ETV Bharat / state

ಯುವತಿ ಜೊತೆ ಊಬರ್​ ಚಾಲಕ ಅನುಚಿತ ವರ್ತನೆ... ನಡು ರಾತ್ರಿ ನಿರ್ಜನ ರಸ್ತೆಯಲ್ಲಿ ಬಿಟ್ಟು ಪರಾರಿ - ಸಂತ್ರಸ್ತೆ ಟ್ವಿಟರ್‌ನಲ್ಲಿ ಆಕ್ರೋಶ

ಊಬರ್ ಕ್ಯಾಬ್ ನಲ್ಲಿ ಹೋಗುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಕ್ಯಾಬ್ ಚಾಲಕ ಅನುಚಿತ ವರ್ತನೆ ಮಾಡಿದ್ದಾನೆಂದು ದೂರು ದಾಖಲಾಗಿದೆ.

ಊಬರ್ ಕ್ಯಾಬ್ ಚಾಲಕನ ಅನುಚಿತ ವರ್ತನೆ
author img

By

Published : Aug 6, 2019, 5:49 AM IST

ಬೆಂಗಳೂರು: ಊಬರ್ ಕ್ಯಾಬ್ ನಲ್ಲಿ ಹೋಗುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಕ್ಯಾಬ್ ಚಾಲಕ ಅನುಚಿತ ವರ್ತನೆ ಮಾಡಿದ್ದಾನೆಂದು ದೂರು ದಾಖಲಾಗಿದೆ.

ಕಳೆದ ಶನಿವಾರ ರಾತ್ರಿ ಖಾಸಗಿ ಕಂಪೆನಿ ಉದ್ಯೋಗಿ ಹೆಎಎಲ್ ನಿಂದ ರಿಚ್ ಮಂಡ್ ರಸ್ತೆಗೆ ಹೋಗಲು‌ ಊಬರ್ ಕ್ಯಾಬ್ ಬುಕ್ ಮಾಡಿ ಪ್ರಯಾಣಿಸಿದ್ದರು. ದಾರಿ ‌ಮಧ್ಯೆ ಏಕಾಏಕಿ ಸಂತ್ರಸ್ತೆಯತ್ತ ತಿರುಗಿ ವಿದ್ಯಾವಂತರು ಕತ್ತಲಾಗುತ್ತಿದ್ದಂತೆ ಮನೆ ಸೇರಿಕೊಳ್ಳದೆ, ಸ್ನೇಹಿತೆಯರೊಂದಿಗೆ ರಾತ್ರಿವರೆಗೂ ಕುಡಿಯುವುದು ಸರಿಯಿಲ್ಲ ಎಂದು ಬೈದಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ ನಾನು ಕುಡಿದಿಲ್ಲ ಅಷ್ಟಕ್ಕೂ ನಿಮಗೆ ಯಾಕೆ? ನಿಮ್ಮ ಕೆಲಸ‌‌ ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

Banglore
ಊಬರ್ ಕ್ಯಾಬ್ ಚಾಲಕನ ಅನುಚಿತ ವರ್ತನೆ: ಟ್ವೀಟರ್ ನಲ್ಲಿ ಬರೆದುಕೊಂಡಿದ್ದ ಸಂತ್ರಸ್ಥೆ

ಕುಪಿತಗೊಂಡ ಆರೋಪಿ ಸಂತ್ರಸ್ತೆ ನಡತೆ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದಲ್ಲದೆ, ನಿನ್ನಂಥವರನ್ನು ನನ್ನ ಶೂ ಸ್ವಚ್ಚಗೊಳಿಸುವ ಕೆಲಸಕ್ಕೂ ಇಟ್ಟುಕೊಳ್ಳುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅದರಿಂದ ವಿಚಲಿತಗೊಂಡ ಸಂತ್ರಸ್ತೆ, ಊಬರ್ ಆ್ಯಪ್‌ನಲ್ಲಿರುವ ಸುರಕ್ಷತೆ ಬಟನ್ ಒತ್ತಿದ್ದರು. ತಕ್ಷಣ ಊಬರ್ ನಿಯಂತ್ರಣ ಕೊಠಡಿಯಿಂದ ಚಾಲಕನಿಗೆ ಕರೆ ಬಂದಿದ್ದು, ಅದಕ್ಕೆ ಉತ್ತರಿಸಿದ ಆತ ಕ್ಯಾಬ್ ಹತ್ತಿರುವ ಯುವತಿ ವಿಪರೀತ ಕುಡಿದಿದ್ದಾರೆ‌ ಎಂದು ಸುಳ್ಳು ಹೇಳುತ್ತಿದ್ದ. ಅದರಿಂದ ಇನ್ನಷ್ಟು ಹೆದರಿದ ಆಕೆ ನಾನು ಕುಡಿದಿಲ್ಲ ಎಂದು ಜೋರಾಗಿ ಕೂಗಿಕೊಂಡಿದ್ದಾಾರೆ.

ಬಳಿಕ ಊಬರ್‌ನ ಕಂಟ್ರೋಲ್ ರೂಮಿನಿಂದ ಸಂತ್ರಸ್ತೆ ಜತೆ ಮಾತನಾಡಿದ ಮಹಿಳೆ, ನೀವು ತಕ್ಷಣ ಆ ಕ್ಯಾಬ್‌ನಿಂದ ಕೆಳಗೆ ಇಳಿಯಿರಿ. ನಿಮಗೆ ಬೇರೊಂದು ಕ್ಯಾಬ್‌ನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಪ್ರತಿಕ್ರಿಯಿಸಿದರು ಎಂದು ಸಂತ್ರಸ್ತೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ನಿಯಂತ್ರಣ ಕೊಠಡಿ ಕರೆ ಹಿನ್ನೆಲೆಯಲ್ಲಿ ಸಂತ್ರಸ್ತೆಯನ್ನು ಕಾರಿನಿಂದ ಕೆಳಗಿಳಿಸಿದ ಆರೋಪಿ ಪರಾರಿಯಾಗಿದ್ದಾನೆ.

ಈ ಬಗ್ಗೆಯೂ ಬರೆದುಕೊಂಡಿರುವ ಸಂತ್ರಸ್ತೆ, ಜನರೇ ಓಡಾಡದ ರಸ್ತೆಯಲ್ಲಿ ರಾತ್ರಿ 11.15ರ ಸುಮಾರಿಗೆ ನನ್ನನ್ನು ಕ್ಯಾಬ್‌ನಿಂದ ಇಳಿಸಲಾಯಿತು. ಬಳಿಕ ನಾನು 15 ನಿಮಿಷಕಾದರೂ ಮತ್ತೊಂದು ಕ್ಯಾಬ್ ಬರಲಿಲ್ಲ. ತನ್ನ ಸ್ನೇಹಿತರಿಗೆ ಕರೆ ಮಾಡಿ ಅವರ ಜತೆ ಮನೆಗೆ ತೆರಳಿದೆ. ಅನಂತರ ಊಬರ್‌ನವರು ನನ್ನ ಹಣವನ್ನು ನನಗೆ ವಾಪಸ್ ನೀಡಿದರು. ಆದರೆ ನನಗೆ ಹಣ ಬೇಕಿರಲಿಲ್ಲ ಎಂದು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾಾರೆ.

ಸಂತ್ರಸ್ತೆ ಟ್ವಿಟ್‌ಗೆ ಬರುತ್ತಿದ್ದ ಪ್ರತಿಕ್ರಿಯೆಗಳನ್ನು ಗಮನಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೂಡಲೇ ಸಂತ್ರಸ್ತೆಗೆ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಹಾಗೆಯೇ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರಿಗೆ ಈ ಬಗ್ಗೆ‌ಕ್ರಮಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

Intro:nullBody:ಊಬರ್ ಕ್ಯಾಬ್ ಚಾಲಕನ ಅನುಚಿತ ವರ್ತನೆ:
ಈ ಬಗ್ಗೆ ಟ್ವೀಟರ್ ನಲ್ಲಿ ಬರೆದುಕೊಂಡಿದ್ದ ಸಂತ್ರಸ್ಥೆಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ಪೊಲೀಸ್ ಕಮೀಷನರ್

ಬೆಂಗಳೂರು:
ಊಬರ್ ಕ್ಯಾಬ್ ನಲ್ಲಿ ಹೋಗುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಕ್ಯಾಬ್ ಚಾಲಕ ಅನುಚಿತ ವರ್ತನೆ ತೋರಿದ್ದಾನೆ‌.
ಕಳೆದ ಶನಿವಾರ ರಾತ್ರಿ ಖಾಸಗಿ ಕಂಪೆನಿ ಉದ್ಯೋಗಿ ಹೆಎಎಲ್ ನಿಂದ ರಿಚ್ ಮಂಡ್ ರಸ್ತೆಗೆ ಹೋಗಲು‌ ಊಬರ್ ಕ್ಯಾಬ್ ಬುಕ್ ಮಾಡಿ ಪ್ರಯಾಣಿಸಿದ್ದರು. ದಾರಿ‌ಮಧ್ಯೆ ಏಕಾಏಕಿ ಸಂತ್ರಸ್ತೆಯತ್ತ ತಿರುಗಿ ವಿದ್ಯಾವಂತರು ಕತ್ತಲಾಗುತ್ತಿದ್ದಂತೆ ಮನೆ ಸೇರಿಕೊಳ್ಳದೆ, ಸ್ನೇಹಿತೆಯರೊಂದಿಗೆ ರಾತ್ರಿವರೆಗೂ ಕುಡಿಯುವುದು ಸರಿಯಿಲ್ಲ ಎಂದು ಬೈದಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ ನಾನು ಕುಡಿದಿಲ್ಲ ಅಷ್ಟಕ್ಕೂ ನಿಮಗೆ ಯಾಕೆ...‌ನಿಮ್ಮ ಕೆಲಸ‌‌ ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಕುಪಿತಗೊಂಡ ಆರೋಪಿ ಸಂತ್ರಸ್ತೆ ನಡತೆ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದಲ್ಲದೆ, ನಿನ್ನಂಥವರನ್ನು ನನ್ನ ಶೂ ಸ್ವಚ್ಚಗೊಳಿಸುವ ಕೆಲಸಕ್ಕೂ ಇಟ್ಟುಕೊಳ್ಳುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಅದರಿಂದ ವಿಚಲಿತಗೊಂಡ ಸಂತ್ರಸ್ತೆ, ಊಬರ್ ಆ್ಯಪ್‌ನಲ್ಲಿರುವ ಸುರಕ್ಷತೆ’ ಬಟನ್ ಒತ್ತಿದ್ದರು. ತಕ್ಷಣ ಊಬರ್ ನಿಯಂತ್ರಣ ಕೊಠಡಿಯಿಂದ ಚಾಲಕನಿಗೆ ಕರೆ ಬಂದಿದ್ದು, ಅದಕ್ಕೆ ಉತ್ತರಿಸಿದ ಆತ ಕ್ಯಾಬ್ ಹತ್ತಿರುವ ಯುವತಿ ವಿಪರೀತ ಕುಡಿದಿದ್ದಾರೆ‌ ಎಂದು ಸುಳ್ಳು ಹೇಳುತ್ತಿದ್ದ. ಅದರಿಂದ ಇನ್ನಷ್ಟು ಹೆದರಿದ ಆಕೆ ನಾನು ಕುಡಿದಿಲ್ಲ ಎಂದು ಜೋರಾಗಿ ಕೂಗಿಕೊಂಡಿದ್ದಾಾರೆ. ಬಳಿಕ ಊಬರ್‌ನ ಕಂಟ್ರೋಲ್ ರೂಮಿನಿಂದ ಸಂತ್ರಸ್ಥೆ ಜತೆ ಮಾತನಾಡಿದ ಮಹಿಳೆ, ನೀವು ತಕ್ಷಣ ಆ ಕ್ಯಾಬ್‌ನಿಂದ ಕೆಳಗೆ ಇಳಿಯಿರಿ. ನಿಮಗೆ ಬೇರೊಂದು ಕ್ಯಾಬ್‌ನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಪ್ರತಿಕ್ರಿಯಿಸಿದರು ಎಂದು ಸಂತ್ರಸ್ತೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾಾರೆ.
ಅಲ್ಲದೆ, ನಿಯಂತ್ರಣ ಕೊಠಡಿ ಕರೆ ಹಿನ್ನೆಲೆಯಲ್ಲಿ ಸಂತ್ರಸ್ತೆಯನ್ನು ಕಾರಿನಿಂದ ಕೆಳಗಿಳಿಸಿದ ಆರೋಪಿ ಪರಾರಿಯಾಗಿದ್ದಾಾನೆ. ಈ ಬಗ್ಗೆಯೂ ಬರೆದುಕೊಂಡಿರುವ ಸಂತ್ರಸ್ತೆ, ಜನರೇ ಓಡಾಡದ ರಸ್ತೆಯಲ್ಲಿ ರಾತ್ರಿ 11.15ರ ಸುಮಾರಿಗೆ ನನ್ನನ್ನು ಕ್ಯಾಬ್‌ನಿಂದ ಇಳಿಸಲಾಯಿತು. ಬಳಿಕ ನಾನು 15 ನಿಮಿಷಕಾದರೂ ಮತ್ತೊಂದು ಕ್ಯಾಬ್ ಬರಲಿಲ್ಲ. ತನ್ನ ಸ್ನೇಹಿತರಿಗೆ ಕರೆ ಮಾಡಿ ಅವರ ಜತೆ ಮನೆಗೆ ತೆರಳಿದೆ. ಅನಂತರ ಊಬರ್‌ನವರು ನನ್ನ ಹಣವನ್ನು ನನಗೆ ವಾಪಸ್ ನೀಡಿದರು. ಆದರೆ ನನಗೆ ಹಣ ಬೇಕಿರಲಿಲ್ಲ ಎಂದು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾಾರೆ.
ಸಂತ್ರಸ್ತೆ ಟ್ವಿಟ್‌ಗೆ ಬರುತ್ತಿದ್ದ ಪ್ರತಿಕ್ರಿಯೆಗಳನ್ನು ಗಮನಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೂಡಲೇ ಸಂತ್ರಸ್ತೆಗೆ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಹಾಗೆಯೇ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರಿಗೆ ಈ ಬಗ್ಗೆ‌ಕ್ರಮಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದು ಉತ್ತರಿಸಿದ್ದಾರೆ.Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.