ETV Bharat / state

ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಪತ್ತೆ: ಕರಪತ್ರದ ಮೊರೆಹೋದ ಪೊಲೀಸರು

ಯುವತಿಯ ಮೇಲೆ ಆ್ಯಸಿಡ್ ದಾಳಿಯನ್ನು ಮಾಡುವ ಮುನ್ನವೇ ದಾಳಿಕೋರ ನಾಗೇಶ್ ಹಲವು ಪ್ಲಾನ್ ಮಾಡಿಕೊಂಡಿರುವುದು ಪೊಲೀಸರಿಗೆ ತನಿಖೆಯ ವೇಳೆ ತಿಳಿದು ಬಂದಿದೆ.

author img

By

Published : May 2, 2022, 7:00 PM IST

ಆರೋಪಿ ನಾಗೇಶ್
ಆರೋಪಿ ನಾಗೇಶ್

ಬೆಂಗಳೂರು: ಸುಂಕದ ಕಟ್ಟೆಯಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿಯಾಗಿ ಆರು ದಿನಗಳು ಕಳೆದಿವೆ. ಆದರೆ, ಯುವತಿಯನ್ನು ನರಳುವಂತೆ ಮಾಡಿದ ಕಿರಾತಕ ಮಾತ್ರ ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಾ ಎಸ್ಕೇಪ್ ಆಗಿದ್ದಾನೆ. ಆರೋಪಿಯ ಬಂಧನಕ್ಕೆ 10 ತಂಡಗಳನ್ನು ರಚಿಸಿ ಪಶ್ಚಿಮ ವಿಭಾಗದ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದರೂ ಸಹ ಆರೋಪಿ ನಾಗೇಶ್ ಪತ್ತೆಯಾಗಿಲ್ಲ. ಈಗ ಆ್ಯಸಿಡ್ ನಾಗನ ಪತ್ತೆಗೆ ಪೊಲೀಸರು ಕರಪತ್ರದ ಮೊರೆಹೋಗಿದ್ದಾರೆ.

police
ಆಸಿಡ್​ ದಾಳಿ ನಡೆಸಿದ ಆರೋಪಿ ಪತ್ತೆಗೆ ಕರಪತ್ರದ ಮೊರೆ ಹೋದ ಪೊಲೀಸರು

ತಮಿಳುನಾಡಿನಲ್ಲಿ ಆರೋಪಿ ನಾಗೇಶ್​ಗಾಗಿ ತೀವ್ರ ಶೋಧ : ಏಪ್ರಿಲ್ 27 ರಂದು ಯುವತಿ ಮುತ್ತೂಟ್ ಫಿನ್ ಕಾರ್ಪ್ ಗೆ ಕೆಲಸಕ್ಕೆ ಹೋಗುವ ವೇಳೆ ಕಂಪನಿಯ ಮೆಟ್ಟಿಲುಗಳ ಮೇಲೆಯೇ ನಾಗೇಶ್ ಆ್ಯಸಿಡ್ ದಾಳಿಯನ್ನು ಮಾಡಿದ್ದ. ಆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ತಮಿಳುನಾಡಿಗೆ ಆಗಿಂದಾಗ್ಗೆ ಹೋಗಿ ಬರುತ್ತಿದ್ದ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಪ್ರಾಥಮಿಕ ತನಿಖೆಯ ವೇಳೆಯಲ್ಲಿಯೂ ನಾಗೇಶ್ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಟೆಕ್ನಿಕಲ್ ಸಾಕ್ಷ್ಯಾಧಾರಗಳು ಲಭಿಸಿದ್ದವು. ಹೀಗಾಗಿ, ತಮಿಳುನಾಡಿನಲ್ಲೇ ಆರೋಪಿ ಅಡಗಿರಬಹುದು ಎಂಬ ಅನುಮಾನದಲ್ಲಿ ನಾಗೇಶ್​ಗಾಗಿ ತೀವ್ರ ಹುಡುಕಾಟವನ್ನು ಪೊಲೀಸರು ಮುಂದುವರೆಸಿದ್ದಾರೆ.

ಆಂಜನೇಯ ತಿಲಕಧಾರಿ ನಾಗೇಶ್..! ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ ನಾಗೇಶ್ ಆಂಜನೇಯನ ಭಕ್ತನಾಗಿದ್ದನಂತೆ. ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಆಂಜನೇಯನ ಕುಂಕುಮವನ್ನು ಇಟ್ಟುಕೊಂಡು ಬರುತ್ತಿದ್ದನಂತೆ. ತಮಿಳುನಾಡಿನ ಆಂಜನೇಯ ದೇಗುಲಗಳಿಗೂ ಹೋಗಿ ಬರುತ್ತಿದ್ದನಂತೆ. ನಾಗೇಶ್ ಬಂಧನಕ್ಕಾಗಿ ತೆರಳಿರುವ ಪೊಲೀಸ್ ತಂಡ ಈ ವಿಚಾರವನ್ನು ಗಮನಿಸಿಕೊಂಡು ತನಿಖೆಯನ್ನು ಮಾಡುತ್ತಿದ್ದಾರೆ.

ನಾಗೇಶ್ ಎಟಿಎಂ, ಫೋನ್ ಪೇ ಗೂಗಲ್ ಪೇ ಬಳಸಿಲ್ಲ .. ನಾಗೇಶ್ ತಲೆಮರೆಸಿಕೊಂಡ ಬಳಿಕ ಆತ ಎಲ್ಲಿದ್ದಾನೆ. ಎಟಿಎಂನಲ್ಲಿ ನಗದ‌ನ್ನು ವಿಥ್ ಡ್ರಾ ಮಾಡಿದ್ದಾನೆಯೇ ಎಂದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಫೋನ್ ಪೇ ಮತ್ತು ಗೂಗಲ್ ಪೇಯನ್ನು ಬಳಸಿದ್ದಾನೆಯೇ ಎಂಬುದನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ. ಆದರೆ, ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿಯೂ ಸಿಕ್ಕಿಲ್ಲ.

ಹಣಕ್ಕಾಗಿ ಪೂರ್ವ ನಿಯೋಜಿತ ಪ್ಲಾನ್ ಮಾಡಿದ್ದ ನಾಗೇಶ್..! ಯುವತಿಯ ಮೇಲೆ ಆ್ಯಸಿಡ್ ದಾಳಿಯನ್ನು ಮಾಡುವ ಮುನ್ನವೇ ದಾಳಿಕೋರ ನಾಗೇಶ್ ಹಲವು ಪ್ಲಾನ್ ಮಾಡಿಕೊಂಡಿರುವುದು ಪೊಲೀಸರಿಗೆ ತನಿಖೆಯ ವೇಳೆ ತಿಳಿದು ಬಂದಿದೆ. ಸುಮಾರು 10 ದಿನಗಳ ಹಿಂದೆಯೇ ಪ್ಲಾನ್ ಅನ್ನು ಮಾಡಿಕೊಂಡಿರುವ ಅನುಮಾನವಿದೆ. ಸಂತ್ರಸ್ತ ಯುವತಿಯ ಮನೆಯವರು ತನ್ನೊಂದಿಗೆ ಮದುವೆ ಮಾಡಿಕೊಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಆ್ಯಸಿಡ್ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗ್ತಿದೆ.

ತನ್ನ ಗಾರ್ಮೆಂಟ್ಸ್​ ಅನ್ನು ಖಾಲಿ ಮಾಡುವ ಸಲುವಾಗಿ ಸ್ಟಾಕ್ಅನ್ನು ಸಂಪೂರ್ಣವಾಗಿ ಮಾರಿದ್ದಾನೆ. ವರ್ತಕರೊಬ್ಬರಿಗೆ ಒಂದು ಲಕ್ಷಕ್ಕೆ ಸ್ಟಾಕ್ ಅನ್ನು ಮಾರಿ ನಗದು ಹಣವನ್ನು ಪಡೆದಿದ್ದಾನೆ. ಇದೇ ದುಡ್ಡಲ್ಲಿ ಊರೂರು ಸುತ್ತುತ್ತಿರುವ ಬಗ್ಗೆ ಪೊಲೀಸರಿಗೆ ಅನುಮಾನವಿದೆ. ಇದರಿಂದಲೇ ಆತ ಎಟಿಎಂ ಹಾಗೂ ಆನ್​ಲೈನ್ ಹಣಕಾಸಿನ ವ್ಯವಹಾರ ನಡೆಸುತ್ತಿಲ್ಲ ಎಂದು ತಿಳಿದು ಬಂದಿದೆ.

ನಾಗೇಶ್​ನ ಫೋನ್ ಹೊಸಕೋಟೆಯಲ್ಲಿ ಪತ್ತೆ.. ನಾಗೇಶ್ ಬೆಂಗಳೂರು ಬಿಡುವ ಮುನ್ನ ಹೊಸಕೋಟೆ ಟೋಲ್ ಬಳಿ ಮೊಬೈಲ್ ಬಿಸಾಕಿದ್ದ. ಮೊಬೈಲ್ ಸ್ವಿಚ್ ಆಫ್ ಆದ ರೀತಿಯಲ್ಲಿ ದಾರಿ ಹೋಕರೊಬ್ಬರಿಗೆ ಮೊಬೈಲ್ ಸಿಕ್ಕಿದೆ. ಅವರು ಆನ್ ಮಾಡಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಪತ್ತೆಮಾಡಿ ವಿಚಾರಿಸಿದಾಗ ಮೊಬೈಲ್ ಬಿಸಾಕಿ ಹೋಗಿರುವುದು ಬೆಳಕಿಗೆ ಬಂದಿದೆ.

ಎರಡು ದಿನದ ಹಿಂದೆಯೇ ಆರೋಪಿ ಪತ್ತೆ ಮಾಡುವುದಾಗಿ ಹೇಳಿದ್ದ ಕಮಿಷನರ್.. ಈ ಬಗ್ಗೆ ಎರಡು ದಿನದ ಹಿಂದೆಯೇ ಮಾತನಾಡಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಅವರು, ಸಂಜೆಯೊಳಗೆ ಆರೋಪಿ ನಾಗೇಶ್​ನನ್ನು ಬಂಧಿಸುವುದಾಗಿ ಹೇಳಿದ್ದರು. ಆದರೆ, ಪೊಲೀಸರಿಗೆ ಈವರೆಗೂ ನಾಗೇಶ್ ಪತ್ತೆಯಾಗಿಲ್ಲ. ನಾಗೇಶ್ ಪ್ರೋಫೆಶನಲ್ ಅಫೆಂಡರ್ ಆಗದಿದ್ದರೂ, ಆತನನ್ನು ಬಂಧಿಸುವುದಕ್ಕೆ ಬೆಂಗಳೂರು ಪೊಲೀಸರಿಗೆ ಇಷ್ಟೊಂದು ಸಮಯ ಬೇಕಿತ್ತಾ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಆ್ಯಸಿಡ್ ನಾಗನ ಪತ್ತೆಗೆ ಕರಪತ್ರದ ಮೊರೆಹೋದ ಪೊಲೀಸರು.. ಯುವತಿಗೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಹಳೆ ಪದ್ಧತಿ ಹಾದಿ ಹಿಡಿದಿದ್ದಾರೆ. ಯಾವುದೇ ಫೋನ್ ಬಳಸದ ನಾಗೇಶ್ ತನ್ನ ಅಕೌಂಟ್ ಕೂಡ ಯೂಸ್ ಮಾಡುತ್ತಿಲ್ಲ. ಈ ಹಿನ್ನೆಲೆ ಪೊಲೀಸರು ನಾಗೇಶನ ಫೋಟೊ ಪ್ರಿಂಟ್ ಮಾಡಿ ಕರಪತ್ರ ಹೊರಡಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಕರ ಪತ್ರ ಮುದ್ರಿಸಿ ಎಲ್ಲೆಡೆ ಹಂಚಿಕೆ ಮಾಡಿದ್ದಾರೆ. ಆ್ಯಸಿಡ್ ನಾಗನ ಮೂಲ ಫೋಟೋ ಹಾಗೂ ಶೇವ್ ಮಾಡಿರುವ ಫೋಟೋ ಸೇರಿ ವಿವಿಧ ರೀತಿಯ ಫೋಟೋ ಮುದ್ರಿಸಿ ಕರಪತ್ರ ಹಂಚುತ್ತಿದ್ದಾರೆ.

ಓದಿ: ಬೆಳಗಾವಿ ರಾಜಕಾರಣಿಗಳು, ಅಧಿಕಾರಿಗಳು ಮರಾಠಿ ಏಜೆಂಟರು, ಮಹಾರಾಷ್ಟ್ರಕ್ಕೆ ಒಂದು ಅಂಗುಲ ಜಾಗವೂ ಕೊಡಲ್ಲ.. ವಾಟಾಳ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.