ETV Bharat / state

140 ವರ್ಷದ ಸರ್ಕಾರಿ ಶಾಲೆ ಕೆಡವಿ ವಿವೇಕಾನಂದರ ಪ್ರತಿಮೆ ನಿರ್ಮಾಣ: ಸಾಹಿತಿಗಳಿಂದ ಪ್ರತಿಭಟನೆ

author img

By

Published : Jul 22, 2021, 2:49 PM IST

ಸರ್ಕಾರಿ ಶಾಲೆ ಧ್ವಂಸಮಾಡಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ಹಿರಿಯ ಸಾಹಿತಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

Senior Literature protest, Senior Literature protest against government school demolishing, Senior Literature protest news, Vivekananda Statue built, Vivekananda Statue built news, ಸರ್ಕಾರಿ ಶಾಲೆ ದ್ವಂಸ ಮಾಡಿ ವಿವೇಕಾನಂದರ ಪ್ರತಿಮೆ ನಿರ್ಮಾಣ, ಸರ್ಕಾರಿ ಶಾಲೆ ದ್ವಂಸ ಮಾಡಿ ವಿವೇಕಾನಂದರ ಪ್ರತಿಮೆ ನಿರ್ಮಾಣ ವಿರುದ್ಧ ಪ್ರತಿಭಟನೆ, ಸರ್ಕಾರಿ ಶಾಲೆ ದ್ವಂಸ ಮಾಡಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಸುದ್ದಿ,  ಹಿರಿಯ ಸಾಹಿತಿಗಳು ಪ್ರತಿಭಟನೆ,
ಬೀದಿಗಿಳಿದು ಪ್ರತಿಭಟಿಸಿದ ಹಿರಿಯ ಸಾಹಿತಿಗಳು..

ಬೆಂಗಳೂರು: ಮೈಸೂರಿನಲ್ಲಿ 140 ವರ್ಷಗಳ ಹಿಂದೆ ಆರಂಭವಾದ ಮೈಸೂರು ಸಂಸ್ಥಾನದ ಮೊಟ್ಟ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನ ಧ್ವಂಸ ಮಾಡಿ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡುವ ಅಗತ್ಯವಿಲ್ಲ ಎಂದು ಹಿರಿಯ ಸಾಹಿತಿ ಪ್ರೋ. ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಮೌರ್ಯ ಸರ್ಕಲ್ ಬಳಿ ಮೈಸೂರಿನ ಮಹಾರಾಣಿ ಮಾದರಿ ಸರ್ಕಾರಿ ಶಾಲೆ ಉಳಿಸುವಂತೆ ಪ್ರತಿಭಟನೆ ನಡೆಸಿದರು. ಶಾಲೆಯನ್ನ ಕೆಡವಿ ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಮುಂದಾಗಿರುವ ನಿರ್ಧಾರಕ್ಕೆ ಸಾಹಿತಿಗಳೆಲ್ಲರು ಕಿಡಿಕಾರಿದ್ದು, ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಅಂತ ಒತ್ತಾಯಿಸಿದರು.

ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಶಾಲೆಯನ್ನ ಕೆಡವಿ ನಿರ್ಮಾಣ ಮಾಡ್ತಿರೋದು ಸರಿಯಲ್ಲ. ಶಾಲಾ ಆವರಣದಲ್ಲಿ ನಿವೇಶನ ಖಾಲಿ ಇದ್ದು, ಆ ಜಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲಿ. ಅದು ಬಿಟ್ಟು ಐತಿಹಾಸಿಕ ಹಿನ್ನೆಲೆ ಇರುವ ಶಾಲೆ ಕೆಡವಲು ಬಿಡುವುದಿಲ್ಲ. ಈಗಾಗಲೇ ಏಕಸದಸ್ಯಪೀಠ ಒಂದು ತೀರ್ಪು ಕೊಟ್ಟಿದ್ದು, ಮರುಪರಿಶೀಲನೆಗೆ ನ್ಯಾಯಾಲಯದ ಹಂತದಲ್ಲಿದೆ‌. ಆದರೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸರ್ಕಾರವೇ ಸರ್ಕಾರಿ ಶಾಲೆಯನ್ನ ಉಳಿಸುವ ಕೆಲಸ ಮಾಡಬೇಕು ಅಂತ ಪ್ರೊ. ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.

ನಾವು ವಿವೇಕಾನಂದರ ಅನುಯಾಯಿಗಳು ಹೌದು. ಸಾಮರಸ್ಯ ಪರವಾಗಿ ಇರುವವರು. ಐತಿಹಾಸಿಕ ಕಟ್ಟಡ ನಿರ್ಮಾಣವೂ ಒಂದು ಸ್ಮಾರಕವೇ ಆಗಿದ್ದು, ಶಾಲೆಯನ್ನೂ ಉಳಿಸಿ ಜೊತೆಗೆ ವಿವೇಕಾನಂದರ ಸ್ಮಾರಕವೂ ನಿರ್ಮಾಣ ಮಾಡಿ ಅಂತ ತಿಳಿಸಿದರು.

ಪ್ರೋ. ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, ಸುಮಾರು 1881ರಲ್ಲಿ ಸ್ಥಾಪನೆಯಾದ ಮಾದರಿ ಸರ್ಕಾರಿ ಶಾಲೆಯು, 140 ವರ್ಷಗಳ ಇತಿಹಾಸವಿದೆ. ಸುಮಾರು 140 ವರ್ಷಗಳಿಂದಲೂ ಪಾಠ-ಪ್ರವಚನ ನಡೆಯುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ತಾಯಿ ಮಹಾರಾಣಿ ನಂಜಮ್ಮಣ್ಣಿ, ಅನಕ್ಷರಸ್ಥೆಯಾಗಿದ್ದರೂ, ವಿವೇಕಾನಂದರ ಮಾತುಗಳಿಂದ ಪ್ರಚೋದಿತರಾಗಿ ನಿರ್ಮಿಸಿದ ಶಾಲೆ ಇದು. ಶಾಲೆ ತೆರೆದಿದ್ದು ಮಾತ್ರವಲ್ಲದೇ ಕಡೆಗೆ ಅದೇ ಶಾಲೆಯಲ್ಲಿ ಅಕ್ಷರವನ್ನು ಕಲಿತುಕೊಂಡರು. ಅಕ್ಷರದ ಕಾಣಿಕೆ ಕೊಟ್ಟ ಐತಿಹಾಸಿಕ ಹಿನ್ನೆಲೆ ಇದೆ. ಶಾಲೆಯ ಒಟ್ಟು ವಿಸ್ತೀರ್ಣ 36 ಸಾವಿರ ಚದರ್​ ಅಡಿ ಇದ್ದು, ಐತಿಹಾಸಿಕ‌ ಶಾಲೆ ಉಳಿಸಿಕೊಳ್ಳಲು ಸರ್ಕಾರ ಮುಂದಾಗುವಂತೆ ಆಗ್ರಹಿಸಿದರು.

ಏನಿದು ಸ್ಮಾರಕ ನಿರ್ಮಾಣದ ವಿವಾದ: 2010ರ ಸ್ವಾಮಿ ವಿವೇಕಾನಂದರ 150ನೇ ಜಯಂತಿಯಂದು ಸಂಭ್ರಮಚಾರಣೆಗೆಂದು ಕೇಂದ್ರ ಸರ್ಕಾರ ವಿವೇಕಾನಂದರು ಭೇಟಿ ನೀಡಿದ ಸ್ಥಳಗಳಲ್ಲಿ ನೆನಪಿಗಾಗಿ ರೇಖಾ ಸ್ಮಾರಕಗಳನ್ನು ಆಯಾ ರಾಜ್ಯದವರು ಇಷ್ಟಪಟ್ಟರೆ ನಿರ್ಮಿಸಬಹುದು ಎಂದು ಅದಕ್ಕಾಗಿ ಒಂದು ಸಮಿತಿಯನ್ನು ರಚಿಸಲಾಯಿತು. 2013 ರಲ್ಲಿ ಕರ್ನಾಟಕ ಸರ್ಕಾರವೂ ಮೈಸೂರಿನಲ್ಲಿ ವಿವೇಕ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿತು. 1892ರಲ್ಲಿ ಮೂರು ವಾರಗಳ ಕಾಲ ವಿವೇಕಾನಂದರು ಮೈಸೂರಿನಲ್ಲಿ ಹತ್ತನೇ ಜಯಚಾಮರಾಜೇಂದ್ರ ಒಡಯರ್ ಅವರ ಸಮಯದಲ್ಲಿ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್​ರ ಮನೆಯಲ್ಲಿದ್ದರು. ಆದರೆ ಇದನ್ನ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಮತ್ತು ಹಲವು ರಾಜಕಾರಣಿಗಳು ಈ ವಾಸ್ತವವನ್ನ ಬೇರೆ ಕಥೆಯಾಗಿ ಸೃಷ್ಟಿಸಿದ್ದಾರೆ. ವಿವೇಕಾನಂದರು ನೆಲೆಸಿದ್ದು ನಿರಂಜನ ಮಠದಲ್ಲಿ, ಈ ಸ್ಥಳದಲ್ಲೇ ಸ್ಮಾರಕ ನಿರ್ಮಿಸಬೇಕು ಅಂತ ದಾರಿ ತಪ್ಪಿಸಿದರು ಅಂತ ಹೋರಾಟಗಾರರು ಹೇಳುತ್ತಿದ್ದಾರೆ.

ಈ ರೀತಿಯಲ್ಲಿ ಸರ್ಕಾರದ ದಾರಿ ತಪ್ಪಿಸಿ, ಶಾಲೆ ಕೆಡವಿ ಸ್ಮಾರಕ ನಿರ್ಮಾಣ ಮಾಡುತ್ತಿರುವುದಕ್ಕೆ ಮೈಸೂರಿನ‌ಲ್ಲಿರುವ ಎಲ್ಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರ ನಡೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯ್ತು‌. ಪ್ರತಿಭಟನೆಯಲ್ಲಿ ಬರಗೂರು ರಾಮಚಂದ್ರಪ್ಪರ ಜೊತೆಗೆ ವಸುಂಧರಾ ಭೂಪತಿ, ಎಸ್.ಜಿ ಮರುಳಸಿದ್ದಯ್ಯ ಸೇರಿದಂತೆ ಹಲವರು ಭಾಗಿಯಾಗಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.