ETV Bharat / state

ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಹುದ್ದೆ ಅಲಂಕರಿಸಿದ ಹುಬ್ಬಳ್ಳಿಯ ಯುವತಿ

ಉತ್ತರ ಕರ್ನಾಟಕದ ಹುಬ್ಬಳ್ಳಿಯ ಸಂಜನಾ ಹಿರೇಮಠ್ ಒಂದು ದಿನದ ಮಟ್ಟಿಗೆ ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದರು.

sanjana hiremath
ಉತ್ತರ ಕರ್ನಾಟಕದ ಹುಬ್ಬಳ್ಳಿಯ ಸಂಜನಾ ಹಿರೇಮಠ್
author img

By ETV Bharat Karnataka Team

Published : Oct 13, 2023, 8:54 AM IST

ಬೆಂಗಳೂರು: ಹುಬ್ಬಳ್ಳಿಯ ಸಂಜನಾ ಹಿರೇಮಠ (23) ಎಂಬುವರು ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಹುದ್ದೆ ಅಲಂಕರಿಸುವ ಮೂಲಕ ರಾಜತಾಂತ್ರಿಕರ ಕಾರ್ಯವೈಖರಿಯ ಅನುಭವ ಪಡೆದುಕೊಂಡರು.

ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಪ್ರತಿ ವರ್ಷ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ(ಅಕ್ಟೋಬರ್ 11) ದಂದು 'ಹೈ ಕಮಿಷನರ್ ಫಾರ್ ಎ ಡೇ' ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ವರ್ಷ ದೇಶಾದ್ಯಂತ ಯುವತಿಯರಿಂದ 180ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, ಸಂಜನಾ ಹಿರೇಮಠ ವಿಜೇತರಾಗಿ ಆಯ್ಕೆಯಾಗಿದ್ದರು. ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹಿರೇಮಠ, ಪ್ರಸ್ತುತ ಲಂಡನ್ ಸ್ಟಾಕ್ ಎಕ್ಷೇಂಜ್ ಗ್ರೂಪ್ ನಲ್ಲಿ ಉದ್ಯೋಗಿಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ಸಂಜನಾ ಹಿರೇಮಠ, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗಿ ಒಂದು ದಿನ ಕಳೆಯುವ ನನ್ನ ಕನಸು ನನಸಾಗಿದೆ. ಬೆಂಗಳೂರಿನ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್ ಬಗ್ಗೆ ಅವರೊಂದಿಗೆ ಸಂವಾದ ನಡೆಸಲು ನನಗೆ ಅವಕಾಶ ಸಿಕ್ಕಿತು. ಇದರಿಂದ ಮಹಿಳಾ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಬದಲಾವಣೆ ತರುತ್ತೇನೆ ಎಂದು ಹೇಳಿದರು.

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, "ಹೈ ಕಮಿಷನರ್ ಫಾರ್ ಎ ಡೇ" ಸ್ಪರ್ಧೆಯು ಯುವತಿಯರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಾಯಕತ್ವದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ವೇದಿಕೆ ಒದಗಿಸುತ್ತದೆ. ಬೆಂಗಳೂರಿನಲ್ಲಿ ಯುಕೆಯ ಉನ್ನತ ರಾಜತಾಂತ್ರಿಕರಾಗಿ ಹಿರೇಮಠ ಒಂದು ದಿನದ ಅವಧಿಯಲ್ಲಿ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡರು ಎಂದು ತಿಳಿಸಿದರು.

ಇದನ್ನೂ ಓದಿ : ದೊಡ್ಡಬಳ್ಳಾಪುರ : ಡಿಸಿ ಜೊತೆ ಕುಳಿತು ಕಾರ್ಯವೈಖರಿ ವೀಕ್ಷಣೆ ಮಾಡಿದ ವಿದ್ಯಾರ್ಥಿನಿ ವಿದ್ಯಾಶ್ರೀ

ಒಂದು ದಿನ ಹೇಗಿತ್ತು? : ಬೆಂಗಳೂರಿನ ಡಿಹೆಚ್‌ಸಿಯ ನಿವಾಸದಲ್ಲಿ ಅಯ್ಯರ್ ಅವರೊಂದಿಗೆ ಬೆಳಗಿನ ಉಪಾಹಾರದೊಂದಿಗೆ ಸಂಜನಾ ಹಿರೇಮಠ ಅವರ ದಿನಚರಿ ಪ್ರಾರಂಭವಾಯಿತು. ನಂತರ, ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್ ಕಚೇರಿಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ತಮ್ಮ ಅಭಿಪ್ರಾಯಗಳ ಕುರಿತು ಮಾತನಾಡಿದರು. ಮಧ್ಯಾಹ್ನ ಭೋಜನ ಸಮಯದ ವೇಳೆ ಬಸವೇಶ್ವರ ಖಾನಾವಳಿಯಲ್ಲಿ ಆಸ್ಟ್ರೇಲಿಯಾದ ಕಾನ್ಸುಲ್-ಜನರಲ್ ಹಿಲರಿ ಮೆಕ್‌ಗೆಚಿ ಅವರನ್ನು ಭೇಟಿಯಾಗಿ ಜೋಳದ ರೊಟ್ಟಿಯ ಊಟ ಸವಿದರು ಮತ್ತು ಮಹಿಳೆಯರ ನಾಯಕತ್ವ ಹಾಗೂ ಉತ್ತರ ಕರ್ನಾಟಕದ ಪಾಕಪದ್ಧತಿಯ ಬಗ್ಗೆ ಮಾತನಾಡಿದರು. ಬಳಿಕ ಗ್ರಂಥಾಲಯಗಳು, ಕೌಶಲ್ಯ ತರಬೇತಿ, ಎಸ್‌ಡಿಜಿಗಳು, ಸ್ಕಾಲರ್‌ಶಿಪ್‌ ಕುರಿತು ಚೆವೆನಿಂಗ್ ಗುರುಕುಲ ಫೆಲೋ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ (ಐಎಎಸ್) ಅವರೊಂದಿಗಿನ ಸಭೆಯ ಬಳಿಕ ಹಿರೇಮಠ್ ಅವರ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ದಿನ ಮುಕ್ತಾಯವಾಯಿತು.

ಇದನ್ನೂ ಓದಿ : ಒಂದು ದಿನ ಕೂಲಿ ಕೆಲಸ.. ಇನ್ನೊಂದು ದಿನ ಕಾಲೇಜು.. ಕೆಮಿಸ್ಟ್ರಿಯಲ್ಲಿ ಪಿಎಚ್​ಡಿ.. ಬಡತನದಲ್ಲಿ ಅರಳಿದ ಭಾರತಿ ಈಗ ​ಡಾಕ್ಟರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.