ETV Bharat / state

Bengaluru crime: ಮನೆಯಲ್ಲಿ ಗಂಡು, ರಸ್ತೆಯಲ್ಲಿ ಹೆಣ್ಣು.. ಐಷಾರಾಮಿ ಜೀವನಕ್ಕಾಗಿ ವೇಷ ಧರಿಸಿದ್ದ ಆರೋಪಿ ಅಂದರ್​

ಐಷಾರಾಮಿ ಜೀವನಕ್ಕಾಗಿ ಮಂಗಳಮುಖಿಯರ ವೇಷ ಹಾಕಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

person-arrested-for-begging-in-the-guise-of-a-mangalmukhi-in-bengaluru
ಮನೆಯಲ್ಲಿ ಗಂಡು..ರಸ್ತೆಯಲ್ಲಿ ಹೆಣ್ಣು... ಐಷಾರಾಮಿ ಜೀವನಕ್ಕಾಗಿ ವೇಷ ಧರಿಸಿದ್ದ ಆರೋಪಿಯ ಬಂಧನ
author img

By

Published : Jul 15, 2023, 12:33 PM IST

ಬೆಂಗಳೂರು : ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ.. ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈ ಅಗಲ ಜಾಗ ಸಾಕು, ಹಾಯಾಗಿ ಇರೋಕೆ.. ಅನ್ನೋ ಜಿಮ್ಮಿಗಲ್ಲು ಚಲನಚಿತ್ರದ ಹಾಡು ಸರಳ ಹಾಗೂ ನೆಮ್ಮದಿಯ ಬದುಕಿನ ಬಗ್ಗೆ ತಿಳಿಸುತ್ತೆ. ಆದ್ರೆ ನಮ್ಮ ಉದ್ಯಾನ ನಗರಿಯಲ್ಲೋರ್ವ ಮಹಾಶಯ ಐಷಾರಾಮಿ ಜೀವನದ ಗೀಳಿಗೆ ಬಿದ್ದು ಬಣ್ಣದ ಬಟ್ಟೆ ಮಾತ್ರ ಬದಲಿಸಿಲ್ಲ.. ತನ್ನ ಲುಕ್​ಅನ್ನೇ ಬದಲಿಸಿಕೊಂಡು ಈವರೆಗೆ ಸುತ್ತಾಡಿಕೊಂಡಿದ್ದ. ಆದ್ರೆ ಈತನ ನಾಟಕ ಕೊನೆಗೂ ಬಯಲಾಗಿದೆ.

ಪುರುಷನಾಗಿದ್ದರೂ ಮಂಗಳಮುಖಿ ವೇಷ ಹಾಕುತ್ತಿದ್ದ ಚಾಲಾಕಿ.. ಹೌದು, ನಾವಿಲ್ಲಿ ಹೇಳುತ್ತಿರುವು ಮನೆಯಲ್ಲಿ ಪುರಷನಾಗಿರುತ್ತಿದ್ದ ಮತ್ತು ಬೀದಿಯಲ್ಲಿ ಹೆಣ್ಣಿನ ವೇಷ ಹಾಕುತ್ತಿದ್ದ ಚಾಲಾಕಿ ವ್ಯಕ್ತಿ ಬಗ್ಗೆ.. ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ಹಾಕುತ್ತಿದ್ದ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೆಂಡತಿ ಮಕ್ಕಳಿದ್ದರೂ ಬೀದಿಯಲ್ಲಿ ಮಂಗಳಮುಖಿ ವೇಷ ಧರಿಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯವರಿಗೆ ಗೊತ್ತಾಗದಿರಲಿ ಎಂದು ಪ್ರತ್ಯೇಕ ರೂಂ.. ಮದುವೆಯಾಗಿ ಪತ್ನಿ, ಮಕ್ಕಳಿದ್ದರೂ ಸಹ ಅಚ್ಚುಕಟ್ಟಾಗಿ ಜೀವನ ಮಾಡುವ ಬದಲು, ಐಷಾರಾಮಿ ಜೀವನದ ಗೀಳಿಗೆ ಆರೋಪಿ ಬಿದ್ದಿದ್ದ. ಹಣಕ್ಕಾಗಿ ಹೆಣ್ಣಿನ ವೇಷ ಹಾಕಿ ಭಿಕ್ಷಾಟನೆ ಮಾಡುತ್ತಿದ್ದ. ಮನೆಯಲ್ಲಿ ಈ ವಿಷಯ ಗೊತ್ತಾಗಬಾರದು ಎಂದು ಪ್ರತ್ಯೇಕವಾಗಿ ರೂಂ ಮಾಡಿಕೊಂಡಿದ್ದ. ಹಣಕ್ಕಾಗಿ ಹೆಣ್ಣಿನ ವೇಷ ಧರಿಸಿ ಮಂಗಳಮುಖಿಯರ ಸಲುಗೆ ಬೆಳೆಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ. ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ದಿನನಿತ್ಯ ಭಿಕ್ಷಾಟನೆ ಮಾಡುತ್ತಿದ್ದ, ಹಣ ಕೊಡದಿದ್ರೆ ಬೆದರಿಕೆ ಹಾಕುತ್ತಿದ್ದ.

ಶೆಡ್ ನಿರ್ಮಿಸಲು ಮುಂದಾದಾಗ ಕೃತ್ಯ ಬಯಲು : ನಾಗಸಂದ್ರ ಮೆಟ್ರೋ ನಿಲ್ದಾಣದ ಜಾಗದಲ್ಲಿ ಆರೋಪಿ ಅಕ್ರಮವಾಗಿ ಶೆಡ್ ನಿರ್ಮಿಸಲು ಮುಂದಾದಾಗ ಜುಲೈ 13ರಂದು BMRCL ಅಧಿಕಾರಿಗಳು, ಸ್ಥಳೀಯರು ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಗಲಾಟೆ ಮಾಡಿದ್ದ ಆರೋಪಿ ಸ್ಥಳೀಯ ಮಹಿಳೆಯೊಬ್ಬರ ಸೀರೆ ಎಳೆದಾಡಿ ವಿಕೃತಿ ಮೆರೆದಿದ್ದ. ಈ ವೇಳೆ ಚೇತನ್​ನನ್ನು ಹಿಡಿದ ಸ್ಥಳೀಯರು ಥಳಿಸಲು ಮುಂದಾದಾಗ ಅಸಲಿ ಕಹಾನಿ ಬಯಲಾಗಿತ್ತು. ನಂತರ ಬಾಗಲಗುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ದಾವಣಗೆರೆ ಎಸ್ಪಿ ಕಚೇರಿ ಆವರಣದಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ.. ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.