ಬೆಂಗಳೂರು : ಅತ್ಯುತ್ತಮ ಸಾರಿಗೆ ಸೇವೆ ಮೂಲಕ ರಾಷ್ಟ್ರೀಯ ಪ್ರಶಸ್ತಿಗಳ ಬೇಟೆಯನ್ನು ಮುಂದುವರೆಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಕೆಎಸ್ಆರ್ಟಿಸಿಗೆ ಒಟ್ಟು 9 ವರ್ಗಗಳಲ್ಲಿ ಹಾಗೂ ಬಿಎಂಟಿಸಿಗೆ 4 ವರ್ಗಗಳಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿದೆ.
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ನವದೆಹಲಿಯ ಪಿಹೆಚ್ಡಿ ಚೇಂಬರ್ಸ್ನಲ್ಲಿ ಆಯೋಜಿಸಿದ್ದ 17ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಬಾಂಗ್ಲಾದೇಶದ ಮಾಹಿತಿ ಆಯುಕ್ತ ಗುಲಾಂ ರೆಹಮಾನ್, ಪಿ.ಆರ್.ಸಿ.ಐ ಗೌರವ ಮುಖ್ಯಸ್ಥರು ಎಂ ಬಿ ಜಯರಾಂ, ಎನ್.ಎಫ್.ಎಲ್ ನಿರ್ದೇಶಕ ಬಿ ವಿ ವಿಠ್ಠಲ್, ಸ್ವಿಟ್ಜರ್ಲೆಂಡ್ನ ಮಾಧ್ಯಮ ಹಾಗೂ ಪತ್ರಿಕೋದ್ಯಮ ಸಂಸ್ಥೆ ನಿರ್ದೇಶಕ ಪ್ರೊ. ಮ್ಯಾಥ್ಯು ಹಿಬರ್ಡ್ ಅವರು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಹಿಮವರ್ಧನ ನಾಯ್ಡು ಅಲೂರಿ, ವಿ. ಬಸವರಾಜು, ಎಸ್. ಲಕ್ಷ್ಮಣ್, ಎಸ್.ಪಿ ನಾಗರಾಜ ಅವರು ಪ್ರಶಸ್ತಿಯನ್ನು ನಿಗಮದ ಪರವಾಗಿ ಸ್ವೀಕರಿಸಿದರು. ಬಿಎಂಟಿಸಿಗೆ 4 ವರ್ಗಗಳಲ್ಲಿ ಪ್ರಶಸ್ತಿ ಲಭಿಸಿದ್ದು, ಪಶ್ಚಿಮ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಎನ್, ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕೆಎಸ್ಆರ್ಟಿಸಿ :
1. ವರ್ಷದ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆ- ಡೈಮಂಡ್ ಪ್ರಶಸ್ತಿ
2. ಅತ್ಯುತ್ತಮ ವರ್ಷದ ಸೇವಾ ಉಪಕ್ರಮ - ಡೈಮಂಡ್ ಪ್ರಶಸ್ತಿ
3. ಸಾಂಸ್ಥಿಕ ಹಾಗೂ ವ್ಯಾವಹಾರಿಕ ಸಂಪರ್ಕ ಉಪಕ್ರಮ- ಡೈಮಂಡ್ ಪ್ರಶಸ್ತಿ
4. ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಬೆಳ್ಳಿ ಪ್ರಶಸ್ತಿ
5. ವಿವಿಧತೆ ಹಾಗೂ ಸಮಾನತೆಯ ಉತ್ತಮ ಉಪಕ್ರಮ- ಬೆಳ್ಳಿ ಪ್ರಶಸ್ತಿ
6. ಅತ್ಯುತ್ತಮ ವರ್ಷದ ಉಪಕ್ರಮ ಉತ್ಪನ್ನ- ಬೆಳ್ಳಿ ಪ್ರಶಸ್ತಿ
7. ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ- ಕಂಚಿನ ಪ್ರಶಸ್ತಿ
8. ಸಾರ್ವಜನಿಕ ಸಂಪರ್ಕ ಅಧ್ಯಯನ- ಕಂಚಿನ ಪ್ರಶಸ್ತಿ
9. ಪ್ರಾದೇಶಿಕ ಆಂತರಿಕ ನಿಯತಕಾಲಿಕ ಮುದ್ರಣ- ಸಮಾಧಾನಕರ ಪ್ರಶಸ್ತಿ.
ಬಿಎಂಟಿಸಿ:
1. ಸಾಂಸ್ಥಿಕ ಕೈಪಿಡಿ (Corporate Broacher)- ಡೈಮಂಡ್ ಪ್ರಶಸ್ತಿ
2. ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಚಿನ್ನದ ಪ್ರಶಸ್ತಿ
3. ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ- ಬೆಳ್ಳಿ ಪ್ರಶಸ್ತಿ
4. ವರ್ಷದ ಅತ್ಯುತ್ತಮ ಸೃಜನಶೀಲ ಜಾಹೀರಾತು-ಕಂಚಿನ ಪ್ರಶಸ್ತಿ
ಇವಿ ಪವರ್ ಪ್ಲಸ್ ಬಸ್ಗೆ ರಾಷ್ಟ್ರೀಯ ಪ್ರಶಸ್ತಿ : ಇತ್ತೀಚೆಗೆ ಕೆಎಸ್ಆರ್ಟಿಸಿಯ ಚೊಚ್ಚಲ ವಿದ್ಯುತ್ ಚಾಲಿತ ಬಸ್ ಸೇವೆಯಾದ ಇವಿ ಪವರ್ ಪ್ಲಸ್ಗೆ ವಿಶ್ವ ತಯಾರಿಕೆದಾರರ ಕಾಂಗ್ರೆಸ್ ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಲಭಿಸಿತ್ತು.
ಇದನ್ನೂ ಓದಿ : ಕೆಎಸ್ಆರ್ಟಿಸಿಗೆ ಮುಡಿಗೆ ’ಸಪ್ಲೈಚೈನ್ ಲೀಡರ್ ಶಿಪ್ -ಎಕ್ಸ್ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿ