ETV Bharat / state

ಜೂನ್ 14ರವರೆಗೆ ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆ; ಜೂ.15ರಿಂದ ಹೈಸ್ಕೂಲ್ ಶುರು

author img

By

Published : May 5, 2021, 1:56 PM IST

ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಈ ಹಿಂದೆ ತಿಳಿಸಿದಂತೆ ಜೂನ್ 14ರ ತನಕ ಹಾಗೂ ಪ್ರೌಢಶಾಲೆಗಳಿಗೆ ಮೇ 31ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ‌. ಜೂನ್ 15 ರಿಂದ 8-10 ನೇ ತರಗತಿಗಳು‌ ಪ್ರಾರಂಭವಾಗಲಿವೆ.

High school will start from June 15th
ಜೂನ್ 14ರ ವರೆಗೆ ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ; ಜೂನ್ 15ರಿಂದ ಹೈಸ್ಕೂಲ್ ಆರಂಭ

ಬೆಂಗಳೂರು: ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಪ್ರಸಕ್ತ ಸನ್ನಿವೇಶವನ್ನು ಗಮನದಲ್ಲಿರಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ 2020-21ನೇ ಸಾಲಿನ ರಜಾವಧಿಯನ್ನು ಪರಿಷ್ಕರಿಸಿದೆ.

ಈ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಪ್ರಾಥಮಿಕ ಶಾಲೆಗಳಿಗೆ ಹಿಂದೆ ತಿಳಿಸಿದಂತೆ ಜೂನ್ 14ರ ತನಕ ಹಾಗೂ ಪ್ರೌಢಶಾಲೆಗಳಿಗೆ ಮೇ 31ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ‌. ಜೂನ್ 15 ರಿಂದ 8-10 ನೇ ತರಗತಿಗಳು‌ ಪ್ರಾರಂಭವಾಗಲಿವೆ.

ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್​ ದುರಂತ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾ ಪ್ರವಾಸ ಕೈಗೊಂಡ ಸುರೇಶ್ ಕುಮಾರ್

ಪ್ರೌಢಶಾಲಾ‌ ಶಿಕ್ಷಕರು ರಜೆ ಅವಧಿಯಲ್ಲಿ‌ ಎಸ್.ಎಸ್.ಎಲ್.ಸಿ ಮಕ್ಕಳ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನ ಹರಿಸಬೇಕು. ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು ಅವರ ಕಲಿಕೆಗೆ ಪ್ರೇರೇಪಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಜೂನ್ 1 ರಿಂದ 14 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪುನರ್ಮನನ ತರಗತಿಗಳು ನಡೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.