ETV Bharat / state

ಜಮೀನು ಹದ್ದುಬಸ್ತಿನ ಪ್ರಕ್ರಿಯೆ ಹೇಗೆ, ಅರ್ಜಿ ಸಲ್ಲಿಸುವುದು ಎಲ್ಲಿ ?: ಇಲ್ಲಿದೆ ಸಂಪೂರ್ಣ ಮಾಹಿತಿ - land

ಒಬ್ಬ ವ್ಯಕ್ತಿ ಜಮೀನು ಹದ್ದುಬಸ್ತು ಮಾಡಿಕೊಳ್ಳಲು ಏನೇನು ಮಾಡಬೇಕು ಹಾಗೂ ಯಾವ ದಾಖಲೆಗಳು ಆತನ ಬಳಿ ಇರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಜಮೀನು
ಜಮೀನು
author img

By

Published : Jan 2, 2023, 6:24 PM IST

ಬೆಂಗಳೂರು: ಪ್ರತಿ ಜಮೀನಿಗೂ ಹದ್ದುಬಸ್ತು ಅವಶ್ಯಕವಾಗಿ ಬೇಕೇಬೇಕು. ಭೂಮಾಪಕರು ಜಮೀನಿಗೆ ಬಂದು ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನು ಅಳತೆ ಮಾಡಿ ಅಳಿಸಿ ಹೋಗಿರುವ ಗಡಿ ಭಾಗವನ್ನು ಪುನಃ ಪತ್ತೆ ಹಚ್ಚಿ ಗುರುತು ಮಾಡುವುದೇ ಹದ್ದುಬಸ್ತು.

ಪೋಡಿಯಾದ ಜಮೀನು ಅಥವಾ ಜಾಗವನ್ನು ಬೇರೆಯವರು ಒತ್ತುವರಿ ಮಾಡಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವುದೇ ಹದ್ದುಬಸ್ತು. ಒತ್ತುವರಿಯಾಗಿರುವ ಜಮೀನಿಗೆ ಅರ್ಜಿ ಹೇಗೆ ಸಲ್ಲಿಸಬೇಕು. ಯಾವಾಗ ಅರ್ಜಿ ಸಲ್ಲಿಸಬೇಕೆಂಬುದರ ಬಗ್ಗೆ ಮಾಹಿತಿ ಕೊರತೆ ಇರುತ್ತದೆ.

ಯಾವಾಗ ಅರ್ಜಿ ಸಲ್ಲಿಸಬಹುದು?: ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವುದೆಲ್ಲಿ?, ಯಾವ ದಾಖಲೆಗಳು ಬೇಕು?. ಹದ್ದು ಬಸ್ತು ಹಾಕಿದರೆ ಲಾಭವೇನು? ಮತ್ತು ಹದ್ದುಬಸ್ತಿನ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂಬುದನ್ನು ಭೂಮಾಲೀಕರು ತಿಳಿದುಕೊಳ್ಳುವುದು ಉತ್ತಮ. ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಬೇಕೆಂದರೆ, ಜಮೀನಿನ ಸುತ್ತಲೂ ಇರುವ ಸರ್ವೆ ಕಲ್ಲುಗಳ ನಾಶವಾಗಿದ್ದಲ್ಲಿ, ಪಕ್ಕದ ಜಮೀನುದಾರರು ನಿಮ್ಮ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂಬ ಅನುಮಾನ ಬಂದಾಗ, ಪಹಣಿಯಲ್ಲಿ ಇರುವುದಕ್ಕಿಂತ ಕಡಿಮೆ ಜಮೀನು ಇದೆ ಎಂದು ಅನಿಸಿದಾಗ ಅರ್ಜಿ ಸಲ್ಲಿಸಬಹುದು.

ಒಂದು ವೇಳೆ, ಅರ್ಜಿದಾರನಿಗಾಗಲಿ ಅಥವಾ ಪಕ್ಕದ ಜಮೀನುದಾರನಿಗಾಗಲಿ ಈ ಅಳತೆಯಿಂದ ಸಮಾಧಾನವಾಗಿಲ್ಲವೆಂದೂರು ಮತ್ತೆ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ ಎನ್ನುತ್ತಾರೆ ಸರ್ವೆ ಅಧಿಕಾರಿಗಳು. ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂಮಾಪಕರು ಭೂಮಾಲೀಕನ ಜಮೀನಿಗೆ ಬರುತ್ತಾರೆ. ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ಮಾಡಿ ಅಳಿಸಿ ಹೋಗಿರುವ ಗಡಿಭಾಗವನ್ನು ಪತ್ತೆ ಹಚ್ಚಿ ಜಮೀನಿಗೆ ಗಡಿ ಭಾಗಗಳನ್ನು ಗುರುತು ಮಾಡುತ್ತಾರೆ.

ಮಾಲೀಕರಿಗೆ ತಮ್ಮ ಜಮೀನು ಮತ್ತು ಜಾಗದ ವಿಸ್ತೀರ್ಣದ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ. ಹಾಗಾಗಿ, ಹದ್ದು ಬಸ್ತು ಮಾಡಿಕೊಂಡರೆ ಜಮೀನಿನ ಯಾವ ಭಾಗ ಒತ್ತುವರಿಯಾಗಿದೆ, ಎಷ್ಟು ಪ್ರದೇಶ ಒತ್ತುವರಿಯಾಗಿದೆ. ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದನ್ನು ಗುರುತು ಮಾಡಿ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ನಿಖರವಾದ ಗಡಿ ಗುರುತಿಸುತ್ತಾರೆ.

ಹದ್ದುಬಸ್ತಿಗೆ ಬೇಕಿರುವ ದಾಖಲೆಗಳು : ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ಜಮೀನುದಾರ ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಪಹಣಿ/ ಆರ್ ಟಿಸಿ 3 ನಮೂನೆ ಬೇಕು.

ಅರ್ಜಿ ಸಲ್ಲಿಸುವುದು ಹೇಗೆ? : ಎಲ್ಲ ದಾಖಲೆಗಳನ್ನು ಪಡೆದುಕೊಂಡ ನಂತರ ಅರ್ಜಿ ಪಡೆದು ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ಅರ್ಜಿಯಲ್ಲಿ ಮುಖ್ಯವಾಗಿ ಚೆಕ್ಕುಬಂದಿ ವಿವರ ಕೇಳಿರುತ್ತಾರೆ. ಜೊತೆಗೆ ಜಮೀನಿನ ಅಕ್ಕ ಪಕ್ಕದವರ ಹೆಸರು, ಅವರ ಮೊಬೈಲ್ ನಂಬರ್, ಹಾಗೂ ವಿಳಾಸವನ್ನು ಭರ್ತಿ ಮಾಡಿ ನಿಮ್ಮ ಹೋಬಳಿಯಲ್ಲಿರುವ ನಾಡಕಚೇರಿ ಅಥವಾ ತಾಲೂಕು ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅಕ್ಯುಲಾಜ್ ಮೆಂಟ್ (ಅರ್ಜಿ ಸಲ್ಲಿಸಿದ ರಸೀದಿ) ಪಡೆದುಕೊಳ್ಳಬೇಕು.

ಈ ಅರ್ಜಿಯನ್ನು ಭೂಮಾಪಕರಿಗೆ ರನಾನಿಸಲಾಗುತ್ತದೆ. ಭೂಮಾಪಕರು ಅರ್ಜಿದಾರರಿಗೆ ಹಾಗೂ ಪಕ್ಕದ ಜಮೀನುದಾರರಿಗೆ ಮುಂಚಿತವಾಗಿ ನೋಟಿಸ್ ಕೊಟ್ಟು ದಿನಾಂಕವನ್ನು ನಿಗದಿಪಡಿಸುತ್ತಾರೆ. ಅವರು ಹೇಳಿರುವ ದಿನಾಂಕದಂದು ಅರ್ಜಿದಾರರ ಮತ್ತು ಪಕ್ಕದ ಜಮೀನುದಾರರ ಸಮ್ಮುಖದಲ್ಲಿ ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ನಡೆಯುತ್ತದೆ. ಅಳತೆ ಕಾರ್ಯ ಮುಗಿದ ನಂತರ ಅರ್ಜಿದಾರ ಕಲ್ಲುಗಳನ್ನು ಹಾಕಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ್ದ ಅರ್ಜಿ ತಿದ್ದುಪಡಿಗೆ ಹೈಕೋರ್ಟ್ ಅನುಮತಿ

ಹೇಳಿಕೆ ಪ್ರತಿಯಾಗಲಿ ಅಥವಾ ನೋಟಿಸ್ ಪ್ರತಿ ಮತ್ತು ಹದ್ದುಬಸ್ತಿನ ನಕ್ಷೆ ಪ್ರತಿಗಳನ್ನು ಅರ್ಜಿದಾರರಾಗಲಿ ಅಥವಾ ಪಕ್ಕದ ಜಮೀನುದಾರರಾಗಲಿ ನಾಡಕಚೇರಿ ಅಥವಾ ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿ ಪಡೆದುಕೊಳ್ಳಬಹುದು.

ಸರ್ವೆಗೆ ಶುಲ್ಕವೆಷ್ಟು? : ಹಿಂದೆ ಆಡಳಿತಾತ್ಮಕ ವೆಚ್ಚ, ನಿರ್ವಹಣಾ ವೆಚ್ಚ ಮತ್ತು ಖಾಸಗಿ ಭೂಮಾಪಕರ ಸೇವಾ ಶುಲ್ಕದ ಹೆಚ್ಚಳದ ಹೊರೆಯನ್ನು ಜಮೀನುಗಳ ಮಾಲೀಕರಿಗೆ ವರ್ಗಾಗಣೆ ಮಾಡಿರುವ ಕಂದಾಯ ಇಲಾಖೆ, ಭೂಮಾಪನ ಶುಲ್ಕದಲ್ಲಿ ಈ ಹಿಂದೆ ಭಾರಿ ಏರಿಕೆ ಮಾಡಲಾಗಿತ್ತು. ಆದರೆ, ಅದಕ್ಕೆ ಆಕ್ಷೇಪಣೆ ಬಂದ ನಂತರ ಶುಲ್ಕ ಏರಿಕೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಮಾಡಲಾಗಿದೆ.

ಈ ಮೊದಲು ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಸರ್ವೆ ಅಥವಾ ಹಿಸ್ಸಾ ಸರ್ವೆ ನಂಬರಿಗೆ ಜಮೀನುದಾರರ ಅರ್ಜಿ ಶುಲ್ಕ 35 ರೂ. ಮಾತ್ರ ಪಾವತಿಸಲಾಗುತಿತ್ತು. ಆದರೆ, ಈಗ ನಗರ ಹಾಗೂ ಗ್ರಾಮೀಣ ಪ್ರದೇಶಗಳೆಂದು ಪ್ರತ್ಯೇಕಿಸಿ 4 ಸಾವಿರ ರೂ.ವರೆಗೆ ಶುಲ್ಕ ಹೆಚ್ಚಿಸಲಾಗಿದೆ. ಗ್ರಾಮೀಣ ವ್ಯಾಪ್ತಿಯಲ್ಲಿ 2 ಎಕರೆವರೆಗೆ 1500 ರೂ. ಮತ್ತು ಎರಡು ಎಕರೆಗಿಂತ ಹೆಚ್ಚು ಪ್ರತಿ ಎಕರೆಗೆ ಹೆಚ್ಚುವರಿ 300 ರೂ. ಶುಲ್ಕ ವಿಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.