ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಸರ್ಕಾರವು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವೈದ್ಯರಿಗೆ ಗುಡ್ ನ್ಯೂಸ್ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗ್ರಾಮೀಣ ಭಾಗ, ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಎಂಬಿಬಿಎಸ್ ಗುತ್ತಿಗೆ ವೈದ್ಯರ ವೇತನವನ್ನು ಸರ್ಕಾರ 45 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಮಾಡಿದೆ.
ಇದು ಗ್ರಾಮೀಣ, ತಾಲೂಕು, ಜಿಲ್ಲಾ ಹಾಗೂ ನಗರದ ಎಲ್ಲಾ ಗುತ್ತಿಗೆ ವೈದ್ಯರಿಗೂ ಅನ್ವಯವಾಗಲಿದ್ದು, ಈ ಪರಿಷ್ಕರಣೆ ಸದರಿ ಎಮ್ಬಿಬಿಎಸ್ ಗುತ್ತಿಗೆ ವೈದ್ಯರನ್ನು ಸಕ್ರಮಗೊಳಿಸುವ ಬೇಡಿಕೆಗೆ ಆಸ್ಪದವಿಲ್ಲ ಎಂಬ ಷರತ್ತಿಗೊಳಪಟ್ಟಿದೆ.