ETV Bharat / state

ದಕ್ಷಿಣ ಏಷ್ಯಾ ಥ್ರೋಬಾಲ್ ಚಾಂಪಿಯನ್​ಶಿಪ್: ಕಪ್​ ಎತ್ತಿ ಹಿಡಿದ ಭಾರತೀಯ ವನಿತೆಯರು

ದಕ್ಷಿಣ ಏಷ್ಯಾ ಥ್ರೋಬಾಲ್ ಚಾಂಪಿಯನ್​ಶಿಪ್​ನಲ್ಲಿ ಭಾರತೀಯ ವನಿತೆಯರ ತಂಡ ಜಯ ಗಳಿಸುವ ಮೂಲಕ ಜಯದ ಮಾಲೆಯನ್ನು ಮುಡಿಗೇರಿಸಿಕೊಂಡಿದೆ.

author img

By

Published : Mar 30, 2019, 12:33 PM IST

ಭಾರತೀಯ ಮಹಿಳಾ ಥ್ರೋಬಾಲ್​ ತಂಡ

ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಏಷ್ಯಾ ಥ್ರೋಬಾಲ್ ಚಾಂಪಿಯನ್​ಶಿಪ್​ನಲ್ಲಿ ಭಾರತೀಯ ವನಿತೆಯರ ತಂಡ ಜಯ ಗಳಿಸಿದೆ.

ಮಾ.28 ಮತ್ತು 29 ರಂದು ಥ್ರೋಬಾಲ್ ಫೆಡರೇಷನ್ ಆಫ್ ಇಂಡಿಯಾ ಬೆಂಗಳೂರಿನ ಗೋಪಾಲನ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಥ್ರೋಬಾಲ್ ಚಾಂಪಿಯನ್​ಶಿಪ್ ಆಯೋಜಿಸಿತ್ತು. ಈ ಪಂದ್ಯಾವಳಿಯಲ್ಲಿ ಸೆಂಟ್ ಜೋಸೆಫ್ ಕಾಲೇಜಿನ ಸಬಿಯಾ ಹಾಗೂ ತಂಡ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.

ಭಾರತೀಯ ಮಹಿಳಾ ಥ್ರೋಬಾಲ್​ ತಂಡ

ಈ ತಂಡವು ವಿವಿಧ ಕಡೆಗಳಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಂಡಿತ್ತು. ತಂಡದ ನಾಯಕಿ ಸಬಿಯಾ ಅವರು ರಾಜ್ಯ ಸರ್ಕಾರದಿಂದ ಕ್ರೀಡಾ ರತ್ನ, ಬಿಬಿಎಂಪಿ ವತಿಯಿಂದ ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಏಳು ಬಾರಿ ಭಾರತ ತಂಡದಲ್ಲಿ ರಾಜ್ಯ ಪ್ರತಿನಿಧಿಯಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಶ್ರೀಲಂಕಾ ಥ್ರೋಬಾಲ್​ ಫಡರೇಷನ್ ವತಿಯಿಂದ ಅತ್ಯುತ್ತಮ ಥ್ರೋಬಾಲ್​ ಪಟುವಾಗಿ ಹೊರಹೊಮ್ಮಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.