ETV Bharat / state

ಪಾಲಿಕೆ ಬಜೆಟ್​​ ಮುನ್ನ ಪರಮೇಶ್ವರ್ ಭೇಟಿ ಮಾಡಿದ ಮೇಯರ್​

author img

By

Published : Feb 18, 2019, 2:14 PM IST

2019-20ನೇ ಸಾಲಿನ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್​ ಮಂಡಿಸುವುದಕ್ಕೂ ಮುನ್ನ ಮೇಯರ್‌ ಗಂಗಾಂಬಿಕೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್​ ಅವರನ್ನು ಮಾಡಿದರು.

ಪಾಲಿಕೆ ಬಜೆಟ್​​ ಮುನ್ನ ಪರಮೇಶ್ವರ್ ಭೇಟಿ ಮಾಡಿದ ಮೇಯರ್​

ಬೆಂಗಳೂರು: ಬಿಬಿಎಂಪಿ ಬಜೆಟ್​ ಮಂಡನೆ ಪೂರ್ವಭಾವಿಯಾಗಿ ಮೇಯರ್‌ ಗಂಗಾಂಬಿಕೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್​ ಅವರನ್ನು ಸದಾಶಿವನಗರ ಬಿಡಿಎ ಗೃಹ ಕಚೇರಿಯಲ್ಲಿ ಭೇಟಿ ಮಾಡಿದರು.

ಸದಾಶಿವನಗರದ ಡಿಸಿಎಂ ಗ್ರಹ ಕಚೇರಿಗೆ ಇಂದು ಬೆಳಗ್ಗೆ ಭೇಟಿ ನೀಡಿದ್ದ ಮೇಯರ್ ಗಂಗಾಂಬಿಕೆ ಹಾಗೂ ಹೇಮಲತಾ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಉಪ ಮುಖ್ಯಮಂತ್ರಿ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಕೂಡ ಆಗಿರುವ ಪರಮೇಶ್ವರ್​ಗೆ ಬಜೆಟ್​ನ ಪ್ರಮುಖ ಅಂಶಗಳನ್ನು ವಿವರಿಸಿದರು.

undefined

ಬಜೆಟ್ ಮಂಡನೆಗೆ ಮುನ್ನ ಬಜೆಟ್​ನ ಪ್ರಮುಖ ವಿವರಗಳನ್ನು ಪರಮೇಶ್ವರ್​ ಅವರಿಗೆ ವಿವರಿಸಿದ ನಂತರವೇ ಅವರು ಬಿಬಿಎಂಪಿ ಕಚೇರಿಯತ್ತ ಪ್ರಯಾಣ ಬೆಳೆಸಿದರು. ಸದ್ಯ ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಆಡಳಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇದ್ದು, ಪಕ್ಷದ ಮುಖಂಡರು ಮಾಹಿತಿ ಒದಗಿಸಿದ ನಂತರ ಬಜೆಟ್​ ಮಂಡನೆಗೆ ಒಪ್ಪಿಗೆ ಸಿಕ್ಕಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.