ETV Bharat / state

ಜೋಗದಲ್ಲಿ ಜ್ಯೋತಿರಾಜ್‌ ಬಯೋಪಿಕ್‌ ಶೂಟಿಂಗ್‌: ಜೀವರಕ್ಷಕವಿಲ್ಲದೆ 'ಮಂಕಿ ಮ್ಯಾನ್' ಸಾಹಸ - Bio pic documentary shooting shivmogga

ಕೋತಿರಾಜ್ ಅಲಿಯಾಸ್‌ ಜ್ಯೋತಿರಾಜ್‌​ ಅವರ ಬಯೋಪಿಕ್ ಚಿತ್ರೀಕರಣವನ್ನು ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ನಡೆಸಲಾಗುತ್ತಿದೆ.

shivmogga
ಕೋತಿರಾಜ್​ನ ಬಯೋಪಿಕ್ ಚಿತ್ರೀಕರಣ
author img

By

Published : Dec 17, 2020, 10:43 AM IST

ಶಿವಮೊಗ್ಗ: ಜ್ಯೋತಿರಾಜ್ ಅಂದ್ರೆ ಅನೇಕರಿಗೆ ತಕ್ಷಣ ಯಾರೆಂದು ಗೊತ್ತಾಗುವುದಿಲ್ಲ. ಅದೇ ಕೋತಿರಾಜ್ ಅಂದ್ರೆ, ಎಲ್ಲರಿಗೂ ಚಿರಪರಿಚಿತ. ಇದೀಗ ಈ ಕೋತಿರಾಜ್​ ಅವರ ಬಯೋಪಿಕ್ ಚಿತ್ರೀಕರಣವನ್ನು ಜೋಗದಲ್ಲಿ ಚಿತ್ರೀಕರಿಸಲಾಗುತ್ತಿದೆ.

ಜೋಗ ಜಲಪಾತದಲ್ಲಿ ಕೋತಿರಾಜ್​ ಬಯೋಪಿಕ್ ಚಿತ್ರೀಕರಣ

'ದಿ ಇನ್ ಕ್ರೆಡಿಬಲ್ ಮಂಕಿ ಮ್ಯಾನ್' ಎಂಬ ಸಾಕ್ಷ್ಯಚಿತ್ರದ ನಿರ್ಮಾಣದ ಹೊಣೆಯನ್ನು ಅನಿವಾಸಿ ಭಾರತೀಯ ಸ್ಟಾನ್ಲಿ ಹೊತ್ತಿದ್ದಾರೆ. ಇದಕ್ಕಾಗಿ ಕೋತಿರಾಜ್ ಅವರ ಸಾಹಸವನ್ನು‌ ಚಿತ್ರೀಕರಣ ತಂಡ ಜೋಗದಲ್ಲಿ ಸೆರೆ ಹಿಡಿಯುತ್ತಿದೆ. ಕಳೆದ ನಾಲ್ಕು ದಿನಗಳಿಂದ ಜಲಪಾತವನ್ನು ಅವರು ಹೇಗೆ ಏರುತ್ತಾರೆ?, ಹೇಗೆ ಕೆಳಗಿಳಿಯುತ್ತಾರೆ? ಎಂಬುದನ್ನು ಶೂಟ್ ಮಾಡಲಾಗುತ್ತಿದೆ.

ಜೋಗ ಜಲಪಾತದಲ್ಲಿ ಯಾರಾದ್ರೂ ಆತ್ಮಹತ್ಯೆ ಮಾಡಿಕೊಂಡರೆ ಅವರ ಶವ ಹುಡುಕಲು ಸಾಮಾನ್ಯವಾಗಿ ಕೋತಿರಾಜ್​ ಅವರನ್ನು‌ ಕರೆಯುವುದುಂಟು.‌ ಈ ಹಿನ್ನೆಲೆಯಲ್ಲೂ ಬಯೋ‌ಪಿಕ್ ಚಿತ್ರೀಕರಣವನ್ನು ಇಲ್ಲಿ ಮಾಡಲಾಗುತ್ತಿದೆ.

ಶೂಟಿಂಗ್‌ ವೇಳೆ ಬಂಡೆಗಳ ‌ಮೇಲೆ‌ ಯಾವುದೇ ಹಗ್ಗದ ಸಹಾಯವಿಲ್ಲದೆ ಬಂಡೆ ಏರುತ್ತಿರುವ ದೃಶ್ಯವನ್ನು‌‌ ಚಿತ್ರೀಕರಿಸಲಾಗುತ್ತಿದೆ. ಆದರೆ ಜಿಲ್ಲಾಡಳಿತ ಸೂಕ್ತ ಜೀವರಕ್ಷಕ ಸಾಮಗ್ರಿಗಳೊಂದಿಗೆ ಜಲಪಾತವನ್ನು ಹತ್ತಬೇಕೆಂಬ ನಿಯಮದ ಮೇಲೆ ಶೂಟಿಂಗ್​ಗೆ ಅನುಮತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.