ETV Bharat / state

ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಬಿಬಿಎಂಪಿ ವಿರುದ್ಧ ಬೀದಿಗಿಳಿದ ಜನ - ಕಸ್ತೂರಿನಗರ ಕ್ಷೇಮಾಭಿವೃದ್ಧಿ ಸಂಘ

ರಸ್ತೆ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಬಿಎಂಪಿ ವಿರುದ್ಧ ಕಸ್ತೂರಿನಗರ ನಿವಾಸಿಗಳು ರಸ್ತೆ ತಡೆದು ಪ್ರತಿಭಟಿಸಿದರು.

ರಸ್ತೆ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಬಿಎಂಪಿ ವಿರುದ್ಧ ಆಕ್ರೋಶ
author img

By

Published : Sep 24, 2019, 9:04 AM IST

ಬೆಂಗಳೂರು: ಹದಗೆಟ್ಟ ರಸ್ತೆಗಳನ್ನು ದುರಸ್ತಿ ಸೇರದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಬಿಎಂಪಿ ವಿರುದ್ಧ ಕಸ್ತೂರಿನಗರ ಕ್ಷೇಮಾಭಿವೃದ್ಧಿ ಸಂಘ, ಕಸ್ತೂರಿನಗರ ಕ್ಲಬ್ ಹಾಗೂ ಕಸ್ತೂರಿನಗರ ಮಹಿಳಾ ಸಮಾಜದ ವತಿಯಿಂದ ಧಿಕ್ಕಾರ ಕೂಗಿ, ರಸ್ತೆ ತಡೆ ನಡೆಸಿದರು.

ರಸ್ತೆ ದುರಸ್ತಿಗೊಳಿಸುವಂತೆ ಬಿಬಿಎಂಪಿ ವಿರುದ್ಧ ಪ್ರತಿಭಟನೆ

ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ರಸ್ತೆ ಸರಿಪಡಿಸುವಂತೆ 2 ವರ್ಷಗಳಿಂದ ಮನವಿ ಮಾಡುತ್ತಿದ್ದರು ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ವರ್ಷಗಳ ಹಿಂದೆ 110 ಹಳ್ಳಿಗಳಿಗೆ ಕಾವೇರಿ ಪೈಪ್ ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದವರು ಮತ್ತೆ ಈ ಕಡೆ ತಲೆ ಹಾಕಿಲ್ಲವೆಂದು ಆರೋಪಿಸಿದರು.

ರಸ್ತೆ ದುರಸ್ತಿ, ಉದ್ಯಾನವನ ನವೀಕರಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ. ಅಧಿಕಾರಿಗಳು, ಪಾಲಿಕೆ ಸದಸ್ಯರು ಇದರಲ್ಲಿ ಅಕ್ರಮ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಬಿಬಿಎಂಪಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Intro:ಬೆಂಗಳೂರು

ರಸ್ತೆ ದುರಸ್ಥಿ ಮಾಡದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಅದನ್ನು ಸರಿಪಡಿಸದೆ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ಕಸ್ತೂರಿನಗರದ 80 ಅಡಿ ರಸ್ತೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ 110 ಹಳ್ಳಿಗಳಲ್ಲಿ ಕಾವೇರಿ ಪೈಪ್ ಲೈನ್ ಅಳವಡಿಕೆಗೆಂದು ಬಿಡಬ್ಲ್ಯೂ ಎಸ್ಎಸ್ಬಿಯವರು ರಸ್ತೆಗಳನ್ನು ಅಗೆದು ಪೈಪ್ಗಳನ್ನು ಅಳವಡಿಸಿ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಕಸ್ತೂರಿನಗರ ಸುತ್ತಮುತ್ತಲಿನ ಸಾರ್ವಜನಿಕರು ಓಡಾಡಲು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮೊದಲೇ ಈ ಭಾಗ ಟ್ರಾಫಿಕ್ನಿಂದ ಕೂಡಿರುತ್ತದೆ. ಅದರಲ್ಲಿ ಇದೀಗ ಅಭಿವೃದ್ಧಿ ಹೆಸರಲ್ಲಿ ರಸ್ತೆ ಅಗೆದು ಧೂಳು ಇನ್ನಷ್ಟು ಹೆಚ್ಚಾಗಿ ಆರೋಗ್ಯ ಕೆಡುವಂತಾಗಿದೆ. ಎಷ್ಟೋ ಜನ ಈ ರಸ್ತೆಯಲ್ಲಿ ಬೈಕ್ಗಳಲ್ಲಿ ಹೋಗುವಾಗ ಬಿದ್ದಿರುವ ಉದಾಹರಣೆಗಳಿವೆ. ಈ ರಸ್ತೆಯನ್ನು ದುರಸ್ತಿಗೊಳಿಸಲು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಸ್ತೂರಿನಗರ ಕ್ಷೇಮಾಭಿವೃದ್ಧಿ ಸಂಘ, ಕಸ್ತೂರಿನಗರ ಕ್ಲಬ್ ಹಾಗೂ ಕಸ್ತೂರಿನಗರ ಮಹಿಳಾ ಸಮಾಜದ ವತಿಯಿಂದ ಇಂದು ಬೆಳಗ್ಗೆ ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Body:
ಕಸ್ತೂರಿನಗರದಲ್ಲಿ ಹಲವು ಪಾರ್ಕ್ ಗಳಿವೆ, ಇಲ್ಲಿ ವಾಕಿಂಗ್ ಗೆ ಹೋಗಲು ಸಾಧ್ಯವಾಗುತ್ತಿಲ್ಲ, ಪಾರ್ಕ್ ಪಕ್ಕದಲ್ಲಿರುವ ಡ್ರೈನೆಜ್ಗಳನ್ನು ಸಹ ಕ್ಲೋಸ್ ಮಾಡಿಲ್ಲ ಇದಕ್ಕೆ ದುಡ್ಡು ರಿಲೀಸ್ ಆಗಿದ್ದರೂ ಅಧಿಕಾರಿಗಳು ತಿಂದು ಹಾಕಿದ್ದಾರೆ. ಪಾರ್ಕ್ ಮುಂದೆ ಇರುವ ಬಿಲ್ಡಿಂಗ್ ಅನ್ನು ಪಾಲಿಕೆ ಸದಸ್ಯ ಖರೀದಿಸಿ ಅಪಾರ್ಟ್ ಮೆಂಟ್ ಕಟ್ಟುತ್ತಿದ್ದಾರೆ, ಅದರ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ ಕ್ಲೋಸ್ ಮಾಡಿದ್ದಾರೆ ಇದಕ್ಕೆ ಯಾವುದೇ ರೂಲ್ಸ್ ಬರೋದಿಲ್ವ, ದಿನ ನಿತ್ಯ ಈ ರಸ್ತೆಯಲ್ಲಿ ಬೀಳುತ್ತಿದ್ದರೂ ರಸ್ತೆ ಸರಿಪಡಿಸಿಲ್ಲ ಎಷ್ಟೋ ಜನ ಈ ಸಮಸ್ಯೆಯಿಂದ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಮನೆಗಳಲ್ಲಿರುವ ಮಕ್ಕಳಿಗೆ ಧೂಳಿನಿಂದ ಆರೋಗ್ಯ ಹಾಳಾಗುತ್ತಿದೆ, ಅಧಿಕಾರಿಗಳು ಒಬ್ಬರಿಗೊಬ್ಬರ ಮೇಲೆ ಹಾಕಿಕೊಂಡು ನುಣುಚಿಕೊಳ್ಳುತ್ತಿದ್ದಾರೆ.Conclusion:ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಇಲ್ಲಸಲ್ಲದ ನೆಪಗಳನ್ನು ಹೇಳಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದು ಕಣ್ಣ ಮುಂದೆಯೇ ಇದೆ, ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರಾ ಕಾದು ನೋಡಬೇಕಿದೆ

ಬೈಟ್, ವೇಣುಗೋಪಾಲ್ ರೈ, ಕಸ್ತೂರಿನಗರ ಸಂಘದ ಸದಸ್ಯ

ಬೈಟ್, ವಿಟ್ಟುಬಾಯ್, ಸ್ಥಳೀಯರು

ಬೈಟ್, ಜಯಂತಿ, ಸ್ಥಳೀಯರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.