ಬೆಂಗಳೂರು: ಜಾತಿಗಣತಿ ವರದಿ ಜಾರಿ ಬಗ್ಗೆ ಬಿ.ಕೆ.ಹರಿಪ್ರಸಾದ್ ಅವರು ಹೇಳಿದ್ದು ಸರಿಯಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ನಾವು ಪ್ರಣಾಳಿಕೆಯಲ್ಲೂ ಹೇಳಿದ್ದೆವು. ರಾಹುಲ್ ಗಾಂಧಿಯವರೂ ಹೇಳ್ತಾನೇ ಇದ್ದಾರೆ. ಈ ವಿಷಯ ಸದನಕ್ಕೆ ಬಂದರೆ ಮುಕ್ತವಾಗಿ ಚರ್ಚಿಸಬಹುದು. ನಮ್ಮ ಸಂಖ್ಯೆ ಕಡಿಮೆ ಅನ್ನೋ ಕಾರಣಕ್ಕೆ ವಿರೋಧ ಇರಬಹುದು. ಇನ್ನೂ ಈ ವಿಚಾರ ಸದನದಲ್ಲಿ ಚರ್ಚೆಗೇ ಬಂದಿಲ್ಲವಲ್ಲ. ಚರ್ಚೆಯಾದ ಬಳಿಕ ಅಂತಿಮ ರೂಪ ಕೊಡಬೇಕು ಎಂದರು.
ವಿಜಯೇಂದ್ರ ಭೇಟಿ: ಬಿ.ವೈ.ವಿಜಯೇಂದ್ರ ನನ್ನನ್ನು ಭೇಟಿ ಮಾಡಿದ್ದರು. ಶಿಕಾರಿಪುರದ ರಸ್ತೆ ಬಗ್ಗೆ ಮಾತುಕತೆ ನಡೆಸಿದರು. ಕ್ಷೇತ್ರದ ಏನಾದರೂ ಸಮಸ್ಯೆಗಳು ಇರುತ್ತವೆ. ಅದಕ್ಕೆ ಅವರು ಬಂದಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ತಿಳಿಸಿದರು.
ಪದೇ ಪದೆ ದಲಿತ ಸಚಿವರ ಭೇಟಿ ವಿಚಾರವಾಗಿ ಹೈಕಮಾಂಡ್ಗೆ ಮಾಹಿತಿ ಹೋಗುತ್ತೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದ ವಿರುದ್ಧವಾಗಿ ನಾವೇನು ನಡೆದುಕೊಳ್ಳಲ್ಲ. ನಾವ್ಯಾಕೆ ಭಯಪಡೋಣ?. ನಡೆದಿದ್ದರೆ ಬೇಕಾದರೆ ಮಾತನಾಡಲಿ ಎಂದು ಹೇಳಿದರು.
ಇದನ್ನೂ ಓದಿ: ಜಾತಿ ಸಮೀಕ್ಷೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ: ಸಿಎಂ ಸಿದ್ದರಾಮಯ್ಯ - Caste Census