ETV Bharat / state

ರಾಜ್ಯದಲ್ಲಿ ಪ್ರಥಮ, ದ್ವಿತೀಯ PUC ಭೌತಿಕ ತರಗತಿಗಳ ಆರಂಭಕ್ಕೆ ಮುಹೂರ್ತ ಫಿಕ್ಸ್​

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಯನ್ನ ಆಗಸ್ಟ್ 18 ರಿಂದಲೇ ಶುರು ಮಾಡುವಂತೆ ಸೂಚಿಸಲಾಗಿದೆ. ಆಗಸ್ಟ್ 23 ರಿಂದ ಪ್ರಥಮ- ದ್ವಿತೀಯ ಪಿಯುಸಿಯ ಭೌತಿಕ ತರಗತಿಗಳು ಶುರುವಾಗಲಿವೆ ಎಂದು ತಿಳಿದುಬಂದಿದೆ.

Order for the start of the first PUC enrollment in the state
ರಾಜ್ಯದಲ್ಲಿ ಪ್ರಥಮ PUC ದಾಖಲಾತಿ ಪ್ರಾರಂಭಕ್ಕೆ ಆದೇಶ
author img

By

Published : Aug 10, 2021, 6:52 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಡುವೆಯೂ ಎಸ್ಎಸ್ಎಲ್​ಸಿ ಪರೀಕ್ಷೆ ಮುಗಿದು, ಫಲಿತಾಂಶವೂ ಪ್ರಕಟಗೊಂಡಿದೆ.‌ ಈಗೇನಿದ್ದರೂ ಮುಂದಿನ ಭವಿಷ್ಯಕ್ಕೆ ಅಡಿಪಾಯ ಹಾಕುವುದೊಂದೇ ಬಾಕಿ ಇದೆ. ಈ ನಿಟ್ಟಿನಲ್ಲಿ ಇದೇ ತಿಂಗಳ 23 ರಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ಆರಂಭಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರಥಮ ಪಿಯುಸಿಗೆ ದಾಖಲಾತಿ ಶುರು ಮಾಡಲು ಪದವಿಪೂರ್ವ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. 2021-22ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ದಾಖಲಾತಿಯನ್ನ ಎಸ್ಎಸ್ಎಲ್​ಸಿ ಫಲಿತಾಂಶ ಪ್ರಕಟಗೊಂಡ ಮರುದಿನದಿಂದ ಪ್ರಾರಂಭಿಸಲು ಮಾರ್ಗಸೂಚಿಯನ್ನ ತಿಳಿಸಲಾಗಿತ್ತು. ಇದೀಗ ನಿನ್ನೆ ಫಲಿತಾಂಶ ಪ್ರಕಟಗೊಂಡಿದ್ದು, ಇಂದಿನಿಂದ (ಆಗಸ್ಟ್ 10) ದಾಖಲಾತಿ ಪ್ರಾರಂಭವಾಗಿದೆ.

ದಂಡ ಶುಲ್ಕವಿಲ್ಲದೇ ದಾಖಲಾತಿ ಕೊನೆಯ ದಿನಾಂಕ ಆಗಸ್ಟ್ 31 ರ ತನಕ ಇದೆ. ವಿಳಂಬ ದಾಖಲಾತಿಯಾದರೆ 670 ರೂ. ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 1 ರಿಂದ 11ರ ತನಕ ದಾಖಲು ಆಗಬಹುದು. ಹಾಗೇ ಸೆಪ್ಟೆಂಬರ್ 13-25ರ ತನಕ ವಿಶೇಷ ದಂಡ ಶುಲ್ಕ 2,890 ರೂ. ಪ್ರಥಮ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಬಹುದು. ಈ ರೀತಿ ಸಂಗ್ರಹಿಸಿದ ಶುಲ್ಕಗಳನ್ನ ಸರ್ಕಾರ/ಇಲಾಖೆಗೆ ದಾಖಲಾತಿ ದಿನಾಂಕ‌ ಮುಗಿದ ಮಾರನೇ ಕಾರ್ಯನಿರತ ದಿನಾಂಕಕ್ಕೆ ಖಜಾನೆಗೆ ಶುಲ್ಕಗಳನ್ನ ಕಡ್ಡಾಯವಾಗಿ ಜಮೆ ಮಾಡುವಂತೆ ತಿಳಿಸಿದೆ.

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಯನ್ನ ಆಗಸ್ಟ್ 18ರಿಂದ ಶುರು ಮಾಡುವಂತೆ ಸೂಚಿಸಿದ್ದರೆ, ಆಗಸ್ಟ್ 23 ರಿಂದ ಪ್ರಥಮ- ದ್ವಿತೀಯ ಪಿಯುಸಿಯ ಭೌತಿಕ ತರಗತಿಗಳು ಶುರುವಾಗಲಿವೆ. ಈಗಾಗಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಗಳು ಶುರುವಾಗಿದ್ದು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ಆಗಸ್ಟ್ 16ರಿಂದ ತರಗತಿ ಆರಂಭವಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.