ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಜನವರಿ 26ರಂದು ರೈತ ಪರ ಸಂಘಟನೆಗಳು ರ್ಯಾಲಿ ನಡೆಸಲು ನಿರ್ಧಾರ ಮಾಡಿವೆ.
ದೆಹಲಿ ಪ್ರತಿಭಟನೆಗೆ ರೈತರು ಭಾಗವಹಿಸಲಿದ್ದು, ಬೆಂಗಳೂರಿನಲ್ಲಿ ಸಾವಿರಾರು ರೈತರ ಸಮ್ಮುಖದಲ್ಲಿ ಫ್ರೀಡಂ ಪಾರ್ಕಿನಲ್ಲಿ ಸಮಾವೇಶ ನಡೆಸಲು ರಾಜ್ಯದ ರೈತ ಸಂಘಟನೆಗಳು ನಿರ್ಧಾರ ಮಾಡಿವೆ.
ರಾಜ್ಯ ಐಕ್ಯ ಹೋರಾಟ ಸಮಿತಿ ನಡೆಸಿದ ಸಮಾವೇಶದಲ್ಲಿ ರಾಜಕೀಯ ಚಳುವಳಿಗಾರ ಯೋಗೇಂದ್ರ ಯಾದವ್ ಮಾತನಾಡಿ, ದೆಹಲಿಗೆ ಜನವರಿ 26 ರಂದು ನಾವೆಲ್ಲಾ ಶಾಂತಿಯುತವಾಗಿ ರ್ಯಾಲಿ ಮಾಡಲಿದ್ದೇವೆ. ಜನವರಿ 26 ರಂದು ರೈತ ಮಸೂದೆ ತಿದ್ದುಪಡಿ ಹಿಂಪಡೆಯುವ ಗಡುವು ನೀಡಿದ್ದೆವು. ನಮ್ಮ ಹೋರಾಟ ಕಳೆದ 2 ತಿಂಗಳಿಂದ ನಡೀತಿದೆ. ಕೇಂದ್ರ ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೂ ನಾವು ರ್ಯಾಲಿ ಮೂಲಕ ದೆಹಲಿಗೆ ಎಂಟ್ರಿ ಆಗಲಿದ್ದೇವೆ ಎಂದರು.
ರೈತಪರ ಹೋರಾಟಗಾರ ಕುರುಬೂರು ಶಾಂತಕುಮಾರ್ ಮಾತನಾಡಿ, ಬೃಹತ್ ರ್ಯಾಲಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ,ರಾಮನಗರ ಸೇರಿ ವಿವಿಧೆಡೆ ಯಿಂದ ರೈತರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಸೇರಲಿರುವ ರೈತರು.ಗಣರಾಜ್ಯೋತ್ಸವ ದಿನದಂದು ಬೇರೆ ಬೇರೆ ರಾಜ್ಯದಿಂದ ರೈತರು ರ್ಯಾಲಿ ಹೊರಡಲಿದ್ದಾರೆ ಎಂದು ಮಾಹಿತಿ ನೀಡಿದರು.