ETV Bharat / state

ಕಸ್ತೂರಿ ರಂಗನ್ ವರದಿಯನ್ವಯ ಗ್ರಾಮಸ್ಥರ ಒಕ್ಕಲೆಬ್ಬಿಸುವುದಿಲ್ಲ: ಸಚಿವ ಸುರೇಶ್ ಕುಮಾರ್ - ಕಸ್ತೂರಿ ರಂಗನ್ ವರದಿ ಸಂಬಂಧ ಚರ್ಚೆ

ಕಸ್ತೂರಿ ರಂಗನ್ ವರದಿಯಂತೆ ನಮ್ಮ ರಾಜ್ಯದಲ್ಲಿ 1,533 ಗ್ರಾಮಗಳು ಅರಣ್ಯ ಪ್ರದೇಶದ‌ ವ್ಯಾಪ್ತಿಗೆ‌ ಬರಲಿದೆ.ಯಾವುದೇ ಗ್ರಾಮಸ್ಥರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಮೂಲಭೂತ ಸೌಕರ್ಯಕ್ಕೆ ಯಾವುದೇ ಸಮಸ್ಯೆ ಎದುರಾಗಲ್ಲ. ಅವರು ಯಾವುದೇ ಆತಂಕ ಪಡುವುದು ಬೇಡ ಎಂದು ಸಚಿವ ಸುರೇಶ್‌ ಕುಮಾರ್ ಹೇಳಿದ್ದಾರೆ.

minister-suresh-talk-about-kasthuri-rangan-report
ಕಸ್ತೂರಿ ರಂಗನ್ ವರದಿ
author img

By

Published : Dec 10, 2020, 6:37 PM IST

ಬೆಂಗಳೂರು: ಕಸ್ತೂರಿ‌ ರಂಗನ್ ವರದಿಯನ್ವಯ ಯಾವುದೇ ಗ್ರಾಮಸ್ಥರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

ಶೂನ್ಯ ವೇಳೆಯಲ್ಲಿ ಕಸ್ತೂರಿ ರಂಗನ್ ವರದಿ ಸಂಬಂಧ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ಕಸ್ತೂರಿ ರಂಗನ್ ವರದಿಯಂತೆ ನಮ್ಮ ರಾಜ್ಯದಲ್ಲಿ 1,533 ಗ್ರಾಮಗಳು ಅರಣ್ಯ ಪ್ರದೇಶದ‌ ವ್ಯಾಪ್ತಿಗೆ‌ ಬರಲಿದೆ. ಈ ಸಂಬಂಧ ಕ್ಯಾಬಿನೆಟ್ ಸಬ್ ಕಮಿಟಿ ರಚನೆಯಾಗಿದೆ. ಯಾವುದೇ ಗ್ರಾಮಸ್ಥರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಮೂಲಭೂತ ಸೌಕರ್ಯಕ್ಕೆ ಯಾವುದೇ ಸಮಸ್ಯೆ ಎದುರಾಗಲ್ಲ. ಅವರು ಯಾವುದೇ ಆತಂಕ ಪಡುವುದು ಬೇಡ ಎಂದು ಭರವಸೆ ನೀಡಿದರು.

ಗ್ರಾಮಸ್ಥರ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಅವರ ಹಿತಾಸಕ್ತಿ ಕಾಪಾಡುತ್ತೇವೆ. ಅರಣ್ಯ ಸಚಿವರ ಜೊತೆ ಚರ್ಚೆ ನಡೆಸಿ ಈ ಸಂಬಂಧ ಎನ್‌ಜಿಟಿಗೆ ಹೋಗುವ ಬಗ್ಗೆನೂ ತೀರ್ಮಾನ ಮಾಡುತ್ತೇವೆ ಎಂದರು.

ಇದಕ್ಕೂ ಮುನ್ನ ಕಸ್ತೂರಿ ರಂಗನ್ ವರದಿ ಮೇಲಿನ ಚರ್ಚೆ‌ ವೇಳೆ ಮಾತನಾಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್, ಈ ಮೊದಲಿನಿಂದಲೂ ಕಸ್ತೂರಿ ರಂಗನ್ ವರದಿ ಜಾರಿಗೆ ಬರದಂತೆ ನಾವು ಆಗ್ರಹಿಸುತ್ತಿದ್ದೇವೆ. ಯುಪಿಎ ಸರ್ಕಾರ‌ ಈ ವರದಿ ಜಾರಿಗೆ ಯತ್ನಿಸಿತ್ತು. ನಮ್ಮ‌ ವಿರೋಧದ‌ ಮಧ್ಯೆ ಅದು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಒಟ್ಟು 1533 ಗ್ರಾಮಗಳು ಈ ವರದಿಯಂತೆ ಅರಣ್ಯ ವ್ಯಾಪ್ತಿಗೆ ಬರಲಿದೆ. ಅವೈಜ್ಞಾನಿಕವಾಗಿ ಸರ್ವೆ ಮಾಡಿ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಓದಿ: ಡಾ.ಕಸ್ತೂರಿ ರಂಗನ್ ವರದಿ: ಉಪಸಮಿತಿಗೆ ಸಚಿವ ಹೆಬ್ಬಾರ್ ಸದಸ್ಯರಾಗಿ ನೇಮಕ

ಪರಿಸರ ಸಂರಕ್ಷಣೆಗೆ ನಮ್ಮ‌ ವಿರೋಧ ಇಲ್ಲ. ಆದರೆ ಅದರ‌ ನೆಪದಲ್ಲಿ ಜನ‌ಜೀವನಕ್ಕೆ ಸಮಸ್ಯೆ ಆಗಬಾರದು ಎಂಬುದು ನಮ್ಮ ಒತ್ತಾಯ. ಮೂಲ ಭೂತ ಸೌಕರ್ಯ ನೀಡಲು ಈ ವರದಿ ಜಾರಿಯಿಂದ‌ ಸಮಸ್ಯೆ ಆಗಬಾರದು. ಯಾರನ್ನೂ ಒಕ್ಕಲೆಬ್ಬಿಸಬಾರದು, ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಬೇಕು. ಕಸ್ತೂರಿ ರಂಗನ್ ವರದಿಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಅದರಿಂದ ಜನಜೀವನ ಸಮಸ್ಯೆ ಆಗಬಾರದು. ಈ ಸಂಬಂಧ ಮರುಸರ್ವೆ ಮಾಡುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಹಳ್ಳಿಗಳಲ್ಲಿ ರಕ್ತಪಾತವಾಗಲಿದೆ:

ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಮ್ಮ ಹಳ್ಳಿಗಳಲ್ಲಿ ರಕ್ತಪಾತವಾಗಲಿದೆ ಎಂದು ಶಾಸಕ ಅರಗ ಜ್ಞಾನೇಂದ್ರ ಆತಂಕ‌ ವ್ಯಕ್ತಪಡಿಸಿದರು. ನಮ್ಮ ಬದುಕನ್ನು ಬರ್ಬಾದು ಮಾಡುವುದೇ ಈ ಕಸ್ತೂರಿ ರಂಗನ್ ವರದಿಯ ಉದ್ದೇಶವಾಗಿದೆ. ಸ್ಯಾಟಲೈಟ್ ‌ಮೂಲಕ ಸರ್ವೆ‌ ಮಾಡಿದ ಹಿನ್ನೆಲೆ ಅವರಿಗೆ ತೋಟಗಳೆಲ್ಲವೂ ಹಸಿರಾಗಿ ಕಂಡು ಬಂದಿದೆ. ಹೀಗಾಗಿ ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಗೆ ಕಸ್ತೂರಿ ರಂಗನ್ ವರದಿಯಲ್ಲಿ‌ ಅವುಗಳೆಲ್ಲವನ್ನೂ ಸೇರಿಸಲಾಗಿದೆ. ತೀರ್ಥಹಳ್ಳಿಯಲ್ಲಿ 482 ಗ್ರಾಮಗಳು ಕಸ್ತೂರಿ ರಂಗನ್ ವರದಿ ಒಳಗೆ ಬರುತ್ತದೆ. ಶಿರಸಿಯಲ್ಲಿ 615 ಗ್ರಾಮಗಳು ಸೇರುತ್ತದೆ‌ ಎಂದು ತಿಳಿಸಿದರು.

ಕಸ್ತೂರಿ ರಂಗನ್ ಜಾರಿಯಾದರೆ ಡಾಂಬರ್ ಹಾಕುವ ಹಾಗಿಲ್ಲ. ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಕೇರಳ‌ದಲ್ಲಿ ಕಸ್ತೂರಿ ರಂಗನ್ ವರದಿ ಪ್ರಕಾರ ಗುರುತಿಸಲಾದ ಅರಣ್ಯ ವ್ಯಾಪ್ತಿಯನ್ನು 9,000 ಚ.ಕಿ.ಮೀಟರ್​​ಗೆ ಇಳಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ 20678 ಚದರ ಕಿ.ಮೀ. ಈ ಕಸ್ತೂರಿ ರಂಗನ್ ವರದಿಯಂತೆ ಅರಣ್ಯ ವ್ಯಾಪ್ತಿಗೆ ಬರಲಿದೆ. ಅದನ್ನು 13,000 ಚ.ಕಿ.ಮೀ.ಗೆ ಇಳಿಕೆ ಮಾಡಬಹುದು. ಈ‌ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಮಾತನಾಡಿದ ಎಂ.ಪಿ.ಕುಮಾರಸ್ವಾಮಿ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಹಿತಾಸಕ್ತಿ ಬಗ್ಗೆ ಗಮನ ಹರಿಸಲ್ಲ. ದೆಹಲಿಯಿಂದ ಯಾವುದೋ ಶಕ್ತಿ ನಮ್ಮನ್ನು ಏಕೆ ನಿಯಂತ್ರಿಸಬೇಕು?.‌ ರಾಜ್ಯದ ಬಗ್ಗೆ ನಾವೇ ನಿರ್ಧರಿಸುವಂತೆ ಆಗಬೇಕು ಎಂದು ತಿಳಿಸಿದರು.

ಮೀಸಲು ಅರಣ್ಯನೇ ಸಾಕು, ಇನ್ನಷ್ಟು ಗ್ರಾಮಗಳನ್ನು ಅರಣ್ಯ ಪ್ರದೇಶಕ್ಕೆ ಸೇರಿಸುವುದು ಬೇಡ. ರಾಗಿ, ಜೋಳ ಬೆಳೆಯುವವರನ್ನು ಅರಣ್ಯ ಮಂತ್ರಿ ಮಾಡಿದರೆ ಹೇಗೆ ಎಂದು ಆನಂದ್ ಸಿಂಗ್​​​ಗೆ ಟಾಂಗ್ ನೀಡಿದರು. ರಾಜ್ಯದ 35 ಎಂಪಿಗಳು ನಿದ್ದೆ ಮಾಡುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ‌ ಸಲ್ಲಿಸಿದರೆ ಜನ ನಮಗೆ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಓದಿ: ಕಸ್ತೂರಿ ರಂಗನ್ ವರದಿ ಜಾರಿ; ಜಾವಡೇಕರ್ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.