ETV Bharat / state

ಶಾಸಕ ಖಾದರ್​ ಒಬ್ಬ ಹುಚ್ಚ, ದೇಶದ್ರೋಹಿ: ರೇಣುಕಾಚಾರ್ಯ ಕಿಡಿ - ಶಾಸಕ ರೇಣುಕಾಚಾರ್ಯ ಪತ್ರಿಕಾಗೋಷ್ಠಿ

ಶಾಸಕ ಯು.ಟಿ.ಖಾದರ್​ ದೇಶದ್ರೋಹಿ. ಅವರಿಂದಲೇ ಮಂಗಳೂರಿನಲ್ಲಿ ಗಲಭೆ ಹೆಚ್ಚುತ್ತಿರುವುದು. ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಸದನದಲ್ಲಿ ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದು ಏಕವಚನದಲ್ಲೇ ರೇಣುಕಾಚಾರ್ಯ ವಾಗ್ದಾಳಿ.

mla renukacharya
ಶಾಸಕ ರೇಣುಕಾಚಾರ್ಯ
author img

By

Published : Dec 27, 2019, 5:17 PM IST

ಬೆಂಗಳೂರು: ಶಾಸಕ ಯು.ಟಿ.ಖಾದರ್ ಒಬ್ಬ ಹುಚ್ಚ, ದೇಶದ್ರೋಹಿ. ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಹೋಗಲಿ. ಇಂತವರ ಹೇಳಿಕೆಗೆ ಸದನದಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಶಾಸಕ ರೇಣುಕಾಚಾರ್ಯ

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾದರ್​ಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಹುಚ್ಚರ ಹೇಳಿಕೆಗೆ ತಕ್ಕ ಉತ್ತರ ಕೊಡುತ್ತೇನೆ. ಬೆಂಕಿ ಹಚ್ಚೋ ಹೇಳಿಕೆ ಬಗ್ಗೆ ಅಷ್ಟು ಸುಲಭವಾಗಿ ನಾನು ಬಿಡಲ್ಲ ಎಂದು ಏಕವಚನದಲ್ಲಿ ಶಾಸಕ ಖಾದರ್​ ವಿರುದ್ಧ ಕುಟುಕಿದ್ದಾರೆ.

ಪಶ್ಚಿಮ ಬಂಗಾಳದಲ್ಲಿನ ಗಲಭೆ, ದೊಂಬಿಯನ್ನು ನೋಡುವುದು ಬಿಟ್ಟು ಇಲ್ಲಿಗೆ ಪರಿಹಾರ ನೀಡಲು ಬಂದಿದ್ದಾರೆ. ಮೊದಲು ಅದನ್ನು ನಿಯಂತ್ರಿಸಲಿ ಎಂದು ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದರು.

Intro:Body:KN_BNG_05_RENUKACHARYA_BYTE_SCRIPT_7201951

ಯು.ಟಿ.ಖಾದರ್ ಒಬ್ಬ ಪಾಗಲ್, ದೇಶದ್ರೋಹಿ: ರೇಣುಕಾಚಾರ್ಯ

ಬೆಂಗಳೂರು: ಯು.ಟಿ.ಖಾದರ್ ಒಬ್ಬ ಹುಚ್ಚ, ಪಾಗಲ್, ದೇಶದ್ರೋಹಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಬಗ್ಗೆ ಅವನಿಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಅವನೊಬ್ಬ ದೇಶದ್ರೋಹಿ. ಅಂತಹ ಹುಚ್ಚರ ಹೇಳಿಕೆಗೆ ನಾನು ಸದನದಲ್ಲಿ ತಕ್ಕ ಉತ್ತರ ಕೊಡುತ್ತೇನೆ. ಬೆಂಕಿ ಹಚ್ಚೋ ಹೇಳಿಕೆ ಬಗ್ಗೆ ಅಷ್ಟು ಸುಲಭವಾಗಿ ನಾನು ಬಿಡಲ್ಲ. ಈ ಬಗ್ಗೆ ಸದನದಲ್ಲಿ ತಕ್ಕ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಗೋಲಿಬಾರ್ ಗೆ ಸಾವಿಗೀಡಾದ ಯುವಕರಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪರಿಹಾರ ಘೋಷಿಸಿದ ವಿರುದ್ದ ಕಿಡಿಕಾರಿದ ರೇಣುಕಾಚಾರ್ಯ, ಅವರ ರಾಜ್ಯದಲ್ಲಿ ಗಲಭೆ ಉಂಟಾಗಿದೆ‌. ಆದರೆ, ಅದು ಬಿಟ್ಟು ಇಲ್ಲಿ ಪರಿಹಾರ ಕೊಡಲು ಬಂದಿದ್ದಾರೆ. ಮೊದಲು ಅದನ್ನು ನಿಯಂತ್ರಿಸಿ ಎಂದು ವಾಗ್ದಾಳಿ ನಡೆಸಿದರು.

ಯು‌.ಟಿ.ಖಾದರ್ ಸಾರ್ವಜನಿಕ ಆಸ್ತಿ ಪಾಸ್ತಿ ಕಟ್ಟಿಕೊಡಬೇಕು. ಯಾಕೆಂದರೆ ಅವರೇ ಇದಕ್ಕೆಲ್ಲಾ ರೂವಾರಿ. ಹೀಗಾಗಿ ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಖಾದರ್ ಸೇರಿದಂತೆ ಕಾಂಗ್ರೆಸ್ ಕಟ್ಟಿಕೊಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಬಾಂಗ್ಲಾ ಪಾಕ್ ಗಳಿಂದ ಅನೇಕ ಜನ ನುಸುಳುಕೋರರು ಬಂದಿದ್ದಾರೆ. ಅಂತಹವರ ಮೇಲೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತದೆ. ಈಗ ನಡೆಯುತ್ತಿರುವ ಅನೇಕ ಪ್ರತಿಭಟನೆಗಳಲ್ಲಿ ಭಾರತಮಾತೆಯ ಚಿತ್ರ ಬಳಸುತ್ತಿದ್ದಾರೆ. ಈಗಲಾದರೂ ನೀವೆಲ್ಲ ಭಾರತೀಯರು ಅಂತಾ ನೆನಪಾಯಿತಲ್ಲ. ಕಾಂಗ್ರೆಸ್ ಜೆಡಿಎಸ್ ಇನ್ನು ಇಪ್ಪತ್ತು ವರ್ಷ ಅಧಿಕಾರಕ್ಕೆ ಬರಲ್ಲ. ಸುಮ್ಮನೆ ವೋಟ್ ಬ್ಯಾಂಕ್ ರಾಜಕೀಯ ಮಾಡಬೇಡಿ ಎಂದು ವಾಗ್ದಾಳಿ ಮಾಡಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.