ETV Bharat / state

ಸೋಮವಾರ ಸಂಜೆಯವರೆಗೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ 'ಕೈ' ಶಾಸಕರಿಗೆ ವಿಪ್ ಜಾರಿ

ಸಚಿವರನ್ನ ಸ್ಥಾನದಿಂದ ವಜಾಗೊಳಿಸುವವರೆಗೂ ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ತೀರ್ಮಾನಿಸಿದೆ. ವಿಧಾನಸಭೆ ಅಧಿವೇಶನ ಎಲ್ಲಿಯವರೆಗೆ ಮುಂದುವರಿಯುತ್ತದೆಯೋ ಅಲ್ಲಿಯವರೆಗೂ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ..

karnataka-congress-issues-whip-to-party-mlas-to-attend-session
ಸೋಮವಾರ ಸಂಜೆಯವರೆಗೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ 'ಕೈ' ಶಾಸಕರಿಗೆ ವಿಪ್ ಜಾರಿ
author img

By

Published : Feb 19, 2022, 9:00 PM IST

ಬೆಂಗಳೂರು : ಸಚಿವ ಕೆ ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯಲ್ಲಿ ಪ್ರತಿಯೊಬ್ಬ ಶಾಸಕರು ಪಾಲ್ಗೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ.

ಸಚಿವರನ್ನ ಸ್ಥಾನದಿಂದ ವಜಾಗೊಳಿಸುವವರೆಗೂ ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ತೀರ್ಮಾನಿಸಿದೆ. ವಿಧಾನಸಭೆ ಅಧಿವೇಶನ ಎಲ್ಲಿಯವರೆಗೆ ಮುಂದುವರಿಯುತ್ತದೆಯೋ ಅಲ್ಲಿಯವರೆಗೂ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ.

ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಶಾಸಕರು ಯಾವುದೇ ಕಾರ್ಯಕ್ರಮದ ನಿಮಿತ್ತ ಕ್ಷೇತ್ರಕ್ಕೆ ತೆರಳದೆ ವಿಧಾನಸೌಧದಲ್ಲಿಯೇ ಇದ್ದು, ರಾಜ್ಯ ಕಾಂಗ್ರೆಸ್ ನಾಯಕರು ಕರೆಕೊಟ್ಟಿರುವ ಅಹೋರಾತ್ರಿ ಧರಣಿಯನ್ನು ಬೆಂಬಲಿಸುವಂತೆ ತಿಳಿಸಿದ್ದಾರೆ.

karnataka-congress-issues-whip-to-party-mlas-to-attend-session
'ಕೈ' ಶಾಸಕರಿಗೆ ವಿಪ್ ಜಾರಿ

ಸೋಮವಾರ ವಿವಿಧ ಬಿಲ್​ಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಸರ್ಕಾರ ತೀರ್ಮಾನಿಸಿದೆ. ಇದನ್ನು ತಡೆಯುವ ಸಲುವಾಗಿ ಹಾಗೂ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಒಕ್ಕೊರಲಿನ ಧ್ವನಿಯನ್ನು ಎಲ್ಲಾ ಶಾಸಕರು ವ್ಯಕ್ತಪಡಿಸಬೇಕಾಗಿರುವ ಕಾರಣ, ಪ್ರತಿಪಕ್ಷ ನಾಯಕರ ಸೂಚನೆ ಮೇರೆಗೆ ಎಲ್ಲಾ ಶಾಸಕರು ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಸಹ ಜಾರಿಗೊಳಿಸಲಾಗಿದೆ.

ಕರ್ನಾಟಕ ವಿಧಾನಸಭೆಯ 15ನೇ ವಿಧಾನಸಭೆ, 12ನೇ ಅಧಿವೇಶನವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದನದಲ್ಲಿ ಸಾರ್ವಜನಿಕರ ಮಹತ್ವದ ವಿಷಯಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ರಾಷ್ಟ್ರಧ್ವಜದ ಕುರಿತು ನೀಡಿದ ಹೇಳಿಕೆ ವಿರುದ್ದ ಅವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಏ.16ರಂದು ನಿಲುವಳಿ ಸೂಚನೆ ಮಂಡಿಸಲಾಗಿದೆ. ಸಭಾಧ್ಯಕ್ಷರು ನಮ್ಮ ಮನವಿಯನ್ನು ತಿರಸ್ಕರಿಸಿರುವುದರಿಂದ ನಾವು ಫೆ. 17ರ ಸಂಜೆಯಿಂದ ಅಹೋರಾತ್ರಿ ಧರಣಿ ಮುಷ್ಕರ ಹೂಡಿರುತ್ತೇವೆ.

ಇದನ್ನೂ ಓದಿ: ಹಿಜಾಬ್ ಹಿಂದೆ ಐಸಿಸ್ ಕೈವಾಡ ಇದೆ : ಕಂದಾಯ ಸಚಿವ ಆರ್‌ ಅಶೋಕ್ ಗಂಭೀರ ಆರೋಪ

ಆದರೂ ಸಹ ನಮ್ಮ ಮನವಿಯನ್ನು ಪರಿಗಣಿಸದಿರುವುದರಿಂದ ಎಲ್ಲಾ ವಿಧಾನಸಭಾ ಸದಸ್ಯರು ಅಹೋರಾತ್ರಿ ಧರಣಿಯನ್ನು ಫೆ.18, 19, 20 ಮತ್ತು 21ರ ರಾತ್ರಿವರೆಗೆ ಮುಂದುವರೆಸಲು ಪ್ರತಿಪಕ್ಷದ ನಾಯಕರು ನಿರ್ದೇಶಿಸಿರುತ್ತಾರೆ.

ಹೀಗಾಗಿ, ಎಲ್ಲಾ ಕಾಂಗ್ರೆಸ್ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿ ಕಡ್ಡಾಯವಾಗಿ ಅಹೋರಾತ್ರಿ ಧರಣಿಯಲ್ಲಿ ತಪ್ಪದೇ ಭಾಗವಹಿಸಿ ಸದನದಲ್ಲಿ ಹಾಜರಿರಬೇಕೆಂದು ವಿಪ್ ಜಾರಿ ಮಾಡಲಾಗಿದೆ ಎಂದು ಅಜಯ್ ಸಿಂಗ್ ಪ್ರತಿ ಶಾಸಕರಿಗೂ ಸಂದೇಶ ರವಾನೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.