ETV Bharat / state

ಅಮೆರಿಕಾದಲ್ಲಿ 'ಕೈಲಾಸ'ವನ್ನೇ ನಿರ್ಮಿಸಿದ ನಿತ್ಯಾನಂದ! - ಅಮೇರಿಕಾದಲ್ಲಿ ಹೊಸ ರಾಷ್ಟ್ರ ನಿರ್ಮಿಸಿದ ನಿತ್ಯಾನಂದ

ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಸ್ವಾಮಿ, ಈಕ್ವೆಡಾರ್​ನಲ್ಲಿ ಖರೀದಿಸಿರುವ ದ್ವೀಪಕ್ಕೆ ಕೈಲಾಸ ಎಂದು ನಾಮಕರಣ ಮಾಡಿ, ಅದಕ್ಕೆ ಸ್ವಂತ ಧ್ವಜ, ಲಾಂಛನ ಪಾಸ್ಪೋರ್ಟ್ ಕೂಡ ಸಿದ್ದಪಡಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

nithyananda establishes his own nation
nithyananda establishes his own nation
author img

By

Published : Dec 4, 2019, 2:34 AM IST

Updated : Dec 4, 2019, 7:34 AM IST

ಬೆಂಗಳೂರು: ದೇಶಬಿಟ್ಟು ವಿದೇಶಕ್ಕೆ ಪಲಾಯನ ಮಾಡಿರುವ ಬಿಡದಿ ಆಶ್ರಮದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಲ್ಯಾಟಿನ್ ಅಮೆರಿಕಾ ಬಳಿಯಿರುವ ಈಕ್ವೆಡಾರ್​ ಬಳಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ಹೊಸ ರಾಷ್ಟ್ರ ಸ್ಥಾಪಿಸಿದ್ದಾನೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಸ್ವಾಮಿ, ಈಕ್ವೆಡಾರ್​ನಲ್ಲಿ ಖರೀದಿಸಿರುವ ದ್ವೀಪಕ್ಕೆ ಕೈಲಾಸ ಎಂದು ನಾಮಕರಣ ಮಾಡಿ, ಅದಕ್ಕೆ ಸ್ವಂತ ಧ್ವಜ, ಲಾಂಛನ ಪಾಸ್ಪೋರ್ಟ್ ಕೂಡ ಸಿದ್ದಪಡಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ಇನ್ನು www.kailaasa.org ಎಂಬ ವೆಬ್​ಸೈಟ್​ಕೂಡ ಸ್ಥಾಪಿಸಿದ್ದು, ಅದರಲ್ಲಿ ಇದೊಂದು ಹಿಂದೂ ರಾಷ್ಟ್ರ ಎಂದು ನಮೂದಿಸಲಾಗಿದೆ. ಈ ರಾಷ್ಟ್ರದಲ್ಲಿ ಉಚಿತ ವೈದ್ಯಕೀಯ, ಗುರುಕುಲದ ಶಿಕ್ಷಣ ಹಾಗೂ ಉಚಿತ ಊಟದ ವ್ಯವಸ್ಥೆ ನೀಡುವುದಾಗಿ ವೆಬ್​ಸೈಟ್​ ಪ್ರಕಟಣೆ ಹೊರಡಿಸಿದೆ. ಇದರ ಜೊತೆಗೆ ವೆಬ್​ಸೈಟ್​ನಲ್ಲಿ ಯಾವುದೇ ದೇಶದ ನಿವಾಸಿಗಳು ಹಿಂದೂ ಧರ್ಮ ಪಾಲಿಸಬೇಕಾದರೆ ಅಲ್ಲಿಗೆ ಬರಬಹುದು ಎಂದು ಉಲ್ಲೇಖಿಸಿದ್ದು, ಡೊನೇಷನ್​ ನೀಡುವಂತೆ ಕೇಳಿಕೊಳ್ಳಲಾಗಿದೆ!.

ಕೆಲ ದಿನಗಳ ಹಿಂದೆಯೇ ನಿತ್ಯಾನಂದ ಈಕ್ವೆಡಾರ್ ರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಮೂಲಗಳ ಪ್ರಕಾರ ಬಿಡದಿ ಸ್ವಾಮಿ ಭಾರತ ಬಿಟ್ಟು ಒಂದು ವರ್ಷ ಮೇಲಾಯಿತು ಎಂದು ಹೇಳುತ್ತಿವೆ. ಆದರೆ ಪಾಸ್ಪೋರ್ಟ್​ ಇಲ್ಲದ ನಿತ್ಯಾನಂದ ಹೇಗೆ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಇನ್ನು ನಿತ್ಯಾನಂದನ ಬಳಿ ಕೆಲಸ ಮಾಡಿಕೊಂಡಿದ್ದ ಸ್ಥಳೀಯರನ್ನು ವಿಚಾರಿಸಿದರೆ ಸುಮಾರು ಒಂದು ವರ್ಷದಿಂದ ನಿತ್ಯಾನಂದನನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Intro:Body:ದೇಶಬಿಟ್ಟ ನಿತ್ಯಾನಂದ ಸ್ವಂತ ದೇಶ ಸ್ಥಾಪಿಸಿದ್ದಾನೆ ಎಂದು ಶಂಕೆ

ಬೆಂಗಳೂರು: ಇತ್ತೀಚಿಗೆ ಮತ್ತೆ ಸುದ್ಧಿ ಆಗಿದ್ದ ಬಿಡದಿ ಆಶ್ರಮದ ಸ್ವಾಮಿ ನಿತ್ಯಾನಂದ ಲ್ಯಾಟಿನ್ ಅಮೇರಿಕಾ ಬಳಿಯಿರುವ ಈಕ್ವೆಡಾರ್ ರಾಷ್ಟ್ರದ ಬಳಿ ದ್ವೀಪ ಒಂದರಲ್ಲಿ ಹೊಸ ರಾಷ್ಟ್ರ ಸ್ಥಾಪಿಸಿದ್ದಾನೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಸ್ವಾಮಿ, ಈಕ್ವೆಡಾರ್ ರಾಷ್ಟ್ರದ ದ್ವೀಪಕ್ಕೆ ಕೈಲಾಸ ಎಂದು ನಾಮಕರಣ ಮಾಡಿ ಸ್ವಂತ ಪಾಸ್ಪೋರ್ಟ್ ಕೂಡ ಮಾಡಿಕೊಂಡಿದ್ದಾನೆ.

ವೆಬ್ಸೈಟ್ ಕೂಡ ಸ್ಥಾಪಿಸಿ ಹಿಂದೂ ರಾಷ್ಟ್ರ ಎಂದು ಬರೆದಿರುವ ಸ್ವಾಮಿ ನಿತ್ಯಾನಂದ,ಆ ರಾಷ್ಟ್ರದಲ್ಲಿ ಉಚಿತ ವೈದ್ಯಕೀಯ ಹಾಗೂ ಗುರುಕುಲದ ಶಿಕ್ಷಣ ನೀಡುವುದಾಗಿ ವೆಬ್ಸೈಟ್ ಹೇಳಿದೆ. ಇದರ ಜೊತೆಗೆ ಯಾವುದೇ ದೇಶದ ನಿವಾಸಿಗಳು ಹಿಂದೂ ಧರ್ಮ ಪಾಲಿಸಬೇಕಾದರೆ ಅಲ್ಲಿಗೆ ಬರಬಹುದು ಎಂದು ವೆಬ್ಸೈಟ್ ಹೇಳಿದೆ. ಈ ದೇಶದ ಪಾಸ್ಪೋರ್ಟ್ ಪ್ರತಿ ಕೂಡ ವೆಬ್ಸೈಟ್ನಲ್ಲಿ ಹಾಕಲಾಗಿದೆ.

ಕೆಲ ದಿನಗಳ ಹಿಂದೆಯೇ ನಿತ್ಯಾನಂದ ಈಕ್ವಾಡಾರ್ ರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು ಆದರೆ ಮೂಲಗಳ ಪ್ರಕಾರ ಬಿಡದಿ ಸ್ವಾಮಿ ಭಾರತ ಬಿಟ್ಟು ಒಂದು ವರ್ಷ ಮೇಲಾಯಿತು ಎಂದು ಹೇಳುತ್ತಿವೆ.Conclusion:
Last Updated : Dec 4, 2019, 7:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.