ಬೆಂಗಳೂರು: ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ದೇವನಹಳ್ಳಿ ತಾಲೂಕಿನ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಮುಂದುವರೆಯಲಿದ್ದು, ಶಾಸಕರು ರೆಸಾರ್ಟ್ನಲ್ಲಿ ಈಗಾಗಲೇ ಒಂದು ರಾತ್ರಿ ಕಳೆದಿದ್ದಾರೆ.
ರಾತ್ರಿ ರೆಸಾರ್ಟ್ನತ್ತ ಬರಬೇಕಿದ್ದ ಸಿಎಂ ಇನ್ನೂ ಇತ್ತ ಸುಳಿದಿಲ್ಲ, ಇಂದು ಕುಮಾರಸ್ವಾಮಿ ಅವರು ಶಾಸಕರನ್ನು ಭೇಟಿಯಾಗುವ ಸಾಧ್ಯತೆಯಿದೆ. ಅವರ ಮಾತಿನಂತೆ ಮುಂದೆ ಏನು ಮಾಡಬೇಕು ಅನ್ನೋ ನಿರ್ಧಾರವನ್ನು ಶಾಸಕರು ಕೈಗೊಳ್ಳಲಿದ್ದಾರೆ.
ಸದ್ಯ ಶಾಸಕರಿಗೆ ಬ್ರೇಕ್ ಫಾಸ್ಟ್ ರೆಸಾರ್ಟ್ನಲ್ಲೇ ಸಿದ್ಧವಾಗಿದೆ. ರೆಸಾರ್ಟ್ನ 9 ವಿಲ್ಲಾಗಳಲ್ಲಿ ಎಂಎಲ್ಎಗಳು ವಾಸ್ತವ್ಯ ಹೂಡಿದ್ದು, ಎಲ್ಲಾ ರೀತಿಯ ಹೈಫೈ ಸೌಕರ್ಯ ಸಿಗುತ್ತಿದೆ.