ETV Bharat / state

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ, ರಾಜಕಾರಣ ಮಾಡುವ ಸಮಯ ಇದಲ್ಲ : ಕಟೀಲ್

ರಾಜ್ಯ ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ. ಲಾಕ್​ಡೌನ್ ಮತ್ತಷ್ಟು ಕಠಿಣ ಮಾಡುವಂತೆ ಮನವಿ ಮಾಡಿದ್ದೇವೆ. ಸಿಎಂ ನಿರ್ಧಾರ ಚೆನ್ನಾಗಿದೆ. ಆಕ್ಸಿಜನ್ ಸಮಸ್ಯೆ, ಬೆಡ್ ಕೊರತೆ ತಯಾರಿ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಎಲ್ಲ ಆಯಾಮದಲ್ಲಿಯೂ ಚರ್ಚೆ ನಡೆಸಲಾಗಿದೆ..

Nalin Kumar kateel
ನಳಿನ್ ಕುಮಾರ್ ಕಟೀಲ್
author img

By

Published : May 10, 2021, 5:51 PM IST

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇದು ರಾಜಕಾರಣ ಮಾಡುವ ಸಮಯವಲ್ಲ, ಜನರ ಪ್ರಾಣ ಉಳಿಸುವ ಕೆಲಸ ಮಾಡುವ ಸಮಯ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ: ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ..

ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಈಗ ಪಕ್ಷ, ಶಾಸಕರು, ಮಂತ್ರಿಗಳಿಗೆ ಒಂದೇ ಕೆಲಸ. ಕೇಂದ್ರ ಮತ್ತು ರಾಜ್ಯಕ್ಕೀಗ ಒಂದೇ ಕೆಲಸ, ಒಂದೇ ಗುರಿ. ಜನರ ಪ್ರಾಣ ಉಳಿಸೋದು ಮಾತ್ರ ನಮ್ಮ ಆದ್ಯತೆಯಾಗಿದೆ ಎಂದರು.

ಯಾವುದೇ ನಾಯಕತ್ವ ಬದಲಾವಣೆ‌ ಇಲ್ಲ. ಸಿಎಂ ವಿರುದ್ಧ ಯಾವುದೇ ಶಾಸಕರು ಆರೋಪ ಮಾಡಿಲ್ಲ, ಮಾಡಿದ್ದರೆ ಅವರನ್ನ ಕರೆದು ಮಾತನಾಡುತ್ತೇನೆ. ಜನರ ಸೇವೆ ಮಾಡಲು ಈಗ ಅವಕಾಶ ದೊರೆತಿದೆ. ಬಿಜೆಪಿ ವಾರ್ ರೂಮ್ ತೆಗೆದು ಕೆಲಸ ಮಾಡುತ್ತಿದೆ.

ಸರ್ಕಾರ ಅದರದ್ದೇ ಆದ ಕೆಲಸ ಮಾಡುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ರಾಜ್ಯಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ದೆಹಲಿ, ಕೇರಳ, ಮಹಾರಾಷ್ಟ್ರ‌ದಲ್ಲೂ ಕೋವಿಡ್​ ನಿಯಂತ್ರಣ ವಿಫಲವಾಗಿದೆ. ಆದರೂ ನಮ್ಮಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಕಳೆದ ಬಾರಿ ಏನು ಕ್ರಮ ಕೈಗೊಳ್ಳಲಾಗಿತ್ತು?. ಬಿಜೆಪಿ ಮತ್ತು ಸಿಎಂ ನೇತೃತ್ವದಲ್ಲಿ ಏನು ಮಾಡಲಾಗಿತ್ತು? ಅನ್ನೋ ಬಗ್ಗೆ ಚರ್ಚೆ ಮಾಡಿದ್ದೇವೆ. ಸೇವಾಹಿ ಸಂಘಟನೆ ಹೆಸರಲ್ಲಿ ಬಿಜೆಪಿ ಕೆಲಸ ಮಾಡಿದೆ.

ಔಷಧಿ, ಬೆಡ್ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎನ್ನವ ಬಗ್ಗೆ ಸಿಎಂಗೆ ಮಾಹಿತಿ ನೀಡಲು ಬಂದಿದ್ದೆ. ಅದರಂತೆ ಎಲ್ಲ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ. ಲಾಕ್​ಡೌನ್ ಮತ್ತಷ್ಟು ಕಠಿಣ ಮಾಡುವಂತೆ ಮನವಿ ಮಾಡಿದ್ದೇವೆ.

ಸಿಎಂ ನಿರ್ಧಾರ ಚೆನ್ನಾಗಿದೆ. ಆಕ್ಸಿಜನ್ ಸಮಸ್ಯೆ, ಬೆಡ್ ಕೊರತೆ ತಯಾರಿ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಎಲ್ಲ ಆಯಾಮದಲ್ಲಿಯೂ ಚರ್ಚೆ ನಡೆಸಲಾಗಿದೆ ಎಂದು ಕಟೀಲ್​ ತಿಳಿಸಿದರು.

ಓದಿ: ಮತ್ತೊಮ್ಮೆ ಮುನ್ನಲೆಗೆ ಬಂದ ನಾಯಕತ್ವ ಬದಲಾವಣೆ ಕೂಗು : ಕುತೂಹಲ ಮೂಡಿಸಿದ ಸಿಎಂ, ಕಟೀಲ್ ಭೇಟಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.