ETV Bharat / state

ಬೆಂಬಲ ಬೆಲೆಯಲ್ಲಿ ರಾಗಿ- ಭತ್ತ ಖರೀದಿ ಪ್ರಮಾಣ ಹೆಚ್ಚಿಸಲು ದಿನೇಶ್ ಗೂಳಿಗೌಡ ಮನವಿ

ಕಳೆದ ವರ್ಷ 47.53 ಲಕ್ಷ ಕ್ವಿಂಟಲ್ ರಾಗಿಯನ್ನು ಒಟ್ಟು 2,06,722 ರೈತರಿಂದ ಪ್ರತಿ ಕ್ವಿಂಟಲ್​ಗೆ ರೂ.3,295ರಂತೆ (ಪ್ರತಿ ರೈತರಿಂದ ಗರಿಷ್ಠ 75 ಕ್ವಿಂಟಾಲ್ ಮಿತಿ ನಿಗದಿಪಡಿಸಿ) ಖರೀದಿ ಮಾಡಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಒಂದು ಎಕರೆಗೆ 10 ಕ್ವಿಂಟಲ್​ನಂತೆ ಅಥವಾ ಒಬ್ಬ ರೈತನಿಂದ 20 ಕ್ವಿಂಟಲ್‌ವರೆಗೆ ಮಾತ್ರ ಬೆಂಬಲ ಬೆಲೆಯಡಿ ಖರೀದಿ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

dinesh-gooligowda
ದಿನೇಶ್ ಗೂಳಿಗೌಡ
author img

By

Published : Jan 17, 2022, 6:54 PM IST

ಬೆಂಗಳೂರು: ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಭತ್ತ ಖರೀದಿ ಪ್ರಮಾಣ ಮತ್ತು ಬೆಂಬಲ ಬೆಲೆ ಪರಿಷ್ಕರಿಸಿ ಹೆಚ್ಚಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಆಹಾರ ಸಚಿವ ಉಮೇಶ್ ಕತ್ತಿ ಅವರನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.

Dinesh Guligowda appeals

ಮುಖ್ಯಮಂತ್ರಿಗಳಿಗೆ ಈ ಸಂಬಂಧ ಪತ್ರ ಬರೆದಿರುವ ಅವರು, ಪ್ರತಿ ವರ್ಷದಂತೆ ರೈತರ ಬೆಂಬಲಕ್ಕೆ ಸರ್ಕಾರ ಧಾವಿಸಬೇಕಿದೆ. ಈ ವರ್ಷ ಅತಿವೃಷ್ಟಿ, ಕೊರೊನಾ ಸಂಕಷ್ಟ ಸೇರಿದಂತೆ ನಾನಾ ಕಾರಣಗಳಿಂದ ರೈತರ ಬದುಕು ದುಸ್ತರವಾಗಿದೆ. ಇಂತಹ ವಿಷಮ ಪರಿಸ್ಥಿತಿಯ ನಡುವೆಯೂ ರಾಗಿ ಬೆಳೆಯನ್ನು ರೈತರು ಕಷ್ಟಪಟ್ಟು ಬೆಳೆದಿದ್ದಾರೆ. ಆದರೆ, ಸರ್ಕಾರವು ಪ್ರಸ್ತುತ ಸಾಲಿನಲ್ಲಿ ನಿಗದಿಪಡಿಸಿರುವ ರಾಗಿ ಮತ್ತು ಭತ್ತದ ಖರೀದಿ ಪ್ರಮಾಣವು ರೈತರಿಗೆ ಮುಳುವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸುವುದು ಅವಶ್ಯ.

ಕಳೆದ ವರ್ಷ 47.53 ಲಕ್ಷ ಕ್ವಿಂಟಲ್ ರಾಗಿಯನ್ನು ಒಟ್ಟು 2,06,722 ರೈತರಿಂದ ಪ್ರತಿ ಕ್ವಿಂಟಲ್​ಗೆ ರೂ.3,295ರಂತೆ (ಪ್ರತಿ ರೈತರಿಂದ ಗರಿಷ್ಠ 75 ಕ್ವಿಂಟಲ್ ಮಿತಿ ನಿಗದಿಪಡಿಸಿ) ಖರೀದಿ ಮಾಡಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಒಂದು ಎಕರೆಗೆ 10 ಕ್ವಿಂಟಲ್​ನಂತೆ ಅಥವಾ ಒಬ್ಬ ರೈತನಿಂದ 20 ಕ್ವಿಂಟಲ್‌ವರೆಗೆ ಮಾತ್ರ ಬೆಂಬಲ ಬೆಲೆಯಡಿ ಖರೀದಿ ಮಾಡುವಂತೆ ಸರ್ಕಾರ ಆದೇಶಿಸಿದೆ.

ಅದೇ ರೀತಿ ಭತ್ತವನ್ನು ಸಹ ಪ್ರತಿ ರೈತರಿಂದ 40 ಕ್ವಿಂಟಲ್ ಅಥವಾ ಎಕರೆಗೆ 25 ಕ್ವಿಂಟಲ್ ಮಿತಿ ನಿಗದಿಪಡಿಸಲಾಗಿದೆ. ಸರ್ಕಾರದ ಪ್ರಸ್ತುತ ಆದೇಶದಿಂದ ರಾಗಿ ಮತ್ತು ಭತ್ತದ ಖರೀದಿಯ ಕಡಿತಗೊಳಿಸಿರುವ ಮಿತಿಯು ರೈತರಿಗೆ ತೀವ್ರ ಸಂಕಷ್ಟ ಉಂಟುಮಾಡಿರುತ್ತದೆ. ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ 19,993 ರೈತರಿಂದ ಬೆಂಬಲ ಬೆಲೆ ಅಡಿ 3,98,323 ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿತ್ತು. ಅದೇ ರೀತಿ 27,825 ರೈತರಿಂದ 9,06,188 ಕ್ವಿಂಟಲ್ ಭತ್ತವನ್ನು ಬೆಂಬಲ ಬೆಲೆ ಯೋಜನೆಯಡಿ (ʼಎʼ ಗ್ರೇಡ್ ಭತ್ತಕ್ಕೆ ರೂ.1,960 ಮತ್ತು ʼಬಿʼ ಗ್ರೇಡ್ ಭತ್ತಕ್ಕೆ ರೂ.1,940) ಖರೀದಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕೂಡಲೇ ಮಧ್ಯಪ್ರವೇಶಿಸಿ ರಾಗಿ ಮತ್ತು ಭತ್ತದ ಬೆಂಬಲ ಬೆಲೆಯ ಮೊತ್ತವನ್ನು ಪರಿಷ್ಕರಿಸಿ ಹೆಚ್ಚಿಸುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕೆಂದು ರೈತರ ಸಮುದಾಯದ ಪರವಾಗಿ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 15 ದಿನದಲ್ಲಿ 3.5 ಕೋಟಿ ತರುಣರಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್​: ಕೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.