ETV Bharat / state

ಮೀಸಲಾತಿ ಬೇಡಿಕೆ: ಕಾನೂನು ತಜ್ಞರ ಜತೆ ಇಂದು ಸಂಜೆ ಬೊಮ್ಮಾಯಿ ಸಭೆ - meeting this evening with legal experts

ಕೆ‌.ಕೆ.ಗೆಸ್ಟ್ ಹೌಸ್​​​ನಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ದೇಶದಲ್ಲಿ ಮೀಸಲಾತಿ ಪ್ರಮಾಣ ಏರಿಕೆ ಮಾಡುವ ವಿಚಾರವಾಗಿ ಸುಪ್ರೀಂ ಕೋರ್ಟ್​ನಿಂದ ರಾಜ್ಯಗಳಿಗೆ ನೊಟೀಸ್ ಜಾರಿ ಮಾಡಿರುವ ಹಿನ್ನೆಲೆ ಸುಪ್ರೀಂ ಕೋರ್ಟ್​ಗೆ ರಾಜ್ಯದ ಅಭಿಪ್ರಾಯ ತಿಳಿಸಲು ಕರ್ನಾಟಕ ಮುಂದಾಗಿದೆ.

Reservation Demand Bommaai meeting
ಕಾನೂನು ತಜ್ಞರ ಜತೆ ಇಂದು ಸಂಜೆ ಬೊಮ್ಮಾಯಿ ಸಭೆ
author img

By

Published : Mar 13, 2021, 3:58 PM IST

ಬೆಂಗಳೂರು: ವಿವಿಧ ಸಮುದಾಯಗಳಿಂದ ಮೀಸಲಾತಿ ಬೇಡಿಕೆ ವಿಚಾರವಾಗಿ ಇಂದು ಸಂಜೆ ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಸಭೆ ನಡೆಸಲಿದ್ದಾರೆ.

ಓದಿ: ಬೆಂಗಳೂರು: ರೌಡಿಶೀಟರ್​ ರಾಜು ಅಲಿಯಾಸ್ ರಾಜುದೊರೈ ಬಂಧನ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಅಡ್ವೋಕೇಟ್‌ ಜನರಲ್ ಪ್ರಭುಲಿಂಗ ನಾವಡಗಿ, ಮಾಜಿ ಅಡ್ವೋಕೇಟ್ ಜನರಲ್​​ಗಳು, ಕಾನೂನು ತಜ್ಞರು‌ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಮೀಸಲಾತಿ ಸಂಬಂಧ ಮಹತ್ವದ‌ ಚರ್ಚೆ ನಡೆಯಲಿದೆ.

ಕೆ‌.ಕೆ.ಗೆಸ್ಟ್ ಹೌಸ್​​ನಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ದೇಶದಲ್ಲಿ ಮೀಸಲಾತಿ ಪ್ರಮಾಣ ಏರಿಕೆ ಮಾಡುವ ವಿಚಾರವಾಗಿ ಸುಪ್ರೀಂ ಕೋರ್ಟ್​ನಿಂದ ರಾಜ್ಯಗಳಿಗೆ ನೊಟೀಸ್ ಜಾರಿ ಮಾಡಿರುವ ಹಿನ್ನೆಲೆ ಸುಪ್ರೀಂ ಕೋರ್ಟ್​ಗೆ ರಾಜ್ಯದ ಅಭಿಪ್ರಾಯ ತಿಳಿಸಲು ಕರ್ನಾಟಕ ಮುಂದಾಗಿದೆ.

ಮೀಸಲಾತಿ ಪ್ರಮಾಣ ಶೇ. 50ಕ್ಕಿಂತ ಹೆಚ್ಚು ಮಾಡುವ ಬಗ್ಗೆ ಕರ್ನಾಟಕ ತನ್ನ ಅಭಿಪ್ರಾಯ ತಿಳಿಸಬೇಕಾಗಿದೆ. ಈ ಸಂಬಂಧ ಇಂದು ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಮೀಸಲಾತಿ ಬೇಡಿಕೆಗಳ ಸಾಧಕ ಬಾಧಕಗಳ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.