ETV Bharat / state

ಜಾತಿಗಣತಿಗೆ ವೀರಶೈವ ಲಿಂಗಾಯತ ಮಹಾಸಭಾ, ಒಕ್ಕಲಿಗರ ವಿರೋಧವಿದೆ: ಶಾಮನೂರು ಶಿವಶಂಕರಪ್ಪ - CASTE CENSUS

ಜಾತಿಗಣತಿ ವರದಿ ಜಾರಿಯನ್ನು ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಾವೆಲ್ಲರೂ ವಿರೋಧಿಸುತ್ತೇವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ (ETV Bharat)
author img

By ETV Bharat Karnataka Team

Published : Oct 7, 2024, 5:58 PM IST

ದಾವಣಗೆರೆ: "ಜಾತಿಗಣತಿಯನ್ನು ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ನಾವೆಲ್ಲರೂ ವಿರೋಧ ಮಾಡಿದ್ದೇವೆ. ಅದರಂತೆ ಒಕ್ಕಲಿಗರೂ ವಿರೋಧಿಸಿದ್ದಾರೆ. ಇದನ್ನೂ ಮೀರಿ ವರದಿ ಜಾರಿ ಮಾಡಿದರೆ ಮುಂದೆ ನೋಡಿಕೊಳ್ಳೋಣ" ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ನಗರದಲ್ಲಿಂದು ಖಾಸಗಿ ಬಸ್ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರ ಪತನವಾದರೂ ಜಾತಿಗಣತಿ ವರದಿ ಬಹಿರಂಗಪಡಿಸಬೇಕು ಎಂದು ಹಿಂದುಳಿದ ವರ್ಗಗಳ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, "ಅವರು ಏನಾದರೂ ಮಾತನಾಡಲಿ, ಜಾತಿಗಣತಿಗೆ ನಮ್ಮ ವಿರೋಧವಿದೆ" ಎಂದು ಸ್ಪಷ್ಟಪಡಿಸಿದರು.

ಶಾಮನೂರು ಶಿವಶಂಕರಪ್ಪ (ETV Bharat)

ಇದನ್ನೂ ಓದಿ: ಜಾತಿ ಸಮೀಕ್ಷೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.