ETV Bharat / state

ಬಿಇಎಲ್​ ನಾನ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಉದ್ಯೋಗಾವಕಾಶ

ಬಿಇಎಲ್​ನಲ್ಲಿ ನಾನ್​ ಇಂಜಿನಿಯರಿಂಗ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಾಣಿಜ್ಯ ಪದವೀಧರರು ಈ ಹುದ್ದೆಗೆ ಅರ್ಹರಾಗಿದ್ದಾರೆ.

Non Engineer Jobs in BEL walk in Interview for Apprentices post

author img

By

Published : Jun 6, 2023, 12:27 PM IST

ಭಾರತ್​​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನಲ್ಲಿ (ಬಿಇಎಲ್​) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನಾನ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಒಂದು ವರ್ಷದ ಅಪ್ರೆಂಟಿಸ್​ ಹುದ್ದೆ ನೇಮಕಾತಿಗೆ ನಡೆಯಲಿದೆ. ಬೆಂಗಳೂರಿನ ಘಟಕದಲ್ಲಿ ಈ ಹುದ್ದೆಗಳು ಖಾಲಿ ಇದ್ದು, ವಾಣಿಜ್ಯ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹುದ್ದೆಗಳನ್ನು ವಾಕ್​ ಇನ್​ ಇಂಟರ್​ವ್ಯೂ ಮೂಲಕ ಆಯ್ಕೆ ನಡೆಸಲಾಗುವುದು. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಹುದ್ದೆ, ಸೇರಿದಂತೆ ಅದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರವಾದ ಮಾಹಿತಿ ಕೆಳಗಿನಂತಿದೆ.

ಹುದ್ದೆ ವಿವರ: ಕಾಮರ್ಸ್​ ವಿಭಾಗದಲ್ಲಿ ಅಂದರೆ, ಬಿಕಾಂ ಮತ್ತು ಬಿಬಿಎ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ಸಂಖ್ಯೆ ಬಗ್ಗೆ ನಿರ್ದಿಷ್ಟಗೊಳಿಸಿಲ್ಲ. ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಗೆ ಮಾತ್ರ ಹುದ್ದೆ ಆಯ್ಕೆ ನಡೆಯಲಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಮೇಲೆ ತಿಳಿಸಿದಂತೆ ಬಿಕಾಂ ಅಥವಾ ಬಿಬಿಎ ಪದವಿ ಹೊಂದಿರಬೇಕು. 1-1-2021ರಲ್ಲಿ ಅಧಿಕೃತ ವಿಶ್ವ ವಿದ್ಯಾಲಯ ಅಥವಾ ಮಂಡಳಿಯಿಂದ ಶೇ 40ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಉನ್ನತ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ. ದಕ್ಷಿಣ ರಾಜ್ಯದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಅಧಿಸೂಚನೆ
ಅಧಿಸೂಚನೆ

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18ವರ್ಷ ಮತ್ತು ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಈ ಹುದ್ದೆಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ 12,500 ರೂ. ವೇತನ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ದಿನದಂದು ಲಿಖಿತ ಪರೀಕ್ಷೆ ಮತ್ತು ಮೆರಿಟ್​ ಆಧಾರದ ಮೇಲೆ ಆಯ್ಕೆ ನಡೆಸಲಾಗುವುದು. ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಇಮೇಲ್​ ಮೂಲಕ ತಿಳಿಸಲಾಗುವುದು.

ನೇರ ಸಂದರ್ಶನ ವಿವರ: ಸೆಂಟರ್​ ಫಾರ್​ ಲರ್ನಿಂಗ್​ ಅಂಡ್​ ಡೆವೆಲಪ್​ಮೆಂಟ್​(ಸಿಎಲ್​ಡಿ), ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​​, ಜಾಲಹಳ್ಳಿ ಪೋಸ್ಟ್​, ಬೆಂಗಳೂರು- 560013. ಇಲ್ಲಿ ಜೂನ್​ 14ರಂದು ಮಧ್ಯಾಹ್ನ 1.30ಕ್ಕೆ ವಾಕ್​ ಇನ್​ ಇಂಟರ್​ವ್ಯೂ ನಡೆಯಲಿದೆ.

ವಾಕ್​ ಇನ್​ ಇಂಟರ್​ವ್ಯೂನಲ್ಲಿ ಅಭ್ಯರ್ಥಿಗಳು ತಮ್ಮ ಎಸ್​ಎಸ್​ಎಲ್​ಸಿ, ಪದವಿ ಸರ್ಟಿಫಿಕೆಟ್​ಗಳನ್ನು ಕೊಂಡೊಯ್ಯಬೇಕು. ಇದರ ಜೊತೆಗೆ ಆಧಾರ್​​ ಮತ್ತು ಜಾತಿ ಮೀಸಲು ಪ್ರಮಾಣ ಪತ್ರಗಳನ್ನು ಪ್ರಸ್ತುತ ಪಡಿಸಬೇಕಿದೆ.

ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನ ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ bel-india.in ಈ ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ: ಶಿಕ್ಷಕರ ಹುದ್ದೆಗೆ ಸಂದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.