ETV Bharat / state

ರಿಯಲ್ ಎಸ್ಟೇಟ್‌ ಏಜೆಂಟ್‌ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಅನ್ಸರ್ ಪಾಷಾನನ್ನು ಜೂನ್ 11ರಂದು ಹತ್ಯೆ ಮಾಡಲಾಗಿತ್ತು.

author img

By

Published : Jun 20, 2020, 9:30 PM IST

real estate agent ansar
ಅನ್ಸರ್‌

ಬೆಂಗಳೂರು: ಸುದ್ದಗುಂಟೆ ಪಾಳ್ಯದಲ್ಲಿ ನಡೆದಿದ್ದ ಅನ್ಸರ್ ಪಾಷಾ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಿಯಲ್ ಎಸ್ಟೇಟ್‌ ಏಜೆಂಟ್‌ ಅನ್ಸರ್‌ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಜಬೀರ್, ಇಮ್ರಾನ್ ಮತ್ತು ಬಾಬಾ ಜಾನ್ ಬಂಧಿತ ಅರೋಪಿಗಳು. ಇವರು ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಅನ್ಸರ್ ಪಾಷಾನನ್ನು ಜೂನ್ 11ರಂದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು. ಜಬೀರ್, ಇಮ್ರಾನ್ ಮತ್ತು ಬಾಬಾ ಜಾನ್‌ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈ ಆರೋಪಿಗಳನ್ನು ಹತ್ಯೆಗೂ ಮುನ್ನ ಅನ್ಸರ್ ಪೊಲೀಸರಿಗೆ ಹಿಡಿದುಕೊಟ್ಟಿದ್ದನಂತೆ. ಬಳಿಕ ಅನ್ಸರ್ ತಾನೇ ಮುಂದೆ ನಿಂತು ಅರೋಪಿಗಳಿಗೆ ಜಾಮೀನನ್ನೂ ಕೊಡಿಸಿ, ಆರೋಪಿಗಳ ಬಳಿಯಿಂದ ಹಣ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ. ಈ ವಿಚಾರವಾಗಿ ಕೊಲೆಯಾಗಿರುವ ಅನ್ಸರ್ ಹಾಗೂ ಆರೋಪಿಗಳು 3 ತಿಂಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಅನ್ಸರ್ ಆರೋಪಿಗಳಿಗೆ ತನ್ನ ಲೈಸೆನ್ಸ್ ಗನ್‌ ತೋರಿಸಿ ಹೆದರಿಸಿ ಕಳುಹಿಸಿದ್ದನಂತೆ.

ಇದರಿಂದ ಜಿದ್ದು ಬೆಳೆಸಿಕೊಂಡಿದ್ದ ಅರೋಪಿಗಳು ರಂಜಾನ್ ಸಮಯದಲ್ಲಿ ಅನ್ಸರ್ ಕೊಲೆ ನಡೆಸಲು ಯತ್ನಿಸಿ ಸುಮ್ಮನಾಗಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಜೂನ್ 11ರ ಸಂಜೆ ಒಂಟಿಯಾಗಿ ಸಿಕ್ಕಿದ್ದ ಅನ್ಸರ್​ ಮೇಲೆ ಗುರಪ್ಪನಪಾಳ್ಯ ಮಸೀದಿ ಸಮೀಪ ದಾಳಿ ಮಾಡಿ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿ ಆಗಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎಸಿಪಿ ಸುಧೀರ್ ಹೆಗ್ಡೆ ಮತ್ತು ತಂಡ ಸದ್ಯ ಮೂವರು ಪ್ರಮುಖ ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.