ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದು 1 ಲಕ್ಷ ರೂ. ಮೌಲ್ಯದ ಪಿಪಿಟಿ ಕಿಟ್ ಅನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ವಿತರಿಸಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಕಿಟ್ಗಳನ್ನು ವಿತರಿಸಿದರು.
ಖಂಡ್ರೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವಿಕ್ಟೋರಿಯಾ ಆಸ್ಪತ್ರೆ ಮೆಡಿಕಲ್ ಸೂಪರಿಡೆಂಟ್ ಡಾಕ್ಟರ್ ಗೀತಾ ಶಿವಮೂರ್ತಿ, ಈ ರೀತಿ ಹೆಚ್ಚಿನ ಸಹಕಾರ ಸಿಕ್ಕರೆ ರೋಗ ಎದುರಿಸಲು ಅನುಕೂಲವಾಗುತ್ತದೆ ಮತ್ತು ನೈತಿಕ ಬಲ ಹೆಚ್ಚಳವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವೈದ್ಯರ ಘಟಕದ ಸದಸ್ಯರು ಹಾಗೂ ಬೆಂಗಳೂರಿನ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.