ETV Bharat / state

ಕೊನೆಗೂ ರಾಜ್ಯಕ್ಕೆ ಬರಲಿದೆ ರಾಪಿಡ್ ಟೆಸ್ಟ್ ಕಿಟ್​​: 12,400 ಕಿಟ್​​ಗಳು ಕರ್ನಾಟಕದ ಪಾಲಿಗೆ

ಕರ್ನಾಟಕಕ್ಕೆ ಒಟ್ಟು 12,400 ರಾಪಿಡ್​​ ಟೆಸ್ಟ್​​ ಕಿಟ್​ಗಳು ಇಂದು ರಾತ್ರಿ ಬರುತ್ತಿವೆ. ನಾಳೆಯಿಂದಲೇ ಇವುಗಳ ಬಳಕೆಯಾಗಲಿದೆ ಅಂತ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.‌

ಕೊನೆಗೂ ರಾಜ್ಯಕ್ಕೆ ಬರಲಿದೆ ರಾಪಿಡ್ ಟೆಸ್ಟ್ ಕಿಟ್

author img

By

Published : Apr 17, 2020, 8:41 PM IST

ಬೆಂಗಳೂರು: ಅಂತೂ ಇಂತೂ ರಾಜ್ಯಕ್ಕೆ ಇಂದು ರಾತ್ರಿ ರಾಪಿಡ್ ಟೆಸ್ಟ್ ಕಿಟ್​​​​ಗಳು ಬರಲಿವೆ. ಐಸಿಎಂಆರ್​ ಒಟ್ಟು 6,50,000 ರಾಪಿಡ್ ಟೆಸ್ಟ್ ಕಿಟ್​ಗಳನ್ನು ನೀಡುತ್ತಿದ್ದು, ಇದರಲ್ಲಿ 12,400 ಕಿಟ್​​ಗಳನ್ನು ಕರ್ನಾಟಕಕ್ಕೆ ನೀಡಲಾಗ್ತಿದೆ.

ನಾಳೆಯಿಂದಲೇ ಇವುಗಳ ಬಳಕೆಯಾಗಲಿದೆ ಅಂತ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.‌ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣ ಪ್ರಕರಣಗಳು ಪ್ರಾರಂಭದಲ್ಲಿಯೇ ವರದಿಯಾದಲ್ಲಿ, ಚಿಕಿತ್ಸೆ ಹಾಗೂ ಜೀವ ಉಳಿಸಲು ಸಹಕಾರಿಯಾಗಲಿದೆ. ಈ ಕಿಟ್​​ಗಳಿಂದ ಹೆಚ್ಚು ಉಪಯೋಗವಾಗಲಿದೆ ಎಂದರು.

ರೋಗಿಗಳು ರೋಗ ಲಕ್ಷಣ ಕಂಡು ಬಂದ ಮೇಲೆಯೂ ಸರಾಸರಿ 4 ದಿನದ ನಂತರ ಬರುತ್ತಿದ್ದಾರೆ. ಆದ್ದರಿಂದ ಜನರು ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ: ಐಸಿಎಂಆರ್ ಅನುಮತಿಗೆ ಕಾಯುತ್ತಿರುವ ಸರ್ಕಾರ

ಇನ್ನು ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಚಿಂತಿಸಿದ್ದು, ಇದಕ್ಕಾಗಿ ಐಸಿಎಂಆರ್ ಅನುಮತಿಗೆ ರಾಜ್ಯ ಸರ್ಕಾರ ಕಾಯುತ್ತಿದೆ. ಜ್ವರ, ಶೀತ, ಉಸಿರಾಟದ ತೊಂದರೆ ಇರುವವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕಾಗಿ ಪ್ರತ್ಯೇಕ ಆ್ಯಪ್​​​ ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನು ಯಾವುದೇ ಪ್ರಕರಣ ವರದಿಯಾಗದೇ ಇರುವ ಜಿಲ್ಲೆಗಳಲ್ಲಿಯೂ ಈ ರೋಗ ಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಎರಡು ಹಾಗೂ ಪ್ರತಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಐಸಿಎಂಆರ್ ಮಾರ್ಗಸೂಚಿ ಹೊರಡಿಸಿದ್ದು, ಈ ನಿಟ್ಟಿನಲ್ಲಿ ಏಪ್ರಿಲ್ ಅಂತ್ಯದೊಳಗೆ ಇನ್ನೂ 10 ಪ್ರಯೋಗಾಲಯಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ.

ಇನ್ನು ಲ್ಯಾಬ್‌ನಲ್ಲಿ ಈವರೆಗೆ 17 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಪ್ರಾರಂಭದಲ್ಲಿ ದಿನಕ್ಕೆ 500 ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ದಿನಕ್ಕೆ 2,000 ಪರೀಕ್ಷೆ ನಡೆಸಲಾಗುತ್ತಿದೆ ಅಂತ ಮಾಹಿತಿ ನೀಡಿದರು.

ಕೋವಿಡ್ -19 ಪರೀಕ್ಷೆಯಲ್ಲಿ ರಾಜ್ಯವು ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಸರಾಸರಿ 43.56 ಪರೀಕ್ಷೆಗಳಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ. ಮೊದಲ ಸ್ಥಾನದಲ್ಲಿರುವ ಕೇರಳದಲ್ಲಿ 44.16 ಪರೀಕ್ಷೆಗಳಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ. ಸರ್ಕಾರದಿಂದ ಖಾಸಗಿ ಆರೋಗ್ಯ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಸ್ಯಾಂಪಲ್‌ ಕಳುಹಿಸಿದ ಸಂದರ್ಭದಲ್ಲಿ ಪ್ರತಿ ಸ್ಯಾಂಪಲ್​​ಗೆ ರೂ. 2,250 ಗರಿಷ್ಠ ದರವನ್ನು ವಿಧಿಸಬೇಕು ಎಂದು ‌ಆದೇಶಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.