ETV Bharat / state

ರೋಹಿತ ಚಕ್ರತೀರ್ಥನನ್ನು ಗಡಿಪಾರು ಮಾಡಿ: ರಾಮಲಿಂಗರೆಡ್ಡಿ - ಪಠ್ಯ ಪರಿಷ್ಕರಣೆ ವಿವಾದ

ರೋಹಿತ್ ಚಕ್ರತೀರ್ಥ ಮೂಲಕ ಮಕ್ಕಳಲ್ಲಿ ಕೋಮುವಾದ ಬೇರೂರಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಾಮಲಿಂಗರೆಡ್ಡಿ ಕಿಡಿಕಾರಿದರು.

rohit-chakratirtha-must-deportation-says ramalinga-reddy
ರೋಹಿತ ಚಕ್ರತೀರ್ಥನನ್ನು ಗಡಿಪಾರು ಮಾಡಿ: ರಾಮಲಿಂಗಾರೆಡ್ಡಿ
author img

By

Published : Jun 11, 2022, 4:05 PM IST

ಬೆಂಗಳೂರು: ಪಠ್ಯ ಪರಿಷ್ಕರಣೆ ನೆಪದಲ್ಲಿ ಮಹಾನ್​ ವ್ಯಕ್ತಿಗಳಿಗೆ ಅಪಮಾನ ಮಾಡಿರುವ ರೋಹಿತ್​​ ಚಕ್ರತೀರ್ಥ ಒಬ್ಬ ವಿಕೃತ ಮನುಷ್ಯ. ಈತನನ್ನು ಗಡಿ ಪಾರು ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಹೆಸರಲ್ಲಿ ಇತಿಹಾಸ ತಿರುಚುವ ಪ್ರಯತ್ನ ನಡೆಯುತ್ತಿದೆ. ಪಠ್ಯದಲ್ಲಿ ನಾಡಧ್ವಜಕ್ಕೆ ಅವಮಾನ ಮಾಡಲಾಗಿದೆ ಹಾಗೂ ರೋಹಿತ್​ ಚಕ್ರತೀರ್ಥ ಹಿಂದಿ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರೋಹಿತ್ ಚಕ್ರತೀರ್ಥ ಮೂಲಕ ಮಕ್ಕಳಲ್ಲಿ ಕೋಮುವಾದ ಬೇರೂರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ರೋಹಿತ ಚಕ್ರತೀರ್ಥನನ್ನು ಗಡಿಪಾರು ಮಾಡಿ: ರಾಮಲಿಂಗರೆಡ್ಡಿ

ಅಲ್ಲದೇ, ಅಂಬೇಡ್ಕರ್, ಬಸವಣ್ಣ, ಕುವೆಂಪು ಸೇರಿ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಲಾಗಿದೆ. ಇದು ಆರ್​​ಎಸ್​ಎಸ್​ನ ಹಿಡನ್ ಅಜೆಂಡಾ ಆಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶ್ವಗುರು ಬಸವಣ್ಣ ಅವರಿಗಿಂತ ಅಧಿಕಾರವೇ ಹೆಚ್ಚಾಗಿದೆ. ಅಂಬೇಡ್ಕರ್ ಬಗ್ಗೆ ತಿರುಚಿ ಬರೆದಿದ್ದರೂ ದಲಿತ ಸಚಿವರು ಮಾತಾಡುತ್ತಿಲ್ಲ. ಅಂಬೇಡ್ಕರ್​ ಹೆಸರಿನಲ್ಲಿ ಇವರು ಆಯ್ಕೆ ಆಗಿ ಇವಾಗ ಯಾಕೆ ಮೌನ ವಹಿಸಿದ್ದಾರೆ?. ಯಾಕೆ ಇದರ ಬಗ್ಗೆ ಮಾಜಿ ಸಚಿವ ಎನ್.ಮಹೇಶ್ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಆರೋಪ ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿದು ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಹೊರಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.