ETV Bharat / state

ಸಾಲ ವಾಪಸ್‌ ಕೇಳಿದ್ದಕ್ಕೆ ಕ್ರಿಕೆಟ್‌ ಬ್ಯಾಟ್​​ನಿಂದ ಹೊಡೆದು ವ್ಯಕ್ತಿ ಹತ್ಯೆ: ಸಿಸಿಟಿವಿ ವಿಡಿಯೋ - Man Murdered

ಸಾಲ ವಾಪಸ್ ಕೇಳಿದ್ದಕ್ಕೆ ಬ್ಯಾಟ್​​ನಿಂದ ಹೊಡೆದು ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Man Murdered in Bengaluru
ಬ್ಯಾಟ್​​ನಿಂದ ಹೊಡೆದು ವ್ಯಕ್ತಿ ಹತ್ಯೆ
author img

By

Published : Aug 23, 2022, 12:39 PM IST

ಬೆಂಗಳೂರು: ಕೊಡಿಸಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಕ್ರಿಕೆಟ್‌ ಬ್ಯಾಟ್​​ನಿಂದ ಹೊಡೆದು ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಕೊಳಲು ಬಳಿಯ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ. ವೆಂಕಟೇಶಪ್ಪ ಮೃತ ವ್ಯಕ್ತಿ. ಶಿವಪ್ಪ ಹತ್ಯೆಗೈದ ಆರೋಪಿ.

ಬ್ಯಾಟ್​​ನಿಂದ ಹೊಡೆದು ವ್ಯಕ್ತಿ ಹತ್ಯೆ: ಸಿಸಿಟಿವಿ ದೃಶ್ಯ

ಪ್ರಕರಣದ ವಿವರ: ವೆಂಕಟೇಶಪ್ಪ, ನಂಜುಂಡ ರೆಡ್ಡಿ ಹಾಗೂ ಪ್ರಕಾಶ ಎಂಬುವವರಿಂದ ಶಿವಪ್ಪ ಅವರಿಗೆ ಸಾಲ ಕೊಡಿಸಿದ್ದರಂತೆ. ಆದರೆ ಶಿವಪ್ಪ ಸಾಲವನ್ನು ವಾಪಸ್ ನೀಡಿರಲಿಲ್ಲ. ಅನೇಕ ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ತನ್ನ ಮಧ್ಯಸ್ಥಿಕೆಯಲ್ಲಿ ಸಾಲ ಕೊಡಿಸಿದ್ದ ಕಾರಣ ವೆಂಕಟೇಶಪ್ಪ, ಶಿವಪ್ಪನನ್ನು ವಿಚಾರಿಸಲು ಮುನೇಕೊಳಲು ಬಳಿ ಇರುವ ಪರ್ಲ್ ಅಪಾರ್ಟ್ಮೆಂಟ್​​ಗೆ ಬಂದಿದ್ದರು.

ಈ ಸಂದರ್ಭದಲ್ಲಿ ಮಾತುಕತೆ ನಡೆಸುತ್ತಿದ್ದಾಗ ಏಕಾಏಕಿ ಶಿವಪ್ಪ ಕೈಯಲ್ಲಿದ್ದ ಬ್ಯಾಟ್​​ನಿಂದ ವೆಂಕಟೇಶಪ್ಪನ ತಲೆಗೆ ಹೊಡೆದಿದ್ದಾನೆ. ವಯಸ್ಸಾಗಿರುವ ಕಾರಣ ಏಟು ತಡೆಯದ ವೆಂಕಟೇಶಪ್ಪ ಏಕಾಏಕಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತಲೆಯಿಂದ ತೀವ್ರ ರಕ್ತಸ್ರಾವವಾದ ಕಾರಣ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಾರತ್ ಹಳ್ಳಿ ಪೊಲೀಸರು ಶಿವಪ್ಪನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನೀರಿನ ಟಬ್‌ನಲ್ಲಿ ಮುಳುಗಿಸಿ ಮಗು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.