ETV Bharat / state

ಆನ್ಲೈನ್​ ಗೇಮ್​ಗಳಿಗೆ ಹೆಚ್ಚುವರಿ ಟ್ಯಾಕ್ಸ್ ವಿಧಿಸಿದ ತೆರಿಗೆ ಇಲಾಖೆ.. ಹೈಕೋರ್ಟ್ ಮೆಟ್ಟಿಲೇರಿದ ಕಂಪನಿ - ತೆರಿಗೆ ಪಾವತಿಸುವಂತೆ ನೋಟಿಸ್​ ಜಾರಿ

ಆನ್ಲೈನ್​ ಗೇಮ್​ಗಳ ಸ್ವರೂಪವನ್ನು ನಿರ್ಧರಿಸಲು ಅಧಿಕಾರಿಗಳು ಪರಿಣಿತರೇ ಎಂದು ಹೈಕೋರ್ಟ್ ತೆರಿಗೆ ಇಲಾಖೆಗೆ ಪ್ರಶ್ನಿಸಿದೆ.

Karnataka High Court  tax department over online games  High Court questioned to tax department  ಆನ್ಲೈನ್​ ಗೇಮ್​ಗಳ ಸ್ವರೂಪ  ಆನ್ಲೈನ್​ ಗೇಮ್​ಗಳಿಗೆ ಹೆಚ್ಚುವರಿ ಟ್ಯಾಕ್ಸ್  ಗೇಮ್​ಗಳಿಗೆ ಹೆಚ್ಚುವರಿ ಟ್ಯಾಕ್ಸ್ ವಿಧಿಸಿದ ತೆರಿಗೆ ಇಲಾಖೆ  ಹೈಕೋರ್ಟ್ ಮೆಟ್ಟಿಲೇರಿದ ಕಂಪನಿ  ಹೈಕೋರ್ಟ್ ತೆರಿಗೆ ಇಲಾಖೆಗೆ ಪ್ರಶ್ನಿಸಿದೆ  ಸರಕು ಮತ್ತು ಸೇವಾ ತೆರಿಗೆ ಇಲಾಖೆ  ತೆರಿಗೆ ಪಾವತಿಸುವಂತೆ ನೋಟಿಸ್​ ಜಾರಿ  ಗೇಮ್ಸ್​ ಕ್ರಾಫ್ಟ್​ ಟೆಕ್ನಾಲಜೀಸ್​ ಪ್ರೈವೇಟ್
ಹೈಕೋರ್ಟ್ ಮೆಟ್ಟಿಲೇರಿದ ಕಂಪನಿ
author img

By

Published : Oct 28, 2022, 7:31 AM IST

ಬೆಂಗಳೂರು: ಆನ್ಲೈನ್​ ಗೇಮ್​ಗಳ ಸ್ವರೂಪದ ಕುರಿತಂತೆ ವಿಷಯ ತಜ್ಞರು ನಿರ್ಧರಿಸಬೇಕೇ ಹೊರತು ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಅಧಿಕಾರಿಯಲ್ಲ (ಜಿಎಸ್​ಟಿ) ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆನ್ಲೈನ್​ ಗೇಮಿಂಗ್​ಗಳಿಗೆ 21 ಸಾವಿರ ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್​ ಜಾರಿ ಮಾಡಿದ್ದ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ (ಜಿಎಸ್​ಟಿ) ಗುಪ್ತಚರ ನಿರ್ದೇಶನಾಲಯದ ಕ್ರಮವನ್ನು ಗೇಮ್ಸ್​ ಕ್ರಾಫ್ಟ್​ ಟೆಕ್ನಾಲಜೀಸ್​ ಪ್ರೈವೇಟ್ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್​.ಆರ್​.ಕೃಷ್ಣಕುಮಾರ್​ ಅವರಿದ್ದ ನ್ಯಾಯಪೀಠ, ಆನ್ಲೈನ್​ ಗೇಮಿಂಗ್​ ಅವಕಾಶದ ಆಟ ಎಂಬುದಾಗಿ ಪರಿಗಣಿಸಲಾಗಿದೆಯೇ ಎಂದು ಪ್ರಶ್ನಿಸಿತು.

ತೆರಿಗೆ ಅಧಿಕಾರಿಗಳು ಗೇಮಿಂಗ್​ ಕುರಿತಂತೆ ಏನು ಗೊತ್ತು. ಗೇಮ್​ಗಳ ಸ್ವರೂಪವನ್ನು ಅಧಿಕಾರಿಗಳು ಹೇಗೆ ನಿರ್ಧರಿಸಲು ಸಾಧ್ಯ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮಾಹಿತಿ ಇದಿಯೇ. ಇದನ್ನು ಪರಿಣಿತರ ನಿರ್ಧರಿಸಬೇಕಲ್ಲವೇ ಎಂದು ಪ್ರಶ್ನಿಸಿತು. ಈ ವೇಳೆ ತೆರಿಗೆ ಇಲಾಖೆಯ ಪರವಾಗಿ ಹಾಜರಾಗಿದ್ದ ಡೆಪ್ಯೂಟಿ ಸಾಲಿಸೇಟರ್​ ಜನರಲ್​ ಎನ್​. ವೆಂಕಟರಾಮನ್​, ತೆರಿಗೆ ವಿಧಿಸುವುದಕ್ಕಾಗಿ ಜಾರಿ ಮಾಡಿರುವ ನೋಟಿಸ್​ನಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ, ಸ್ಕಿಲ್​ ಗೇಮ್​ಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ವಿವರಿಸಿದರು. ಆನ್ಲೈನ್​ ರಮ್ಮಿ ಗೇಮಿಂಗ್​ನಲ್ಲಿ ಶೇ. 96ಕ್ಕೂ ಹೆಚ್ಚು ಗೇಮ್​ಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವುಗಳು ಕೌಶಲ್ಯದ ಆಟಗಳು ಎಂದು ಪರಿಗಣಿಸಲಾಗಿದೆ. ಅದು ಅವಕಾಶದ ಆಟವಲ್ಲ. ಹೀಗಾಗಿ ಸೆ.8ರಂದು ನೀಡಿರುವ ನೋಟಿಸ್​ ಕಾನೂನು ಬಾಹಿರ. ಶೇ.28 ರಷ್ಟು ತೆರಿಗೆ ವಿಧಿಸುವುದು ನಿರ್ಬಂಧಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಅಲ್ಲದೆ, ಈ ವೇದಿಕೆಯಿಂದ ಸುಮಾರು 1500 ಕೋಟಿ ರು.ಗಳ ತೆರಿಗೆ ಪಾವತಿ ಮಾಡಲಾಗಿದೆ. ಹೀಗಿದ್ದರೂ, 21 ಸಾವಿರ ಕೋಟಿ ರು.ಗಳನ್ನು ಪಾವತಿಸುವಂತೆ ನೋಟಿಸ್​ ನೀಡಲಾಗಿದೆ ಎಂದು ವಿವರಿಸಿದರು. ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಮುಕುಲ್​ ರೋಹ್ಟಗಿ ಮತ್ತು ಅರವಿಂದ ದತ್ತಾರ್​ ವಾದ ಮಂಡಿಸಲಿದ್ದಾರೆ.

ಓದಿ: ವಿಡಿಯೋ ಗೇಮ್​ನಿಂದ ಮಕ್ಕಳ ಬ್ರೈನ್ ಆಗುತ್ತೆ ಸೂಪರ್ ಆ್ಯಕ್ಟಿವ್ !

ETV Bharat Logo

Copyright © 2025 Ushodaya Enterprises Pvt. Ltd., All Rights Reserved.