ETV Bharat / state

ಬಿಬಿಎಂಪಿಯಿಂದ ಆಪರೇಷನ್ ಕ್ವಾರಂಟೈನ್: ರಾತ್ರೋರಾತ್ರಿ 188 ಜನರ ಸ್ಥಳಾಂತರ - operation quarantine by

ಬುಧವಾರ ಬೆಳಗ್ಗೆ ಕ್ವಾರಂಟೈನ್​ನಲ್ಲಿ ಇದ್ದ ಬೊಮ್ಮನಹಳ್ಳಿ ಕೂಲಿ ಕಾರ್ಮಿಕರ ಪರೀಕ್ಷಾ ವರದಿಯಲ್ಲಿ 9ಮಂದಿಗೆ ಪಾಸಿಟಿವ್ ಬಂದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಾತ್ರೋರಾತ್ರಿ 15 ರಿಂದ 20 ಟಿಟಿ ವಾಹನಗಳಲ್ಲಿ ಕಾರ್ಮಿಕರಿದ್ದ ಕಾಲೋನಿ ನಿವಾಸಿಗಳನ್ನು ಕ್ವಾರಂಟೈನ್​ಗೆ ಶಿಫ್ಟ್ ಮಾಡಲಾಗಿದೆ.

ಸಚಿವ ಡಾ.ಸುಧಾಕರ್
ಸಚಿವ ಡಾ.ಸುಧಾಕರ್
author img

By

Published : Apr 23, 2020, 12:53 PM IST

ಬೆಂಗಳೂರು: ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆ ವಿದ್ಯಾ ಜ್ಯೋತಿ ಕಾಲೊನಿಯಲ್ಲಿ ಬಿಬಿಎಂಪಿ ಆಪರೇಷನ್ ಕ್ವಾರಂಟೈನ್ ನಡೆಸಿದೆ. ಕಳೆದ ರಾತ್ರಿ ನೂರಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್​ಗೆ ಕರೆದೊಯ್ಯಲಾಗಿದೆ.

ನಿನ್ನೆ ಬೆಳಗ್ಗೆ ಕ್ವಾರಂಟೈನ್​ನಲ್ಲಿ ಇದ್ದವರ ಪರೀಕ್ಷಾ ವರದಿಯಲ್ಲಿ 9ಮಂದಿಗೆ ಪಾಸಿಟಿವ್ ಬಂದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ 15 ರಿಂದ 20 ಟಿಟಿಗಳಲ್ಲಿ‌ ಕಾಲೋನಿ ನಿವಾಸಿಗಳನ್ನು ಕ್ವಾರಂಟೈನ್​ಗೆ ಶಿಫ್ಟ್ ಮಾಡಲಾಯಿತು. ಎಲ್ಲರೂ‌ ಕೂಡ ಕೂಲಿ ಕಾರ್ಮಿಕರಾಗಿದ್ದು, ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2:25 ರವರೆಗೂ ಬಿಬಿಎಂಪಿ ಕಾರ್ಯಾಚರಣೆ ನಡೆಸಿ ನಿವಾಸಿಗಳನ್ನು ಕ್ವಾರಂಟೈನ್​ಗೆ ಸ್ಥಳಾಂತರಿಸಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ.ಸುಧಾಕರ್​

ಪ್ರಾಥಮಿಕ ಸಂಪರ್ಕ 24, ಸೆಕೆಂಡರಿ ಕಾಂಟ್ಯಾಕ್ಟ್ 164 ಸೇರಿ ಒಟ್ಟು 188 ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಇಡೀ ವಿದ್ಯಾಜ್ಯೋತಿ ನಗರವನ್ನೇ ಖಾಲಿ ಮಾಡಿಸಲಾಗಿದೆ. ಇಂದು ಸಂಜೆಯ ಹೊತ್ತಿಗೆ ಮತ್ತಷ್ಟು ಕೊರೊನಾ ಪಾಸಿಟಿವ್ ಆಗುವ ಸಾಧ್ಯತೆಯಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಸಂಖ್ಯೆ ಆತಂಕ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, 188 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಎರಡು‌ ದಿನಗಳಲ್ಲಿ ಅವರೆಲ್ಲರ ಕೊರೊನಾ ತಪಾಸಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.