ಬೆಂಗಳೂರು: ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಆರೋಪಿಗಳನ್ನ ಚಂದ್ರ ಲೇಔಟ್ ಪೊಲೀಸರು ಹೆಡೆಮುರಿ ಬಂಧಿಸಿದ್ದಾರೆ.
ಮುಬಾರಕ್, ಸೈಯದ್ ಉಮರ್, ಮುಜಾಮಿಲ್ ಪಾಷ ಬಂಧಿತ ಆರೋಪಿಗಳು. ಸದ್ಯ ಇವರಿಂದ 20 ಮೊಬೈಲ್ ಹಾಗೂ 2 ಲಕ್ಷ 52 ಸಾವಿರ ಹಣವನ್ನ ವಶಕ್ಕೆ ಪಡೆಯಲಾಗಿದೆ.
ಓದಿ: 'ನನ್ನ ತಂಟೆಗೆ ಬರಬೇಡಿ, ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ'
ಮುಬಾರಕ್ ಹಾಗೂ ಸೈಯದ್ ಉಮರ್ ಮೊಬೈಲ್ ಕದ್ದು ಪರಾರಿಯಾಗ್ತಿದ್ರು. ನಂತರ ಮುಜಾಮಿಲ್ ಪಾಷ ಕದ್ದ ಮೊಬೈಲ್ ಗಳನ್ನು ಸ್ವೀಕರಿಸಿ ಅವುಗಳನ್ನ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.