ETV Bharat / state

ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋಗಲು ಸಜ್ಜಾದ ಹೆಚ್​.ಎ.ಎಲ್ ಕಾರ್ಮಿಕ ಸಂಘಟನೆ - ಇತ್ತೀಚಿನ ಬೆಂಗಳೂರು ಸುದ್ದಿ

ಹೆಚ್​.ಎ.ಎಲ್ ಕಾರ್ಮಿಕ ಸಂಘಟನೆ ವೇತನ ಪರಿಷ್ಕರಣೆ ಮಾಡಬೇಕೆಂದು ಕೈಗೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಗಮನಿಸಿ ಹೆಚ್​.ಎ.ಎಲ್ ಆಡಳಿತ ಮಂಡಳಿ ಇಂದು ಸುದ್ದಿಗೋಷ್ಟಿ ನಡೆಸಿ ಕಾರ್ಮಿಕ ಸಂಘಟನೆಯ ಬೇಡಿಕೆಗೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ರೆ ಕಾರ್ಮಿಕ ಸಂಘಟನೆ ಮುಖಂಡರು ಸರ್ಕಾರದ ಮೊರೆ ಹೋಗುವುದಾಗಿ ಹೇಳಿದ್ದಾರೆ.

ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋಗುತ್ತೇವೆ....ಎಚ್​.ಎ.ಎಲ್ ಕಾರ್ಮಿಕ ಸಂಘಟನೆ ಪ್ರತಿಕ್ರಿಯೆ
author img

By

Published : Oct 15, 2019, 6:02 PM IST

ಬೆಂಗಳೂರು: ಸೋಮವಾರದಿಂದ ಹೆಚ್​.ಎ.ಎಲ್ ಕಾರ್ಮಿಕ ಸಂಘಟನೆಯವರು ತಮ್ಮ ವೇತನ ಪರಿಷ್ಕರಣೆ ಮಾಡಬೇಕೆಂದು ಕೈಗೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಗಮನಿಸಿ ಹೆಚ್​.ಎ.ಎಲ್ ಆಡಳಿತ ಮಂಡಳಿ ಇಂದು ಸುದ್ದಿಗೋಷ್ಟಿ ನಡೆಸಿ ಕಾರ್ಮಿಕ ಸಂಘಟನೆಯ ಬೇಡಿಕೆಗೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ರೆ ಪಟ್ಟು ಸಡಿಸಲಿಸದ ಕಾರ್ಮಿಕ ಸಂಘಟನೆ ಮುಖಂಡರು ರಕ್ಷಣಾ ಸಚಿವರು ಹಾಗೂ ಪ್ರಧಾನಿಯವರ ಮೊರೆ ಹೋಗುವುದಾಗಿ ಹೇಳಿದ್ದಾರೆ.

ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋಗುತ್ತೇವೆ: ಎಚ್​.ಎ.ಎಲ್ ಕಾರ್ಮಿಕ ಸಂಘಟನೆ

ಕಬ್ಬನ್ ರಸ್ತೆಯಲ್ಲಿರುವ ಹೆಚ್​.ಎ.ಎಲ್ ನ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಮಾನವಸಂಪನ್ಮೂಲ ಇಲಾಖೆಯ ನಿರ್ದೇಶಕ ವಿ.ಎಂ. ಚಮೋಲ ಅವರು, ಯಾವುದೇ ಕಾರಣಕ್ಕೂ ಆಡಳಿತ ಮಂಡಳಿ ವೇತನ ಪರಿಷ್ಕರಣೆಯನ್ನು ಮುಂದೂಡಿಲ್ಲ. ವೇಜ್ ಡಿವಿಷನ್ ಪ್ರಕಾರವೇ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಹತ್ತು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಆದ್ರೆ ಆಡಳಿತ ಮಂಡಳಿ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. ನಾವು ಹತ್ತು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲು ತಯಾರಿದ್ದೇವೆಂದು ತಿಳಿಸಿದರು.

ಇದೆ ವೇಳೆ ಮಾತನಾಡಿದ ಹೆಚ್​ಎಎಲ್​ ಹಣಕಾಸು ನಿರ್ದೇಶಕ ಸಿ.ಬಿ. ಅನಂತಕೃಷ್ಣನ್, ಸಂಸ್ಥೆಯ ಆರ್ಥಿಕ ಸ್ಥಿತಿ ಉತ್ತಮವಾಗಿರುವ ಕಾರಣದಿಂದಲೇ ನಾವು ಹಿಂದೆ ವೇತನ ಪರಿಷ್ಕರಣೆ ಮಾಡಿದ್ದೇವೆ. ಆದರೀಗ ಆರ್ಥಿಕ ಸ್ಥಿತಿ ಸರಿಯಿಲ್ಲವೆನ್ನುವುದು ಸುಳ್ಳು. ಅಲ್ಲದೇ, 5-10 ವರ್ಷಗಳ ಹಿಂದೆ ಸಹಿಯಾಗಿರುವ ಒಪ್ಪಂದದಿಂದ ನಮಗೀಗ ಲಾಭವಾಗುತ್ತಿದೆ. ಈ ಕ್ಷಣಕ್ಕೆ ನಾವು ಅವರ ಯಾವುದೇ ಬೇಡಿಕೆಗೆ ಮಣಿಯುವುದಿಲ್ಲ. ಆದರೆ ಆದಷ್ಟು ಬೇಗ ಈ ಸಮಸ್ಯೆ ಸರಿ ಹೋಗುತ್ತದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು, ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಹೆಚ್​.ಎ.ಎಲ್ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೂರ್ಯದೇವ ಚಂದ್ರಶೇಖರ್ ಮಾತನಾಡಿ, ಹೆಚ್​.ಎ.ಎಲ್ ಕೇಂದ್ರ ಸರ್ಕಾರದ ಅಡಿಯಲ್ಲಿದೆ. ರಕ್ಷಣಾ ಸಚಿವರನ್ನು ಎರಡು ಬಾರಿ ಭೇಟಿಯಾಗಿದ್ದೇವೆ. ಮಾಧ್ಯಮದ ಮುಖಾಂತರ ನಮ್ಮ ಮನವಿಯಂದರೆ ರಕ್ಷಣಾ ಸಚಿವರು ಮಧ್ಯಪ್ರವೇಶಿಸಿ ಇದನ್ನ ಸರಿಪಡಿಸಬೇಕು. ಆಡಳಿತ ಮಂಡಳಿ ಹೇಳುವ ಪ್ರಕಾರ ನಮಗೆ 2 ಬಾರಿ ವೇತನ ಪರಿಷ್ಕರಣೆಯಾಗಿಲ್ಲ. ಇದು ಸರ್ಕಾರದ ನಿಯಮದಿಂದ ಆಗಿರುವುದು, ಇದಕ್ಕೆ ನಮ್ಮ ಬಳಿ ಸೂಕ್ತ ದಾಖಲೆಗಳಿವೆ ಎಂದು ತಿಳಿಸಿದರು.

Intro:Byte:
1. ಸಿ ವಿ ಅನಂತಕೃಷ್ಣನ್, ಹಣಕಾಸು ನಿರ್ದೇಶಕ

2. ವಿ ಎಂ ಚಮೋಲಾ, ಮಾನವಸಂಪನ್ಮೂಲ ನಿರ್ದೇಶಕ

3. ಸೂರ್ಯದೇವ ಚಂದ್ರಶೇಖರ್, ಎಚ್ ಎ ಎಲ್ ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿBody:ಎಚ್ ಎ ಎಲ್ ವೇತನ ಪರಿಷ್ಕರಣೆ ವಿವಾದ: ಕಾರ್ಮಿಕ ಸಂಘಟನೆಯ ಬೇಡಿಕೆಗೆ ಮಣಿಯುವುದಿಲ್ಲ ಎಂದ ಎಚ್ ಎ ಎಲ್ ; ರಕ್ಷಣಾ ಮಂತ್ರಿ ಮೊರೆ ಹೋಗುತ್ತೇವೆ ಎಂದ ಕಾರ್ಮಿಕ ಸಂಘಟನೆ.

ಬೆಂಗಳೂರು: ನಿನ್ನೆಯಿಂದ ಎಚ್ ಎ ಎಲ್ ಕಾರ್ಮಿಕ ಸಂಘಟನೆ ವೇತನ ಪರಿಷ್ಕರಣೆ ಮಾಡಬೇಕೆಂದು ಕೈಗೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಗಮನಿಸಿ ಎಚ್ ಎ ಎಲ್ ಆಡಳಿತ ಮಂಡಳಿ ಇಂದು ಸುದ್ದಿಗೋಷ್ಠಿ ನಡೆಸಿ ಕಾರ್ಮಿಕ ಸಂಘಟನೆಯ ಬೇಡಿಕೆಗೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಂಘಟನೆ ರಕ್ಷಣಾ ಮಂತ್ರಿ ಹಾಗೂ ಪ್ರಧಾನ ಮಂತ್ರಿಯ ಮೊರೆ ಹೋಗಳಿದ್ದೇವೆ ಎಂದು ತಿಳಿಸಿದ್ದಾರೆ.

ಕಬ್ಬನ್ ರಸ್ತೆಯಲ್ಲಿರುವ ಎಚ್ ಎ ಎಲ್ ನ ಕೇಂದ್ರ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸ್ಥೆಯ ಮಾನವಸಂಪನ್ಮೂಲ ಇಲಾಖೆಯ ನಿರ್ದೇಶಕ ವಿ ಎಂ ಚಮೋಲ ಹಾಗೂ ಹಣಕಾಸು ನಿರ್ದೇಶಕ ಸಿ ಬಿ ಅನಂತಕೃಷ್ಣನ್ ಉಪಸ್ಥಿತರಿದ್ದರು.

ಯಾವುದೇ ಕಾರಣಕ್ಕೂ ಆಡಳಿತ ಮಂಡಳಿ ವೇತನ ಪರಿಷ್ಕರಣೆಯನ್ನು ಮುಂದೂಡಿಲ್ಲ.ವೇಜ್ ಡಿವಿಷನ್ ಪ್ರಕಾರವೇ ವೇತನ ಪರಿಷ್ಕರಣೆ ಮಾಡಲಾಗುತ್ತದೆ.ಕಳೆದ 1.1.2007 ರಲ್ಲಿ ವೇತನ ಪರಿಷ್ಕರಣೆ ಮಾಡಲಾಗಿತ್ತು.ಹತ್ತು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ.ಆದರೆ ಆಡಳಿತ ಮಂಡಳಿ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ.2007 ಹಾಗೂ 2012 ರಲ್ಲಿ ವೇತನ ಪರಿಷ್ಕರಣೆ ಮಾಡಲಾಗಿದೆ.ಹದಿನೈದು ಭಾರೀ ವೇತನ ಪರಿಷ್ಕರಣೆ ಯ ಬಗ್ಗೆ ಸಿಬ್ಬಂದಿಯ ಜೊತೆ ಮಾತುಕತೆ ನಡೆಸಲಾಗಿದೆ.ಆಡಳಿತ ಮಂಡಳಿ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ.
ನಾವು ಹತ್ತು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲು ತಯಾರಿದ್ದೇವೆ ಎಂದು ವಿ ಎಂ ಚಮೋಲ ಸ್ಪಷ್ಟನೆ ನೀಡಿದರು.

ಇದೆ ವೇಳೆ ಮಾತನಾಡಿದ ಹಣಕಾಸು ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ಸಂಸ್ಥೆಯ ಆರ್ಥಿಕ ಸ್ಥಿತಿ ಉತ್ತಮವಾಗಿರುವ ಕಾರಣದಿಂದಲೇ ನಾವು ಹಿಂದೆ ವೇತನ ಪರಿಷ್ಕರಣೆ ಮಾಡಿದ್ದೇವೆ, ಆರ್ಥಿಕ ಸ್ಥಿತಿ ಸರಿಯಿಲ್ಲ ಎನ್ನುವುದು ಸುಳ್ಳು. 5-10 ವರ್ಷಗಳ ಹಿಂದೆ ಸಹಿಯಾಗಿರುವ ಒಪ್ಪಂದದಿಂದ ನಮಗೆ ಈಗ ಲಾಭ ಆಗುತ್ತಿದೆ ಎಂದರು. ಹಾಗೂ ಈ ಕ್ಷಣಕ್ಕೆ ನಾವು ಅವರ ಯಾವುದೇ ಬೇಡಿಕೆಗೆ ಮಣಿಯುವುದಿಲ್ಲ ಆದರೆ ಆದಷ್ಟು ಬೇಗ ಈ ಸಮಸ್ಯೆ ಸರಿ ಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಚ್ ಎ ಎಲ್ ಸಂಸ್ಥೆಯಲ್ಲಿ ಸದ್ಯಕ್ಕೆ ಯಾವುದೇ ಕಾರ್ಯ ಸ್ಥಗಿತಗೊಂಡಿಲ್ಲ, ಹಾಗೂ ಈ ಸದ್ಯಕ್ಕೆ ಯಾವುದೇ ನಷ್ಟವನ್ನೂ ಸಂಸ್ಥೆ ಅನುಭವಿಸುತ್ತಿಲ್ಲ ಎಂದು ಮಾಧ್ಯಮಕ್ಕೆ ಆಡಳಿತ ಮಂಡಳಿ ಖಚಿತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಎಚ್ ಎ ಎಲ್ ಕಾರ್ಮಿಕ ಸಂಘಟನೆಯ ಪ್ರಧಾನಕಾರ್ಯದರ್ಶಿ ಸೂರ್ಯದೇವ ಚಂದ್ರಶೇಖರ್, ಎಚ್ ಎ ಎಲ್ ಕೇಂದ್ರ ಸರ್ಕಾರದ ಅಡಿಯಲ್ಲಿದೆ, ರಕ್ಷಣಾ ಸಚಿವರನ್ನು ಎರಡು ಭಾರಿ ಭೇಟಿಯಾಗಿದ್ದೇವೆ, ಮಾಧ್ಯಮದ ಮುಖಾಂತರ ನಮ್ಮ ಮನವಿಯಂದರೆ ರಕ್ಷಣಾ ಸಚಿವರು ಮಧ್ಯಪ್ರವೇಶಿಸಿ ಇದನ್ನ ಸರಿಪಡಿಸಬೇಕು. ಆಡಳಿತ ಮಂಡಳಿ ಸಂಸ್ಥೆಯನ್ನು ವಿನಾಶ ಮಾಡಲು ಹೊರಟಿದೆ. ಆಡಳಿತ ಮಂಡಳಿ ಹೇಳುವ ಪ್ರಕಾರ ನಮಗೆ 2 ಭಾರಿ ವೇತನ ಪರಿಷ್ಕರಣೆ ಆಗಿಲ್ಲ, ಇದು ಸರ್ಕಾರದ ನಿಯಮದಿಂದ ಆಗಿರುವುದು ಇದಕ್ಕೆ ನಮ್ಮ ಬಳಿ ಸೂಕ್ತ ದಾಖಲೆಗಳು ಇವೆ ಎಂದು ವಿವರಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.