ETV Bharat / state

ಪ್ರಾಮಾಣಿಕತೆ, ನಿಷ್ಠೆಯಿಂದಾಗಿ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ ಲಭಿಸಿದೆ: ಡಿಕೆಶಿ

52 ವರ್ಷಗಳ ಬಳಿಕ ನಮ್ಮ ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ಸ್ಥಾನ ದೊರಕಿದೆ. ಇದು ಐತಿಹಾಸಿಕ ಕ್ಷಣ. ದೇಶದ ಇತಿಹಾಸ ಕಾಂಗ್ರೆಸ್ ಇತಿಹಾಸ. ಯಾರೂ ಕೂಡ ಇದನ್ನ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಸದ್ಭಾವನಾ ಸಮಾವೇಶ
ಸದ್ಭಾವನಾ ಸಮಾವೇಶ
author img

By

Published : Nov 6, 2022, 10:19 PM IST

ಬೆಂಗಳೂರು: ಪ್ರಾಮಾಣಿಕತೆ, ನಿಷ್ಠೆಯಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಲಭಿಸಿದೆ. ತ್ಯಾಗ, ಹೋರಾಟ, ಬಡವರ ಬಗ್ಗೆ ಅವರು ಚಿಂತನೆ ಹೊಂದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಕುರಿತು ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಮಲ್ಲಿಕಾರ್ಜುನ ಖರ್ಗೆ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಆಯೋಜಿಸಿದ್ದ ಸದ್ಭಾವನಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ನಾವೆಲ್ಲ ಸರ್ವೋದಯ ಸಮಾವೇಶ ಎಂದು ಕರೆದಿದ್ದೇವೆ. ಮಹಾತ್ಮಾ ಗಾಂಧಿ ಅವರು ಆರಂಭಿಸಿದ್ದ ಸರ್ವೋದಯ ಹಿನ್ನೆಲೆಯಲ್ಲಿ ಇದನ್ನು ಸರ್ವೋದಯ ಎಂದು ಕರೆದಿದ್ದೇವೆ. 52 ವರ್ಷಗಳ ಬಳಿಕ ನಮ್ಮ ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ಸ್ಥಾನ ದೊರೆಕಿದೆ. ಇದು ಐತಿಹಾಸಿಕ ಕ್ಷಣ. ದೇಶದ ಇತಿಹಾಸ ಕಾಂಗ್ರೆಸ್ ಇತಿಹಾಸ. ಯಾರೂ ಕೂಡ ಇದನ್ನ ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.

ಸದ್ಭಾವನಾ ಸಮಾವೇಶ
ಸದ್ಭಾವನಾ ಸಮಾವೇಶ

ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಎಐಸಿಸಿ ಚುನಾವಣೆ ನಡೆಯಿತು. ಅವರ ಹೆಸರನ್ನು ಚುನಾವಣೆಗೆ ಸೂಚಿಸುವ ಭಾಗ್ಯ ನಮಗೆ ಸಿಕ್ಕಿತು. 90% ಮತದಾರರು ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ನಿಂತಿದ್ದರು. ಭಾರತ್ ಜೋಡೋ ಯಾತ್ರೆ ಮುಗಿಯುವುದರೊಳಗೆ ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಆದರು. ಇಡೀ ರಾಷ್ಟಕ್ಕೆ ಶಕ್ತಿ ತುಂಬಲು ಅವರು ಬಂದಿದ್ದಾರೆ. ನಾನು ಕನಕಪುರದ ಬಂಡೆ ಅಲ್ಲ. ಇಡೀ ದೇಶದ ಜನರಿಗೆ, ಬಡವರಿಗೆ ಶಕ್ತಿ ತುಂಬಲು ನಿಂತಿರುವ ಖರ್ಗೆ ಅವರು ಬಂಡೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು

ನಿಮ್ಮ ಪರವಾಗಿ ಕೆಲಸ ಮಾಡ್ತಾರೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಬಿಜೆಪಿ ಯಾವತ್ತಾದರೂ ಪಕ್ಷದೊಳಗೆ ಚುನಾವಣೆ ಮಾಡುವುದಕ್ಕೆ ಸಾಧ್ಯವಾ? ಮಾಡಿದೆಯಾ? ಉತ್ತರ ಕೊಡುವುದಕ್ಕೆ ಅವರ ಬಳಿ ಸಾಧ್ಯವೇ ಇಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೂ ಕೂಡ ಎಐಸಿಸಿ ಅಧ್ಯಕ್ಷ ಆಗಬಹುದು ಎಂಬುದಕ್ಕೆ ಖರ್ಗೆಯವರೇ ಸಾಕ್ಷಿ. ಖರ್ಗೆ ಕೇವಲ ನಿಮ್ಮ ಮಾತು ಕೇಳುವುದಿಲ್ಲ. ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮಾತನಾಡಿದರು

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಖರ್ಗೆ ಅಧ್ಯಕ್ಷರಾಗುವ ಮೊದಲು ಬಿಜೆಪಿ ಸಾಕಷ್ಟು ಆರೋಪ ಮಾಡುತ್ತಿತ್ತು. ಬಿಜೆಪಿ ಯಾವತ್ತಾದರೂ ಚುನಾವಣೆ ನಡೆಸಿದೆಯಾ ಅಧ್ಯಕ್ಷ ಸ್ಥಾನಕ್ಕೆ? ಆರ್​​ಎಸ್​ಎಸ್​ಗೆ ನೂರು ವರ್ಷ ಆಗುತ್ತಿದೆ. ಅದಕ್ಕೆ ಕೇವಲ 6 ಮಂದಿ ಸರಸಂಘಚಾಲಕರು. ಅದೂ ಕೂಡ ಒಂದೇ ವರ್ಗಕ್ಕೆ ಸೇರಿದವರೇ ಸರಸಂಘಚಾಲಕರು. ಕಾಂಗ್ರೆಸ್​ನಲ್ಲಿ 62 ಮಂದಿ ಎಲ್ಲ ಜಾತಿಯವರು ಅಧ್ಯಕ್ಷರಾಗಿದ್ದಾರೆ. ಖಾಕಿ ಚಡ್ಡಿ ಕರಿಟೋಪಿಯವರಿಂದ ನಾವು ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಓದಿ: ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಅದೇ ನನಗೆ ನಿಮ್ಮ ಗೌರವ: ಮಲ್ಲಿಕಾರ್ಜುನ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.