ETV Bharat / state

ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಯತ್ನ.. ಹಿರಿ ಮಗಳು ಸಾವು, ಕಿರಿ ಮಗಳು ಪಾರು - ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಪತಿಯ ಸಾವಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಹಿರಿ ಮಗಳು ಸಾವನ್ನಪ್ಪಿದ್ದರೆ, ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಈ ವೇಲೆ ಕಿರಿ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Mother Tries to Attempt Suicide with her two daughters
ಇಬ್ಬರು ಹೆಣ್ಣು ಮಕ್ಕಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ
author img

By

Published : Sep 21, 2021, 12:23 PM IST

ಯಲಹಂಕ (ಬೆಂಗಳೂರು): ತಿಂಗಳ ಹಿಂದೆ ಪತಿ ಕೋವಿಡ್​​ನಿಂದ ಸಾವನ್ನಪ್ಪಿದ್ದು, ಪತಿಯ ಸಾವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ ತನ್ನಿಬ್ಬರು ಮಕ್ಕಳ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಿಬ್ಬೂರು ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಹಿರಿ ಮಗಳು ಸಾವನ್ನಪ್ಪಿದ್ದರೆ, ಕಿರಿ ಮಗಳು ಬದುಕುಳಿದಿದ್ದು, ತಾಯಿಯ ಸ್ಥಿತಿ ಚಿಂತಾಜನಕವಾಗಿದೆ. ವರಲಕ್ಷ್ಮೀ ತನ್ನ ಇಬ್ಬರು ಹೆಣ್ಣು ಮಕ್ಕಳಾದ ದಿವ್ಯಶ್ರೀ(12) ಕಿರಿ ಮಗಳಾದ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಕಿರಿ ಮಗಳು ಕುಣಿಕೆಯಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾಳೆ. ಆದರೆ ಹಿರಿಯ ಮಗಳು ಸಾವನ್ನಪ್ಪಿದ್ದು, ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿರಿಯ ಮಗಳು ಗ್ರಾಮಸ್ಥರಿಗೆ ವಿಷಯ ತಿಳಿಸಿದಾಗ, ಮನೆ ಬಾಗಿಲು ಒಡೆದು ಒಳ ಹೋಗಿ ಆಕೆಯ ತಾಯಿಯನ್ನ ರಕ್ಷಿಸಲಾಗಿದೆ. ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದೇವನಹಳ್ಳಿ ಪುರಸಭೆ ಆವರಣದಲ್ಲಿ ಮಾಜಿ ಪುರಸಭಾ ಸದಸ್ಯನ ತಂಗಿ ನೇಣಿಗೆ ಶರಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.