ETV Bharat / state

ಗೊರಗುಂಟೆ ಪಾಳ್ಯ ಮೆಟ್ರೋ ಸ್ಟೇಷನ್ ಸಿಬ್ಬಂದಿಗೆ ಪ್ರಯಾಣಿಕರ ತರಾಟೆ - Metro news

ಬೆಂಗಳೂರು ಗೊರಗುಂಟೆ ಪಾಳ್ಯ ‌ಮೆಟ್ರೋ ಸ್ಟೇಷನ್‌ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್ ಗರಂ ಆಗಿದ್ದರು.

Metro Passengers Angry
ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್​​ ಗರಂ
author img

By

Published : Dec 28, 2019, 9:34 AM IST

ಬೆಂಗಳೂರು: ಪ್ರಯಾಣಿಕರು ಓಡಾಡುವ ಗೇಟ್ ಕ್ಲೋಸ್ ಮಾಡಿರುವ ವಿಚಾರಕ್ಕೆ ತಡರಾತ್ರಿ ಗೊರಗುಂಟೆ ಪಾಳ್ಯ ‌ಮೆಟ್ರೋ ಸಿಬ್ಬಂದಿ ಸಿಬ್ಬಂದಿಯನ್ನು ಪ್ರಯಾಣಿಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಮೆಟ್ರೋ ಸ್ಟೇಷನ್​ನಲ್ಲಿ ಎರಡು ಎಗ್ಸಿಟ್ ಗೇಟ್​​​​ಗಳಿದ್ದು, ಪ್ರಯಾಣಿಕರು ಗೊರಗುಂಟೆ ಪಾಳ್ಯ ಬಸ್ ಸ್ಟಾಪ್ ಕಡೆ ಇರುವ ಗೇಟ್ ಅನ್ನೇ ಹೆಚ್ಚಾಗಿ ಬಳಸುತ್ತಾರೆ. ಇದು ಮಹಿಳೆಯರಿಗೆ ಓಡಾಡಲು ಸುರಕ್ಷಿತವಾದ ಗೇಟ್ ಕೂಡ ಆಗಿತ್ತು. ಆದರೆ‌ ಸಿಬ್ಬಂದಿ ಕೊರತೆ ಎಂದು ರಾತ್ರಿ 10 ಗಂಟೆ ನಂತರ ಎಂಟ್ರಿ ಗೇಟ್ ಕ್ಲೋಸ್ ಮಾಡಿ, ಆರ್​ಎನ್​ಎಸ್ ಗೇಟ್ ಮೂಲಕ ಪ್ರಯಾಣಿಕರಿಗೆ ಓಡಾಡಲು ಅವಕಾಶ ಮಾಡಿ ಕೊಡಲಾಗಿದೆ.

ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್​​ ಗರಂ

ಆರ್​ಎನ್​ಎಸ್ ಗೇಟ್ ಮೂಲಕ ಗೊರಗುಂಟೆ ಬಸ್ ಸ್ಟಾಪ್ ತಲುಪಲು ಸುಮಾರು 200 ಮೀಟರ್ ದೂರ ಕ್ರಮಿಸಬೇಕು. ಮಾತ್ರವಲ್ಲದೇ ಈ ಭಾಗದಲ್ಲಿ ಬೆಳಕಿನ ಸಮಸ್ಯೆ ಕೂಡ ಇದ್ದು, ಮಹಿಳೆಯರು ಆತಂಕ ಎದುರಿಸುತ್ತಿದ್ದಾರೆ. ಗೊರಗುಂಟೆ ಬಸ್ ಸ್ಟಾಪ್ ಕಡೆ ಇರುವ ಗೇಟ್ ಓಪನ್ ಮಾಡಿದರೆ ಒಂದು ನಿಮಿಷದಲ್ಲಿ ಬಸ್ ಸ್ಟಾಪ್ ತಲುಪಬಹುದು. ಹಾಗಾಗಿ ಕ್ಲೋಸ್ ಮಾಡಿರುವ ಗೇಟ್ ಓಪನ್ ಮಾಡಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ರು.

ಈ ವಿಚಾರ ತಿಳಿದು ಮಾಧ್ಯಮದವರು ಸ್ಥಳಕ್ಕೆ ಭೇಟಿಕೊಟ್ಟು ಮೆಟ್ರೋ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದರೆ, ನಮ್ಮಲ್ಲಿ ಮ್ಯಾನ್ ಪವರ್ ಕಡಿಮೆ‌ ಇದೆ. ಹಾಗಾಗಿ ಗೇಟ್ ಕ್ಲೋಸ್ ಮಾಡಲಾಗಿದೆ.‌ ಈಗ ಓಪನ್ ಮಾಡ್ತೀವಿ ಎಂದು ನಂತರ ಗೇಟ್​ ಓಪನ್ ಮಾಡಿ ಪ್ರಯಾಣಿಕರು ಓಡಾಡಲು ಅನುವು ಮಾಡಿಕೊಟ್ಟರು.

Intro:Body:ಗೊರಗುಂಟೆ ಪಾಳ್ಯ ‌ಮೆಟ್ರೋ ಸಿಬ್ಬಂದಿ ವಿರುದ್ಧ ಮೆಟ್ರೋ ಪ್ರಯಾಣಿಕರು ಫುಲ್ ಗರಂ

ಬೆಂಗಳೂರು:
ಗೊರಗುಂಟೆ ಪಾಳ್ಯ ‌ಮೆಟ್ರೋ ಸಿಬ್ಬಂದಿ ವಿರುದ್ಧ ಮೆಟ್ರೋ ಪ್ರಯಾಣಿಕರು ಫುಲ್ ಗರಂ ಆಗಿದ್ದಾರೆ‌ .ಪ್ರಯಾಣಿಕರು ಓಡಾಡುವ ಎಂಟ್ರಿ ಗೇಟ್ ಕ್ಲೋಸ್ ಮಾಡಿರುವ ವಿಚಾರಕ್ಕೆ ತಡರಾತ್ರಿ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದು‌, ಗೇಟ್ ಓಪನ್ ಮಾಡುವಂತೆ ಒತ್ತಾಯಿಸಿದ್ದಾರೆ‌. ಗೊರಗುಂಟೆ ಪಾಳ್ಯ ಮೆಟ್ರೋ ಸ್ಟೇಷನ್ ನಲ್ಲಿ ಎರಡು ಎಗ್ಸಿಟ್ ಗೇಟ್ ಗಳಿವೆ. ಗೊರಗುಂಟೆ ಪಾಳ್ಯ ಬಸ್ ಸ್ಟಾಪ್ ನಿಂದ ಒಂದು ಎಂಟ್ರಿ ಗೇಟ್ ಮತ್ತು ಆರ್ ಎನ್ ಎಸ್ ಕಡೆ ಒಂದು ಗೇಟ್ . ಮೆಟ್ರೋ ಪ್ರಯಾಣಿಕರು ಗೊರಗುಂಟೆ ಪಾಳ್ಯ ಬಸ್ ಸ್ಟಾಪ್ ಕಡೆ ಇರುವ ಗೇಟ್ ಅನ್ನು ಉಪಯೋಗಿಸುತ್ತಾರೆ ಇದು ಮಹಿಳೆಯರಿಗೆ ಓಡಾಡಲು ಸುರಕ್ಷಿತವಾದ ಗೇಟ್ ಆದರೆ‌ ಸಿಬ್ಬಂದಿ ಕೊರತೆ ಅಂತಾ ರಾತ್ರಿ ೧೦ ಗಂಟೆಯ ನಂತರ ಎಂಟ್ರಿ ಗೇಟ್ ಅನ್ನು ಕ್ಲೋಸ್ ಮಾಡಲಾಗ್ತಾ ಇದ್ದು. ಆರ್ ಎನ್ ಎಸ್ ಗೇಟ್ ಮೂಲಕ ಓಡಾಡಲು ಅವಕಾಶ ಮಾಡಿಕೊಡ್ತಾ ಇದ್ದಾರೆ. ಆರ್ ಎನ್ ಎಸ್ ಗೇಟ್ ಮೂಲಕ ಗೊರಗುಂಟೆ ಬಸ್ ಸ್ಟಾಪ್ ತಲುಪಲು ೨೦೦ ಮೀ ಕ್ರಮಿಸಬೇಕು ಅ ಜಾಗದಲ್ಲಿ ಲೈಟ್ ಸಮಸ್ಯೆ ಇದೆ ಮಹಿಳೆಯರಿಗೆ ಯಾವ ಸಮಯದಲ್ಲಿ ಅನಾಹುತ ಆಗುತ್ತೋ ಗೊತ್ತಿಲ್ಲ , ಗೊರಗುಂಟೆ ಬಸ್ ಸ್ಟಾಪ್ ಕಡೆ ಇರುವ ಗೇಟ್ ಓಪನ್ ಮಾಡಿದರೆ ಒಂದು ನಿಮಿಷದಲ್ಲಿ ಬಸ್ ಸ್ಟಾಪ್ ತಲುಪಬಹುದು ಆಗಾಗಿ ಕ್ಲೋಸ್ ಮಾಡಿರುವ ಗೇಟ್ ಓಪನ್ ಮಾಡಿ ಎಂದು ಗರಂ ಆಗಿದ್ರು. ಇನ್ನೂ ಮಾಧ್ಯಮ ತಂಡ ಸ್ಥಳಕ್ಕೆ ಭೇಟಿಕೊಟ್ಟು ಮೆಟ್ರೋ ಸಿಬ್ಬಂದಿಯನ್ನ ಪ್ರಶ್ನೆ ಮಾಡಿದ್ರೆ ಮ್ಯಾನ್ ಪವರ್ ಕಡಿಮೆ‌ ಇದೆ ಆಗಾಗಿ ಕ್ಲೋಸ್ ಮಾಡಲಾಗಿದೆ.‌ ಇವಾಗ ಓಪನ್ ಮಾಡ್ತಿವಿ ಅಂತಾ ಓಪನ್ ಮಾಡಿ ಪ್ರಯಾಣಿಕರು ಓಡಾಡಲು ಅನುವು ಮಾಡಿಕೊಟ್ಟಿದ್ದಾರೆ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.