ಬೆಂಗಳೂರು: ಆಪರೇಷನ್ ಕಮಲಕ್ಕೆ ಪ್ರತಿಯಾಗಿ ರಿವರ್ಸ್ ಆಪರೇಷನ್ಗೆ ಮುಂದಾಗಿ ಜೆಡಿಎಸ್ ಕುಣಿಕೆಗೆ ಸಿಲುಕಿದ್ದ ಬಿಜೆಪಿ ಶಾಸಕರೊಬ್ಬರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಫುಲ್‌ಕ್ಲಾಸ್ ತೆಗೆದುಕೊಂಡಿದ್ದಾರಂತೆ. ಇದರಿಂದ ಶಾಸಕ ಬಸವರಾಜ ದಡೇಸುಗೂರು ಅವರು ಬಿಎಸ್ವೈ ನಿವಾಸಕ್ಕೆ ಬಂದು ವಿವರಣೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಿವರ್ಸ್ ಆಪರೇಷನ್ಗೆ ಮುಂದಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಿಜೆಪಿ ಶಾಸಕರನ್ನು ರಕ್ಷಣೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೇಕಾದ ಅಗತ್ಯ ಕಾರ್ಯತಂತ್ರ ರೂಪಿಸಿದ್ದು, ಜೆಡಿಎಸ್ ಗಾಳಕ್ಕೆ ಸಿಲುಕಿದ್ದ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಜೆಡಿಎಸ್ ಸಖ್ಯಕ್ಕೆ ಸಿಲುಕಿದ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಯಡಿಯೂರಪ್ಪ, ದೂರವಾಣಿ ಕರೆ ಮಾಡಿ ದಡೆಸೂಗೂರುಗೆ ಫುಲ್‌ಕ್ಲಾಸ್ ತೆಗೆದುಕೊಂಡು, ಕೂಡಲೇ ಭೇಟಿಯಾಗುವಂತೆ ತಾಕೀತು ಮಾಡಿದ್ದರಂತೆ. ಅಂತೆಯೇ ಶಾಸಕರು ಸಂಜೆ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನನಗೆ ಜೆಡಿಎಸ್ನಿಂದ ಆಫರ್ ಬಂದಿದೆ ಎನ್ನುವುದು ಸುಳ್ಳು. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಾನು ಕೂಡ ಯಾರ ಸಂಪರ್ಕದಲ್ಲಿ ಇಲ್ಲ ಎಂದು ಶಾಸಕರು ಸಮಜಾಯಿಷಿ ನೀಡಿದ್ದಾರಂತೆ. ಯಾರು ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ. ಯಾರನ್ನು ಯಾರು ಸಂಪರ್ಕಿಸಿದ್ದಾರೆ ಎನ್ನುವ ಎಲ್ಲ ಮಾಹಿತಿ ಇದೆ. ಇದನ್ನೆಲ್ಲ ಇಲ್ಲಿಗೆ ಬಿಟ್ಟುಬಿಡಿ ಎಂದು ಶಾಸಕ ದಡೆಸೂಗೂರುಗೆ ಬಿಎಸ್ವೈ ತಾಕೀತು ಮಾಡಿ ನಗರದಲ್ಲೇ ಇರುವಂತೆ ಸೂಚಿಸಿ ಕಳುಹಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ
.