ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಆಚರಣೆ ಮಾಡುವವರೆಗೂ ಟಿಪ್ಪು ಎಲ್ಲಿದ್ದ? ಸಿದ್ದರಾಮಯ್ಯ ಸಿಎಂ ಆದಮೇಲೆಯೇ ಟಿಪ್ಪು ಜಯಂತಿ ಆಚರಣೆಗೆ ಬಂದಿದ್ದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಟಿಪ್ಪು ಜಯಂತಿ ಬೇಕೆಂದು ಸಿದ್ದರಾಮಯ್ಯ ಹೇಳ್ತಾರೆ. ಆಚರಣೆಬೇಡ ಅಂತ ಅವರ ಶಿಷ್ಯ ಸಿ.ಎಂ ಇಬ್ರಾಹಿಂ ಹೇಳ್ತಾರೆ. ಅವರಿಬ್ಬರೇ ಕುಳಿತು ಇದರ ಬಗ್ಗೆ ವಾಸ್ತವ ಹೇಳಬೇಕು. ತಣ್ಣಗಿದ್ದ ಹಿಂದೂ, ಮುಸಲ್ಮಾನರು ಕೆಂಡಕಾರುತ್ತಿದ್ದಾರೆ. ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ ಅವರಿಂದಲೇ ಈ ಎಲ್ಲಾ ಗೊಂದಲ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಪಠ್ಯ ಕೈಬಿಡುವ ಬಗ್ಗೆ ಸಮಿತಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಈ ಕುರಿತು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಂಬಂಧಪಟ್ಟ ಇಲಾಖೆ ಗಮನಕ್ಕೆ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಯಾವ ಕಮಿಟಿ ರಚನೆಮಾಡಿಲ್ಲ ಎಂದರು.