 PM IST

ಬೆಂಗಳೂರು: ಪ್ರತ್ಯೇಕ ನಾಡಧ್ವಜ ಹೊಂದುವ ಕರ್ನಾಟಕ ಜನತೆಯ ಆಸೆ ಈಡೇರುವುದು ಬಹುತೇಕ ಅನುಮಾನವಾಗಿದ್ದು, ಪ್ರತ್ಯೇಕ ಧ್ವಜದ ಪ್ರಸ್ತಾವನೆ ವಿಷಯದಲ್ಲಿ ತಟಸ್ಥ ನಿಲುವು ತಾಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕೆ ಬಹುಮುಖ್ಯ ಕಾರಣ ಕಾಶ್ಮೀರ.

ತ್ರಿವರ್ಣ ಧ್ವಜದ ಮಾದರಿಯಲ್ಲಿ ಕರ್ನಾಟಕಕ್ಕೆ‌ ಪ್ರತ್ಯೇಕ ನಾಡಧ್ವಜ ಹೊಂದುವ ಕನ್ನಡಿಗರ ಆಶಯಕ್ಕೆ ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ಸಂವಿಧಾನದ 370 ವಿಧಿ ಮತ್ತು 35ಎ ರದ್ದು ಹಿನ್ನೆಡೆಯುಂಟು ಮಾಡಿದೆ.

2018ರ ಮಾರ್ಚ್ 8 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಧ್ವಜ ವಿಚಾರದಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ನಾಡಧ್ವಜ ವಿನ್ಯಾಸ ಮಾಡಲು ಸಾಹಿತಿಗಳು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಮಿತಿ ನೀಡಿದ್ದ ಹಳದಿ ಮತ್ತು ಕೆಂಪು ಬಣ್ಣದ ಜೊತೆ ಶಾಂತಿ ಸಂಕೇತವಾದ ಬಿಳಿಬಣ್ಣ ಸೇರ್ಪಡೆ ಮಾಡಿ ತ್ರಿವರ್ಣ ಮಾದರಿಯ ಧ್ವಜದ ಮಧ್ಯಭಾಗದಲ್ಲಿ ಸರ್ಕಾರದ ಲಾಂಛನ ಅಳವಡಿಸಿದ್ದ ನಾಡಧ್ವಜ ಅನಾವರಣಗೊಳಿಸಿದ್ದರು.

ಪ್ರತ್ಯೇಕ ನಾಡಧ್ವಜ ಹೊಂದಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದ್ದರು. ಇದರಲ್ಲಿ ಬಹುಮುಖ್ಯವಾಗಿ ಉಲ್ಲೇಖ ಮಾಡಿದ್ದು ಸಂವಿಧಾನದಲ್ಲಿ ಪ್ರತ್ಯೇಕವಾಗಿ ರಾಜ್ಯಗಳು ಧ್ವಜ ಹೊಂದುವಂತಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅಲ್ಲದೇ ಈಗಾಗಲೇ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ರಾಜ್ಯಧ್ವಜ ಹೊಂದಿವೆ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜದ ಜೊತೆಯಲ್ಲಿ ತಮ್ಮ ರಾಜ್ಯದ ಧ್ವಜವನ್ನೂ ಹಾರಿಸುತ್ತಿರುವ ಅದೇ ಮಾದರಿಯಲ್ಲಿ ನಮಗೂ ಅಧಿಕೃತ ನಾಡಧ್ವಜ ಹೊಂದಲು ಅವಕಾಶ ನೀಡುವಂತೆ ಮನವಿ ಮಾಡಿತ್ತು.

ಮನವಿಯಲ್ಲಿನ ಈ ಅಂಶವೇ ಇದೀಗ ಪ್ರತ್ಯೇಕ ನಾಡಧ್ವಜ ಬೇಡಿಕೆಗೆ ಕುತ್ತು ತಂದಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದರಿಂದ ಅಲ್ಲಿ ಪ್ರತ್ಯೇಕ ಧ್ವಜಕ್ಕೆ ನೀಡಿದ್ದ ಅಧಿಕೃತ ಸ್ಥಾನ ಹಿಂಪಡೆಯಲಾಗಿದೆ. ಅದೇ ರೀತಿ ಈಶಾನ್ಯ ರಾಜ್ಯಗಳಲ್ಲಿಯೂ ಪ್ರತ್ಯೇಕ ಧ್ವಜಕ್ಕೆ ಕೋಕ್ ನೀಡಲಾಗಿದೆ. ಹಾಗಾಗಿ ಸಂವಿಧಾನಾತ್ಮಕವಾಗಿ ಪ್ರತ್ಯೇಕ ಧ್ವಜ ಹೊಂದಿದ್ದ ರಾಜ್ಯಗಳಲ್ಲೇ ಧ್ವಜಕ್ಕೆ ಕೋಕ್ ನೀಡಿರುವುದರಿಂದ ಹೊಸದಾಗಿ ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ ಹೊಂದುವ ಅವಕಾಶ ಸಿಗುವುದು ಅನುಮಾನವಾಗಿದೆ.

ಈ ಹಿಂದಿನ ಸರ್ಕಾರದ ಪ್ರಸ್ತಾವನೆಯಲ್ಲಿನ ಬಲವಾದ ಅಂಶವೇ ಈಗ ಇಲ್ಲದ ಕಾರಣ ಈಗಿನ ಸರ್ಕಾರ ಪ್ರಸ್ತಾವನೆ ವಿಷಯದಲ್ಲಿ ತಟಸ್ಥ ನಿಲುವು ತಳೆಯಲು ನಿರ್ಧರಿಸಿದೆ. ಈ ವಿಚಾರವನ್ನು ಅನಗತ್ಯವಾಗಿ ಕೆದಕದಿರಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

64 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಅಧಿಕೃತ ನಾಡಧ್ವಜದ ಸ್ಥಾನಮಾನ ಸಿಗುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದ್ದು, ಮುಂದೆಯೂ ನಮ್ಮದೇ ಆದ ಅಧಿಕೃತ ನಾಡಧ್ವಜ ಹೊಂದುವ ಮಾನ್ಯತೆ ಬಹುತೇಕ ಮರೀಚಿಕೆ ಎನ್ನುವಂತಾಗಿದೆ. ಆದರೂ ಈಗಿರುವಂತೆ ಸಂಘಟನೆಗಳು ಸಾಂಕೇತಿಕ ಹಳದಿ,ಕೆಂಪು ಬಣ್ಣದ ಧ್ವಜವನ್ನು ಸಾಂಕೇತಿಕವಾಗಿ ಆಚರಿಸಲು ಮಾತ್ರ ಯಾವುದೇ ತೊಂದರೆ ಇಲ್ಲ.

Intro:

ಬೆಂಗಳೂರು: ಪ್ರತ್ಯೇಕ ನಾಡಧ್ವಜ ಹೊಂದುವ ಕರ್ನಾಟಕ ಜನತೆಯ ಆಸೆ ಈಡೇರುವುದು ಬಹುತೇಕ ಅನುಮಾನವಾಗಿದ್ದು ಪ್ರತ್ಯೇಕ ಧ್ವಜದ ಪ್ರಸ್ತಾವನೆ ವಿಷಯದಲ್ಲಿ ತಟಸ್ಥ ನಿಲುವು ತಾಳಲು ರಾಜ್ಯ ಸರ್ಕಾರ ನಿರ್ಧಾರವಾಗಿದೆ ಅದಕ್ಕೆ ಬಹುಮುಖ್ಯ ಕಾರಣ ಕಾಶ್ಮೀರ.

ತ್ರಿವರ್ಣ ಧ್ವಜದ ಮಾದರಿಯಲ್ಲಿ ಕರ್ನಾಟಕಕ್ಕೆ‌ ಪ್ರತ್ಯೇಕ ನಾಡಧ್ವಜ ಹೊಂದುವ ಕನ್ನಡಿಗರ ಆಶಯಕ್ಕೆ ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ಸಂವಿಧಾನದ 370 ವಿಧಿ ಮತ್ತು 35ಎ ರದ್ದು ಹಿನ್ನಡೆಯುಂಟು ಮಾಡಿದೆ.

2018 ರ ಮಾರ್ಚ್ 8 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಧ್ವಜ ವಿಚಾರದಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ನಾಡಧ್ವಜ ವಿನ್ಯಾಸ ಮಾಡಲು ಸಾಹಿತಿಗಳು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಮಿತಿ ನೀಡಿದ್ದ ಹಳದಿ ಮತ್ತು ಕೆಂಪು ಬಣ್ಣದ ಜೊತೆ ಶಾಂತಿ ಸಂಕೇತವಾದ ಬಿಳಿಬಣ್ಣ ಸೇರ್ಪಡೆ ಮಾಡಿ ತ್ರಿವರ್ಣ ಮಾದರಿಯ ಧ್ವಜದ ಮಧ್ಯಭಾಗದಲ್ಲಿ ಸರ್ಕಾರದ ಲಾಂಛನ ಅಳವಡಿಸಿದ್ದ ನಾಡಧ್ವಜ ಅನಾವರಣಗೊಳಿಸಿದ್ದರು.

ಪ್ರತ್ಯೇಕ ನಾಡಧ್ವಜ ಹೊಂದಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದ್ದರು ಇದರಲ್ಲಿ ಬಹುಮುಖ್ಯವಾಗಿ ಉಲ್ಲೇಖ ಮಾಡಿದ್ದು ಸಂವಿಧಾನದಲ್ಲಿ ಪ್ರತ್ಯೇಕವಾಗಿ ರಾಜ್ಯಗಳು ಧ್ವಜ ಹೊಂದುವಂತಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಅಲ್ಲದೇ ಈಗಾಗಲೇ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ರಾಜ್ಯಧ್ವಜ ಹೊಂದಿವೆ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜದ ಜೊತೆಯಲ್ಲಿ ತಮ್ಮ‌ರಾಜ್ಯದ ಧ್ವಜವನ್ನೂ ಹಾರಿಸುತ್ತಿವ ಅದೇ ಮಾದರಿಯಲ್ಲಿ ನಮಗೂ ಅಧಿಕೃತ ನಾಡಧ್ವಜ ಹೊಂದಲು ಅವಕಾಶ ನೀಡುವಂತೆ ಮನವಿ ಮಾಡಿತ್ತು.

ಆದರೆ ಮನವಿಯಲ್ಲಿನ ಈ ಅಂಶವೇ ಇದೀಗ ಪ್ರತ್ಯೇಕ ನಾಡಧ್ವಜ ಬೇಡಿಕೆಗೆ ಕುತ್ತು ತಂದಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದರಿಂದ ಅಲ್ಲಿ ಪ್ರತ್ಯೇಕ ಧ್ವಜಕ್ಕೆ ನೀಡಿದ್ದ ಅಧಿಕೃತ ಸ್ಥಾನ ಹಿಂಪಡೆಯಲಾಗಿದೆ ಅದೇ ರೀತಿ ಈಶಾನ್ಯ ರಾಜ್ಯಗಳಲ್ಲಿಯೂ ಪ್ರತ್ಯೇಕ ಧ್ವಜಕ್ಕೆ ಕೋಕ್ ನೀಡಲಾಗಿದೆ ಹಾಗಾಗಿ ಸಂವಿಧಾನಾತ್ಮಕವಾಗಿ ಪ್ರತ್ಯೇಕ ಧ್ವಜ ಹೊಂದಿದ್ದ ರಾಜ್ಯಗಳಲ್ಲೇ ಧ್ವಜಕ್ಕೆ ಕೋಕ್ ನೀಡಿರುವುದರಿಂದ ಹೊಸದಾಗಿ ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ ಹೊಂದುವ ಅವಕಾಶ ಸಿಗುವುದು ಅನುಮಾನವಾಗಿದೆ.

ಈ ಹಿಂದಿನ ಸರ್ಕಾರದ ಪ್ರಸ್ತಾವನೆಯಲ್ಲಿನ ಬಲವಾದ ಅಂಶವೇ ಈಗ ಇಲ್ಲದ ಕಾರಣ ಈಗಿನ ಸರ್ಕಾರ ಪ್ರಸ್ತಾವನೆ ವಿಷಯದಲ್ಲಿ ತಟಸ್ಥ ನಿಲುವು ತಳೆಯಲು ನಿರ್ಧರಿಸಿದೆ ಈ ವಿಚಾರವನ್ನು ಅನಗತ್ಯವಾಗಿ ಕೆದಕದಿರಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಒಟ್ಟಾರೆ 64 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಅಧಿಕೃತ ನಾಡಧ್ವಜದ ಸ್ಥಾನಮಾನ ಸಿಗುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದ್ದು ಮುಂದೆಯೂ ನಮ್ಮದೇ ಆದ ಅಧಿಕೃತ ನಾಡಧ್ವಜ ಹೊಂದುವ ಮಾನ್ಯತೆ ಬಹುತೇಕ ಮರೀಚಿಕೆ ಎನ್ನುವಂತಾಗಿದೆ ಆದರೂ ಈಗಿರುವಂತೆ ಸಂಘಟನೆಗಳು ಸಾಂಕೇತಿಕ ಹಳದಿ,ಕೆಂಪು ಬಣ್ಣದ ಧ್ವಜವನ್ನು ಸಾಂಕೇತಿಕವಾಗಿ ಆಚರಿಸಲು ಮಾತ್ರ ಯಾವುದೇ ತೊಂದರೆ ಇಲ್ಲ.Body:.Conclusion:
Last Updated : Nov 1, 2019, 5:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.