ETV Bharat / state

ಎಸ್​ಎಸ್​ಎಲ್​ಸಿ ಪರೀಕ್ಷೆ ಮಾರ್ಗಸೂಚಿ ಬಿಡುಗಡೆ; ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತಿಲ್ಲ - sslc exams rules

ಖಾಸಗಿ ಪರೀಕ್ಷೆ ಕೇಂದ್ರಗಳಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಪರೀಕ್ಷಾ ಮುಖ್ಯ ಅಧೀಕ್ಷಕರನ್ನಾಗಿ ನೇಮಕಾತಿ ಮಾಡುವುದು ಕಡ್ಡಾಯ. ಇದಲ್ಲದೆ ಉಪನಿರ್ದೇಶಕರನ್ನು ಜಿಲ್ಲಾ ವೀಕ್ಷಕರನ್ನಾಗಿ ನೇಮಕಾತಿ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಅಧಿಕಾರಿಗಳು, ಸಿಬ್ಬಂದಿಗಳ ನೇಮಕಾತಿ ಮಾಡುವ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ.

sslc-exams
ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆ
author img

By

Published : Jun 24, 2021, 8:47 PM IST

Updated : Jun 24, 2021, 8:59 PM IST

ಬೆಂಗಳೂರು: ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆ ಜುಲೈ ಮೂರನೇ ವಾರದಲ್ಲಿ ನಡೆಸಲಾಗ್ತಿದ್ದು, ಕಟ್ಟುನಿಟ್ಟಾಗಿ ನಡೆಸಲು, ಅಧಿಕಾರಿಗಳು ಸಿಬ್ಬಂದಿ ವರ್ಗದ ಜವಾಬ್ದಾರಿಗಳ ಮಾರ್ಗಸೂಚಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿಸಿದೆ. ಪರೀಕ್ಷೆ ನಡೆಸಲು ಜಿಲ್ಲಾ ಉಪನಿರ್ದೇಶಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರ ಹಾಗೂ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ತಿಳಿಸಲಾಗಿದೆ.

ಕೋವಿಡ್ ಹಿನ್ನಲೆ, ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಲು, ಒಂದು ಡೆಸ್ಕ್ ಗೆ ಒಂದೇ ವಿದ್ಯಾರ್ಥಿಯಂತೆ, ಕೊಠಡಿಗೆ ಕನಿಷ್ಠ 12 ವಿದ್ಯಾರ್ಥಿಗಳಂತೆ, ಪ್ರತೀ ಕೇಂದ್ರಕ್ಕೆ ಕನಿಷ್ಠ 100 ವಿದ್ಯಾರ್ಥಿಗಳಂತೆ, ಶಾಲೆಯ ಕೊಠಡಿಗಳ ಲಭ್ಯತೆ ಆಧರಿಸಿ ಕ್ಲಸ್ಟರ್ ಸಹಿತ/ಕ್ಲಸ್ಟರ್ ರಹಿತ ಪರೀಕ್ಷಾ ಕೇಂದ್ರ ರಚಿಸಲಾಗಿದೆ. ಹೀಗಾಗಿ‌ ಮಕ್ಕಳಿಗೆ ಯಾವುದೇ‌ ಕೊರತೆಯಾಗದಂತೆ ಆಸನ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಪೀಠೋಪಕರಣಗಳ ಕೊರತೆಯಿದ್ದಲ್ಲಿ ಇತರ ಶಾಲೆಗಳಿಂದ ಪಡೆಯಬಹುದು, ಆದರೆ ಯಾವುದೆ ವಿಧವಾದ ಸಾಗಾಣಿಕೆ ವೆಚ್ಚ, ಬಾಡಿಗೆ ಕೊಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪರೀಕ್ಷಾ ಅವಧಿಯಲ್ಲಿ ಅಭ್ಯರ್ಥಿಯ ಮೊಬೈಲ್​ನಿಂದ ವಾಟ್ಸ್ಯಾಪ್ ಅಥವಾ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಶ್ನೆಪತ್ರಿಕೆ ಹರಿದಾಡಿದರೆ ಸಂಬಂಧಿಸಿದ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರನ್ನು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು, ಉಪಮುಖ್ಯ ಅಧೀಕ್ಷಕರನ್ನು ಜವಾಬ್ದಾರರನ್ನಾಗಿ ಮಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮೊದಲೇ ಸೋರಿಕೆ ಆದಲ್ಲಿ ಕಸ್ಟೋಡಿಯನ್, ಸ್ಥಾನಿಕ ಜಾಗೃತದಳದ ಅಧಿಕಾರಿ, ಕೇಂದ್ರದ ಮುಖ್ಯ ಅಧೀಕ್ಷಕರನ್ನು ಹೊಣೆ ಮಾಡಲಾಗುವುದು.

ಪ್ರಶ್ನೆ ಪತ್ರಿಕೆಗಳನ್ನು ಸಾಗಾಣಿಕೆ‌ ಹೇಗೆ ಮಾಡಬೇಕು, ವಾಹನದಲ್ಲಿ ಯಾರು ಯಾರು ಇರಬೇಕು, ಪೊಲೀಸ್ ಎಸ್ಕಾರ್ಟ್ ಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ.

ಖಾಸಗಿ ಪರೀಕ್ಷೆ ಕೇಂದ್ರಗಳಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಪರೀಕ್ಷಾ ಮುಖ್ಯ ಅಧೀಕ್ಷಕರನ್ನಾಗಿ ನೇಮಕಾತಿ ಮಾಡುವುದು ಕಡ್ಡಾಯ. ಇದಲ್ಲದೆ ಉಪನಿರ್ದೇಶಕರನ್ನು ಜಿಲ್ಲಾ ವೀಕ್ಷಕರನ್ನಾಗಿ ನೇಮಕಾತಿ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಅಧಿಕಾರಿಗಳು, ಸಿಬ್ಬಂದಿಗಳ ನೇಮಕಾತಿ ಮಾಡುವ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ.

-ಇದರ ಜೊತೆಗೆ ಎರಡು ದಿನ ನಡೆಯುವ ಪರೀಕ್ಷೆಗೆ ಸಂಬಂಧಿಸಿದಂತೆ ಅಂಕಗಳ ವಿವರ, ಭಾಷೆಗಳ ವಿವರವನ್ನು, ಪ್ರವೇಶಪತ್ರ ಕುರಿತಂತೆ ವಿವರಿಸಲಾಗಿದೆ.

ಪರೀಕ್ಷಾ ದಿನದ ಬೆಲ್ ಮಾಡುವ ಸಮಯ

ಪ್ರಥಮ ಲಾಂಗ್ ಬೆಲ್- ಬೆ. 10.15 - ಪರೀಕ್ಷಾರ್ಥಿ ಕೊಠಡಿಯಲ್ಲಿ ಆಸೀನ

ಎರಡನೇ ಬೆಲ್- ಬೆ.10.25 - ಪ್ರಶ್ನೆಪತ್ರಿಕೆ ಲಕೋಟೆ ಕೊಠಡಿಗೆ ವಿತರಣೆ

ಮೂರನೇ ಬೆಲ್ - ಬೆ.10.30- ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಣೆ

ನಾಲ್ಕನೇ ಬೆಲ್- ಬೆ.11-30- ಪರೀಕ್ಷಾ ಅವಧಿಯ ಒಂದು ಗಂಟೆ ಅವಧಿ ಮುಕ್ತಾಯಕ್ಕೆ ಬೆಲ್

ಐದನೇ ಬೆಲ್ - ಮ.12-30 - ಪರೀಕ್ಷಾ ಅವಧಿಯ ಎರಡು ಗಂಟೆ ಅವಧಿ ಮುಕ್ತಾಯದ ಬಗ್ಗೆ

ಆರನೇ ಬೆಲ್- ಮ.1.25 ಗಂಟೆಗೆ - ಪರೀಕ್ಷಾ ಸಮಯದ ಅಂತಿಮ ಐದು ನಿಮಿಷ ಮುಂಚೆ

ಅಂತಿಮ ಲಾಂಗ್ ಬೆಲ್- ಮ.1.30 ಕ್ಕೆ- ಒ.ಎಂ.ಆರ್ ಅಭ್ಯರ್ಥಿಗಳಿಂದ ವಾಪಸ್ ಪಡೆಯುವುದು.

ಓದಿ: ಮುಂಬೈನಲ್ಲಿ ಬೀಡುಬಿಟ್ಟಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಗೋಕಾಕಿನಲ್ಲಿ ಪ್ರತ್ಯಕ್ಷ

Last Updated : Jun 24, 2021, 8:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.