ETV Bharat / state

ಪಿಸ್ತೂಲ್ ಮಾರಾಟದಲ್ಲಿ ತೊಡಗಿದ್ದ ಮಹಾರಾಷ್ಟ್ರ ಮೂಲದ‌ ಆರೋಪಿ ಅಂದರ್​

ಬೆಂಗಳೂರಲ್ಲಿ ಪಿಸ್ತೂಲ್ ಮಾರಾಟದಲ್ಲಿ ತೊಡಗಿದ್ದ ಮಹಾರಾಷ್ಟ್ರ ಮೂಲದ‌ ಆರೋಪಿಯನ್ನು ಬಂಧಿಸಲಾಗಿದೆ. ಈತ ರೈಲು ಮೂಲಕ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ.

author img

By

Published : Aug 25, 2022, 5:07 PM IST

ಪಿಸ್ತೂಲ್ ಮಾರಾಟದಲ್ಲಿ ತೊಡಗಿದ್ದ ಮಹಾರಾಷ್ಟ್ರ ಮೂಲದ‌ ಆರೋಪಿ ಅಂದರ್​
ಪಿಸ್ತೂಲ್ ಮಾರಾಟದಲ್ಲಿ ತೊಡಗಿದ್ದ ಮಹಾರಾಷ್ಟ್ರ ಮೂಲದ‌ ಆರೋಪಿ ಅಂದರ್​

ಬೆಂಗಳೂರು: ರಾಜಧಾನಿಯಲ್ಲಿ ಪಿಸ್ತೂಲ್ ಮಾರಾಟದಲ್ಲಿ ತೊಡಗಿದ್ದ ಮಹಾರಾಷ್ಟ್ರ ಮೂಲದ‌ ಆರೋಪಿಯನ್ನು‌ ದೇವರಜೀವನಹಳ್ಳಿ ಪೊಲೀಸರು ಬಂಧಿಸಿದ್ದಾರೆ‌. ನಾಗಪುರ ಮೂಲದ ಬಂಧಿತ ನಿಲೇಶ್ ನಾವರೆ ಬಂಧಿತ ಆರೋಪಿಯಾಗಿದ್ದು, ಈತನಿಂದ‌ ಎರಡು ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿಜಯ್ ಪನ್ನೂರು ಹೆಸರಿನ ವ್ಯಕ್ತಿ ನಾಡ ಪಿಸ್ತೂಲ್ ಪೂರೈಕೆ ಮಾಡುವುದಕ್ಕೆ ಬುಕ್‌ ಮಾಡಿದ್ದ. ಇದರಂತೆ ನಿಲೇಶ್ ಮುಂಬೈನಲ್ಲಿ‌ ಭವೇಶ್ ಎಂಬಾತನಿಂದ ಪಿಸ್ತೂಲ್ ಖರೀದಿಸಿ ರೈಲು ಮೂಲಕ ನಿನ್ನೆ ಯಶವಂತಪುರ ರೈಲ್ವೆ ಠಾಣೆಗೆ ಬಂದಿಳಿದಿದ್ದ.‌ ಅಲ್ಲಿಂದ ಡಿ ಜೆ‌ ಹಳ್ಳಿಯ ಅಂಬೇಡ್ಕರ್ ಆಸ್ಪತ್ರೆ ಬಳಿ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ವರ್ತಿಸಿದ್ದ. ಮಾಹಿತಿ ಆಧರಿಸಿ ಕಾರ್ಯಾಚರಣೆ‌ ನಡೆಸಿದ ಪೊಲೀಸರು ನಿಲೇಶ್​​ನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬ್ಯಾಗ್ ನಲ್ಲಿ ಎರಡು ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳು ಇರುವುದು ಗೊತ್ತಾಗಿದೆ.

ವಿಜಯ್ ಪನ್ನೂರ್ ಹೆಸರಿನ ವ್ಯಕ್ತಿಯೋರ್ವ ಪಿಸ್ತೂಲ್ ಖರೀದಿಗೆ ಮುಂದಾಗಿದ್ದ ಎಂಬ ವಿಚಾರ ಗೊತ್ತಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಲು ಹೆತ್ತವರ ಆಸ್ತಿ ಮೇಲೆ ಕಣ್ಣು: ತಂದೆ - ತಾಯಿಗೆ ಇಲಿಪಾಷಾಣ ಬೆರೆಸಿದ ಚಹಾ ನೀಡಿದ ಮಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.