ETV Bharat / state

ಸಿಎಂ ರಾಜ್ಯ ಸುತ್ತಿದ್ರೇ, ನಾವೇನೂ ಸುಮ್ನೇ ಇರಲ್ಲ, ಜನರ ಮುಂದೆ ಎಲ್ಲ ತೆರೆದಿಡೋಣ- ಕೋಡಿಹಳ್ಳಿ

ನಮ್ಮ ಅಭಿಪ್ರಾಯ ಗೆಲ್ಲಲಿದೆಯೋ ನಿಮ್ಮ ಅಭಿಪ್ರಾಯ ಗೆಲ್ಲಲಿದೆಯೋ ಎಂದು ನೋಡೋಣ. ಇದನ್ನು ನಾನು ಚಾಲೆಂಜ್ ರೀತಿ ಸ್ವೀಕರಿಸಿದ್ದೇನೆ.‌ ನೀವೂ ಸಹ ಈ ವಿಷಯ ಚಾಲೆಂಜ್ ಆಗಿ ಸ್ವೀಕರಿಸಿ ಎಂದು ಸಿಎಂ ಬಿಎಸ್​​ವೈಗೆ ಸವಾಲು ಹಾಕಿದ್ದಾರೆ. ಇಂದಿನ ಬಂದ್​ ಅತ್ಯಂತ ಯಶಸ್ವಿಯಾಗಿದೆ. ರಾಜ್ಯದಲ್ಲಿನ ಎಲ್ಲಾ ರೈತ ಸಂಘಟನೆಯ ಮುಖಂಡರುಗಳಿಗೂ ಹಾಗೂ ಈ ಬಂದ್​ಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ..

KodiHalli Chandrashekar
ಕೋಡಿಹಳ್ಳಿ ಚಂದ್ರಶೇಖರ್​ ಹೇಳಿಕೆ
author img

By

Published : Sep 28, 2020, 5:17 PM IST

ಬೆಂಗಳೂರು : ರೈತ ಮಸೂದೆ ತಿದ್ದುಪಡಿ ಕಾಯ್ದೆ ಜಾರಿ ಸಂಬಂಧ‌ ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಸಹಕರಿಸಿದ ಎಲ್ಲಾ ಬಾಂಧವರಿಗೂ ಧನ್ಯವಾದ ಅರ್ಪಿಸಿದ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಇದೇ ಸಂದರ್ಭ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ಚಾಲೆಂಜ್​ವೊಂದನ್ನ ಹಾಕಿದ್ದಾರೆ.

ಸಿಎಂ ಆಹ್ವಾನ ಕುರಿತಂತೆ ಕೋಡಿಹಳ್ಳಿ ಚಂದ್ರಶೇಖರ್​ ಪ್ರತಿಕ್ರಿಯೆ..

ಈ ಬಗ್ಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿರುವ ಕೇಂದ್ರ, ರಾಜ್ಯ ಸರ್ಕಾರಗಳ ನಡೆ ಸರಿಯಲ್ಲ. ಕಾಯ್ದೆ ಜಾರಿಯಾದ್ರೆ ರೈತರು ಬೀದಿಗೆ ಬೀಳಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಎಚ್ಚರಿಸಲು ಬಂದ್​​​​ಗೆ ಕರೆ‌ ನೀಡಿದ್ದೆವು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸುಗ್ರೀವಾಜ್ಞೆ ಮೂಲಕ ಹೊರಡಿಸಿರುವ ಕಾಯ್ದೆಗಳ ಬಗ್ಗೆ ರಾಜ್ಯದಲ್ಲಿರುವ ಎಲ್ಲಾ ಹಳ್ಳಿಗಳಿಗೂ ಹೋಗಿ ಮನವರಿಕೆ ಮಾಡಿಕೊಡುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಅವರಂತೆ ನಾವೂ ಸಹ ರಾಜ್ಯದಲ್ಲಿರುವ 28,800 ಹಳ್ಳಿಗಳಿಗೆ ಹೋಗಿ ರೈತರಿಗೆ ಮನವರಿಕೆ ಮಾಡಿಕೊಡುತ್ತೇವೆ‌.

ನಮ್ಮ ಅಭಿಪ್ರಾಯ ಗೆಲ್ಲಲಿದೆಯೋ ನಿಮ್ಮ ಅಭಿಪ್ರಾಯ ಗೆಲ್ಲಲಿದೆಯೋ ಎಂದು ನೋಡೋಣ. ಇದನ್ನು ನಾನು ಚಾಲೆಂಜ್ ರೀತಿ ಸ್ವೀಕರಿಸಿದ್ದೇನೆ.‌ ನೀವೂ ಸಹ ಈ ವಿಷಯ ಚಾಲೆಂಜ್ ಆಗಿ ಸ್ವೀಕರಿಸಿ ಎಂದು ಸಿಎಂ ಬಿಎಸ್​​ವೈಗೆ ಸವಾಲು ಹಾಕಿದ್ದಾರೆ. ಇಂದಿನ ಬಂದ್​ ಅತ್ಯಂತ ಯಶಸ್ವಿಯಾಗಿದೆ. ರಾಜ್ಯದಲ್ಲಿನ ಎಲ್ಲಾ ರೈತ ಸಂಘಟನೆಯ ಮುಖಂಡರುಗಳಿಗೂ ಹಾಗೂ ಈ ಬಂದ್​ಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೃಷಿ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿರುವುದು ರಾಜಕೀಯ ಪ್ರೇರಿತವಾಗಿದೆ. ಬಿ ಎಸ್ ಯಡಿಯೂರಪ್ಪ ಅವರು ರೈತ ಮುಖಂಡರೊಂದಿಗೆ ಪುನಃ ಚರ್ಚೆಗೆ ಕರೆಯುವುದಾಗಿ ಹೇಳಿದ್ದಾರೆ. ನಾವು ಮುಕ್ತವಾಗಿ ಚರ್ಚೆಯಲ್ಲಿ ಭಾಗಿಯಾಗುತ್ತೇವೆ.‌ ರೈತರಿಗೆ ಮಾರಕವಾಗುವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.