ETV Bharat / state

ಬಿಗ್​ ಬಾಸ್​ : ಮನೆಯಿಂದ ಹೊರ ಬಂದ ಆರ್​ಜೆ ಪೃಥ್ವಿ - Kannada Big Boss News

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಪೃಥ್ವಿ ಈ ವಾರ ಎಲಿಮಿನೇಟ್​ ಆಗಿದ್ದಾರೆ.

ಮನೆಯಿಂದ ಹೊರ ಬಂದ ಆರ್​ಜೆ ಪೃಥ್ವಿ
ಮನೆಯಿಂದ ಹೊರ ಬಂದ ಆರ್​ಜೆ ಪೃಥ್ವಿ
author img

By

Published : Dec 1, 2019, 2:51 AM IST

Updated : Dec 1, 2019, 4:08 PM IST

ಬೆಂಗಳೂರು : ವಾರಾಂತ್ಯದಲ್ಲಿ ವೀಕ್ಷಕರಿಗೆ ಇರುವ ಟೆನ್ಷನ್ ಒಂದೇ ! ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರಹೋಗುವವರು ಯಾರು ಎಂಬುದು. ಕುತೂಹಲಕ್ಕೆ ತೆರೆ ಬಿದ್ದಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಪೃಥ್ವಿ ಈ ವಾರ ಮನೆಯಿಂದ ಹೊರಬಂದಿದ್ದಾರೆ.

ಮನೆಯಲ್ಲಿ ಸತತ ನಾಲ್ಕು ವಾರಗಳ ಕಾಲ ದೊಡ್ಮನೆಯೊಳಗೆ ಇದ್ದ ಪೃಥ್ವಿ ಇದೀಗ ಎಲಿಮಿನೇಟ್ ಆಗಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ಮನೆಯ ಸದಸ್ಯರಾದ ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ಪೃಥ್ವಿ, ಕಿಶನ್, ಚಂದನ್ ಆಚಾರ್ ಹಾಗೂ ರಾಜು ತಾಳಿಕೋಟೆ ನಾಮಿನೇಟ್ ಆಗಿದ್ದರು, ಆದರೆ ಇವರನ್ನೆಲ್ಲ ಬಿಟ್ಟು ಆರ್ ಜೆ ಪೃಥ್ವಿ ಮನೆಯಿಂದ ಹೊರ ಬಂದಿದ್ದಾರೆ.

ವಿಭಿನ್ನ ಕಾಸ್ಟ್ಯೂಮ್, ವಿಚಿತ್ರ ಸ್ಟೈಲ್, ಉದ್ದ ಮೀಸೆ, ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಪೃಥ್ವಿ ಬಿಗ್ ಬಾಸ್ ಮನೆಯಲ್ಲಿ ಟ್ರೆಂಡ್ ಸೆಟ್ ಮಾಡಿದ್ದರು. ಪೃಥ್ವಿ ಮೀಸೆಗೆ ಹಲವರು ಫಿದಾ ಆಗಿ ಫಾಲೋ ಮಾಡುತ್ತಿದ್ದರು. ಅಲ್ಲದೇ, ಟಾಸ್ಕ್ ಗಳಲ್ಲಿ ಅಂದರೆ ಈ ವಾರದ ನಾಲ್ಕು ಚಟುವಟಿಕೆಯಲ್ಲಿ ಮೂರರಲ್ಲಿ ಪೃಥ್ವಿ ಅವರಿಂದ ಅಧಿಕ ಅಂಕಗಳು ಕಳೆದುಕೊಂಡಿದ್ದಕ್ಕೆ ಕಳಪೆ ಬೋರ್ಡ್ ನೀಡಿ ಜೈಲಿಗೆ ಕಳುಹಿಸಿದರು.

ಕಳ್ಳ-ಪೊಲೀಸ್ ಟಾಸ್ಕ್ ನಲ್ಲಿ ಪೃಥ್ವಿ ಗೂಢಚಾರಿಯಾಗಿ ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ನೀಡಲಾಗಿದ್ದ ಅವಾರ್ಡ್ ನಲ್ಲಿ 'ಮೋಸ ಮಾಡಲೆಂದೇ ಮನೆಗೆ ಬಂದೆಯಾ' ಅವಾರ್ಡ್ ಪೃಥ್ವಿ ಅವರಿಗೆ ನೀಡಲಾಗಿತ್ತು.ಕಿತ್ತಳೆ ಮಂಡಿ ಟಾಸ್ಕ್ ನಲ್ಲಿ ದೀಪಿಕಾ ಅವರ ಟೀ ಶರ್ಟ್ ಗೆ ಕೈ ಹಾಕುತ್ತೇನೆ ಎಂದು ಪೃಥ್ವಿ ಹೇಳಿಕೆ ನೀಡಿದ್ದರು. ನಂತರ ಕಿಚ್ಚ ಅವರು ದೀಪಿಕಾ ಅವರಿಗೆ ಇದೊಂದು ಸ್ಟ್ರಾಟಜಿ ಎಂದು ನಿಮಗೆ ಗೊತ್ತಾಗಲಿಲ್ಲವೆ ಎಂದಿದ್ದರು.

ಒಟ್ಟಾರೆ ನಾಲ್ಕು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಪೃಥ್ವಿ, ಇದೀಗ ಆಟ ಮುಗಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

Intro:Body:ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಪೃಥ್ವಿ ಈ ವಾರ ಮನೆಯಿಂದ ಹೊರಬಂದಿದ್ದಾರೆ. ವಾರಾಂತ್ಯದಲ್ಲಿ ವೀಕ್ಷಕರಿಗೆ ಇರುವ ಟೆನ್ಷನ್ ಒಂದೇ! ಈ ವಾರ ಮನೆಯಿಂದ ಹೊರಹೋಗುವವರು ಯಾರು ಎಂಬುದು. ಮನೆಯಿಂದ ಈ ಬಾರಿ ಹೊರಬರುತ್ತಿರುವುದು ಆರ್ ಜೆ ಆಗಿ ಪ್ರಖ್ಯಾತರಾಗಿರುವ ಪೃಥ್ವಿ.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬಂದಿದ್ದರು ಪೃಥ್ವಿ. ಸತತ ನಾಲ್ಕು ವಾರಗಳ ಕಾಲ ದೊಡ್ಮನೆಯೊಳಗೆ ಇದ್ದ ಪೃಥ್ವಿ ಇದೀಗ ಎಲಿಮಿನೇಟ್ ಆಗಿದ್ದಾರೆ.
ಈ ವಾರ ಮನೆಯಿಂದ ಹೊರ ಹೋಗಲು ಮನೆಯ ಸದಸ್ಯರಾದ ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ಪೃಥ್ವಿ, ಕಿಶನ್, ಚಂದನ್ ಆಚಾರ್ ಹಾಗೂ ರಾಜು ತಾಳಿಕೋಟೆ ನಾಮಿನೇಟ್ ಆಗಿದ್ದರು.
ಆರ್ ಜೆ ಪೃಥ್ವಿ ಎಂಟ್ರಿ ವೀಕ್ಷಕರಲ್ಲಿ ಬಿಗ್ ಬಾಸ್ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿತ್ತು. ವಿಭಿನ್ನ ಕಾಸ್ಟ್ಯೂಮ್, ವಿಚಿತ್ರ ಸ್ಟೈಲ್, ಉದ್ದ ಮೀಸೆ, ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಆರ್ ಜೆ ಪೃಥ್ವಿ ಬಿಗ್ ಬಾಸ್ ಮನೆಯಲ್ಲಿ ಟ್ರೆಂಡ್ ಸೆಟ್ ಮಾಡಿದ್ದರು. ಪೃಥ್ವಿ ಮೀಸೆಗೆ ಹಲವರು ಫಿದಾ ಆಗಿ ಫಾಲೋ ಮಾಡುತ್ತಿದ್ದರು.
ಅಲ್ಲದೇ, ಟಾಸ್ಕ್ ಗಳಲ್ಲಿ ಅಂದರೆ ಈ ವಾರದ ನಾಲ್ಕು ಚಟುವಟಿಕೆಯಲ್ಲಿ ಮೂರರಲ್ಲಿ ಪೃಥ್ವಿ ಅವರಿಂದ ಅಧಿಕ ಅಂಕಗಳು ಕಳೆದುಕೊಂಡಿದ್ದಕ್ಕೆ ಕಳಪೆ ಬೋರ್ಡ್ ನೀಡಿ ಜೈಲಿಗೆ ಕಳುಹಿಸಿದರು.
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಡೈನಿಂಗ್ ಟೇಬಲ್ ಮೇಲೆ ಪೃಥ್ವಿ, ದೀಪಿಕಾ ಅವರನ್ನು ಉದ್ದೇಶಿಸಿ, ರೋಜಿ ನಿಮ್ಮನ್ನು ಹೊಗಳೊದು ತೆಗಳೊದು ಗೊತ್ತಾಗ್ತಿಲ್ಲ.ನೀವೆಷ್ಟು ಪ್ರಚಂಡರು.ಸಾಕಷ್ಟು ತಿಂದಿದ್ದಿರಾ, ಆದರೂ ಊಟ ಸೇರ್ತಿದೀಯಾ ಎಂದು ದೀಪಿಕಾ ಅವರನ್ನು ಕೇಳಿದಾಗ ಅಲ್ಲಿಂದ ಬೇಸರದಲ್ಲಿ ಎದ್ದು ಹೋದರು. ಬೆಡ್‌ರೂಮ್ ಏರಿಯಾದಲ್ಲಿ ಹೋಗಿ ಅಳುತ್ತಿದ್ದಾಗ ಪೃಥ್ವಿಯವರು ಬಂದು ತಾವು ತಮಾಷೆಯಾಗಿ ಹೇಳಿದ್ದು ಎಂದು ಪೃಥ್ವಿ ಸ್ಪಷ್ಟೀಕರಣ ಕೊಟ್ಟಿದ್ದರು.
ಇನ್ನೂ ಕಳ್ಳ-ಪೊಲೀಸ್ ಟಾಸ್ಕ್ ನಲ್ಲಿ ಪೃಥ್ವಿ ಗೂಢಚಾರಿ ಯಾಗಿ ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ನೀಡಲಾಗಿದ್ದ ಅವಾರ್ಡ್ ನಲ್ಲಿ ಮೋಸ ಮಾಡಲೆಂದೇ ಮನೆಗೆ ಬಂದೆಯಾ ಅವಾರ್ಡ್ ಪೃಥ್ವಿ ಅವರಿಗೆ ನೀಡಲಾಗಿತ್ತು.
ಕಿತ್ತಳೆ ಮಂಡಿ ಟಾಸ್ಕ್ ನಲ್ಲಿ ದೀಪಿಕಾ ಅವರ ಟೀ ಶರ್ಟ್ ಗೆ ಕೈ ಹಾಕುತ್ತೇನೆ ಎಂದು ಪೃಥ್ವಿ ಹೇಳಿಕೆ ನೀಡಿದ್ದರು. ನಂತರ ಕಿಚ್ಚ ಅವರು ದೀಪಿಕಾ ಅವರಿಗೆ ಇದೊಂದು ಸ್ಟ್ರಾಟಜಿ ಎಂದು ನಿಮಗೆ ಗೊತ್ತಾಗಲಿಲ್ಲವೆ ಎಂದಿದ್ದರು.
ಪೃಥ್ವಿ ವೈಲ್ಡ್ ಕಾರ್ಡ್ ಎಂಟ್ರಿ ಆದ ಮರುದಿನವೇ ಹರೀಶ್ ರವರ ಮಿಮಿಕ್ರಿ ಮಾಡಿ ಅವರನ್ನು ಸ್ವಿಮ್ಮಿಂಗ್ ಪೂಲ್ ಗೆ ಹಾರಿಸಿದ್ದರು.
ಒಟ್ಟಾರೆ ನಾಲ್ಕು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಪೃಥ್ವಿ ಆಡಿದ್ದು ಹೀಗೆ... ಇದೀಗ ಆಟ ಮುಗಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

Conclusion:
Last Updated : Dec 1, 2019, 4:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.