ETV Bharat / state

ಬೆಂಗಳೂರು: ಪೊಲೀಸ್​ ಬಲೆಗೆ ಬಿದ್ದ ತಮಿಳುನಾಡಿನ ಮಂಕಿ ಗ್ಯಾಂಗ್ - ತಮಿಳುನಾಡಿನ ಮಂಗನ ಗ್ಯಾಂಗ್ ಪೊಲೀಸ್​ ಬಲೆಗೆ

ಸಿನಿಮೀಯ ಶೈಲಿಯಲ್ಲಿ ಮನೆಗಳಿಗೆ ಎಂಟ್ರಿ ಕೊಡ್ತಿದ್ದ ಖತರ್ನಾಕ್ ಗ್ಯಾಂಗ್ ಇದೀಗ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ.

ತಮಿಳುನಾಡಿನ ಮಂಗನ ಗ್ಯಾಂಗ್
ತಮಿಳುನಾಡಿನ ಮಂಗನ ಗ್ಯಾಂಗ್
author img

By

Published : Jun 23, 2022, 10:25 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 'ತಮಿಳುನಾಡಿನ ಮಂಗನ ಗ್ಯಾಂಗ್' ಆ್ಯಕ್ಟಿವ್ ಆಗಿದೆ. ಇವರು ಚಿಕ್ಕಪುಟ್ಟ ಮನೆಗಳಿಗೆ ಹೋಗಲ್ಲ, ಮೊಬೈಲ್ ಬಳಸಲ್ಲ. ಈ ಗ್ಯಾಂಗಿಗೆ ಹೈ ಫೈ ಬಿಲ್ಡಿಂಗ್ ಮತ್ತು ಅಪಾರ್ಟ್​ಮೆಂಟ್‌ಗಳೇ ಟಾರ್ಗೆಟ್​. ಮಂಗನಂತೆ ಕಾಂಪೌಂಡ್ ಹಾರಿ ಬರುವ ತಂಡ ಮನೆಯಲ್ಲಿ ಚಿನ್ನ ಬಿಟ್ಟು ಬೇರೇನೂ ಮುಟ್ಟಲ್ಲ. ಸಿನಿಮೀಯ ಶೈಲಿಯಲ್ಲಿ ಎಂಟ್ರಿ ಕೊಡ್ತಿದ್ದ ಖತರ್ನಾಕ್ ತಂಡವೀಗ ಪೊಲೀಸರ ಬಲೆಗೆ ಬಿದ್ದಿದೆ.

ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು

ಸಂಪಿಗೆಹಳ್ಳಿ ಠಾಣಾ ಪೊಲೀಸರು ಮಂಕಿ ಗ್ಯಾಂಗ್​ನ ಪ್ರಮುಖ ಆರೋಪಿ ಸೈರಾಜ್ ಎಂಬಾತನನ್ನು ಬಂಧಿಸಿದ್ದಾರೆ.‌‌ ಅಪಾರ್ಟ್​ಮೆಂಟ್​ನಲ್ಲಿ ಪೈಪ್ ಬಳಸಿ ಫ್ಲಾಟ್​ಗೆ ಪ್ರವೇಶ ಕೊಟ್ಟು, ಮನೆಯಲ್ಲಿರುವ ಚಿನ್ನಾಭರಣ ದೋಚಿ ಪರಾರಿಯಾಗ್ತಿದ್ದ. ಚಿನ್ನ ಬಿಟ್ಟು ಯಾವುದೇ ವಸ್ತು ಮುಟ್ಟದೆ, ನಗದು ಹಣ ಸಿಕ್ಕಷ್ಟು ಚೋರಿ ಮಾಡ್ತಿದ್ದ‌ ಎಂದು ತಿಳಿದುಬಂದಿದೆ.

ಆರೋಪಿಗಳಿಂದ ವಶಕ್ಕೆ ಪಡೆದ ಚಿನ್ನಾಭರಣ

ಐಷಾರಾಮಿ ಮನೆಗಳಲ್ಲಿ ಸಿಸಿಟಿವಿ ಕಂಡ ಕೂಡಲೇ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಕಾರ್ಯಾಚರಣೆ ಮಾಡ್ತಿದ್ದನಂತೆ. ತಮಿಳುನಾಡಿನ ಈಸೈರಾಜ್ ಥೇಟ್ ಮಂಗನಂತೆ ಕಾಂಪೌಂಡ್ ಎಗರಿ ಪೈಪ್​​ಗಳ ಮೂಲಕ ಏರ್‌ಸ್ಲೈಡ್ಸ್ ವಿಂಡೋಗಳ ಮೂಲಕ ಮನೆಯೊಳಗಡೆ ಎಂಟ್ರಿ ಕೊಡ್ತಿದ್ದ. ಆರೋಪಿಯ ಬಂಧನದಿಂದ ಒಟ್ಟು 21 ಕಡೆ ಹೈ ಫೈ ಅಪಾರ್ಟ್​ಮೆಂಟ್​ಗಳಲ್ಲಿ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ.

ಆರೋಪಿ ಸಂಜಯನಗರ, ದೇವನಹಳ್ಳಿ, ಸಂಪಿಗೆಹಳ್ಳಿ, ಯಲಹಂಕ, ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾನೆ. ಜೈಲಿಗೆ ಹೋಗಿ ವಾಪಸ್ ಬಂದ್ರೂ ಕದ್ದ ಚಿನ್ನಾಭರಣ ಮಾರಾಟ ಮಾಡಿ ಮೋಜು ಮಸ್ತಿ, ಹೆಣ್ಣು ಹೆಂಡಕ್ಕೆ ಖರ್ಚು ಮಾಡ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: 3 ಮಕ್ಕಳನ್ನು ಬಾವಿಗೆ ತಳ್ಳಿ ಕೊಂದು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.