ETV Bharat / state

15 ತಿಂಗಳಿಂದ ವೇತನ ಬಿಡುಗಡೆ ಮಾಡದ ವಿಶ್ವವಿದ್ಯಾಲಯದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಹೈಕೋರ್ಟ್​ - ಈಟಿವಿ ಭಾರತ ಕನ್ನಡ

ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಿಗೆ ಕಳೆದ 15 ತಿಂಗಳಿಂದ ವೇತನ ಬಿಡುಗಡೆ ಮಾಡದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಕೂಡಲೇ ವೇತನ ಬಿಡುಗಡೆ ಮಾಡದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.

The High Court warned of strict action against the university for not releasing the salary
15 ತಿಂಗಳಿಂದ ವೇತನ ಬಿಡುಗಡೆ ಮಾಡದ ವಿಶ್ವವಿದ್ಯಾಲಯದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಹೈಕೋರ್ಟ್​
author img

By ETV Bharat Karnataka Team

Published : Oct 16, 2023, 10:41 PM IST

ಬೆಂಗಳೂರು: ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಕೃಷ್ಣ ರೆಡ್ಡಿ ಮತ್ತು ಪ್ರಾಂಶುಪಾಲರಾಗಿದ್ದ ಡಾ.ಎಚ್.ಪ್ರಕಾಶ್ ಅವರಿಗೆ ಕಳೆದ 15 ತಿಂಗಳಿಂದ ವೇತನ ಬಿಡುಗಡೆ ಮಾಡದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಕೂಡಲೇ ವೇತನ ಬಿಡುಗಡೆ ಮಾಡದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.

ಸೇವೆಯಿಂದ ನಿವೃತ್ತರಾಗುವ ಹೆಸರುಗಳನ್ನು ಸೂಚಿಸಿ 2022ರ ಜನವರಿ 14ರಂದು ಸರ್ಕಾರ ಬಿಡುಗಡೆ ಮಾಡಿದ ಪಟ್ಟಿ ಮತ್ತು ವೇತನ ತಡೆ ಹಿಡಿದಿರುವ ಕ್ರಮ ಆಕ್ಷೇಪಿಸಿ ಡಾ.ಜಿ.ಕೃಷ್ಣ ರೆಡ್ಡಿ ಮತ್ತು ಡಾ.ಎಚ್.ಪ್ರಕಾಶ್ ಅವರು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಅರ್ಜಿದಾರರಿಗೆ ವೇತನ ಪಾವತಿ ಮಾಡಲು 2023ರ ಮಾರ್ಚ್​ 2 ಮತ್ತು ಜುಲೈ 27ರಂದು ರಾಜ್ಯ ಸರ್ಕಾರ ಆದೇಶಿಸಿದೆ. ಅರ್ಜಿದಾರರನ್ನು ಮಹಾರಾಣಿ ಕಸ್ಟರ್ ವಿಶ್ವವಿದ್ಯಾಲಯದ ಉದ್ಯೋಗಿಗಳಾಗಿ ವಿಲೀನ ಮಾಡಿ 2022ರ ಜೂನ್​ 30ರಂದು ಸರ್ಕಾರ ಆದೇಶಿಸಿದೆ. ಹೀಗಿದ್ದರೂ ಅರ್ಜಿದಾರರ ವೇತನವನ್ನು ಬಿಡುಗಡೆ ಮಾಡಿಲ್ಲ. ಇನ್ನೂ ಎಚ್‌ಆರ್‌ಎಂಎಸ್ ಮಾದರಿಯಲ್ಲಿ ಬಿಲ್‌ಗಳನ್ನು ಸಲ್ಲಿಸುವಲ್ಲಿ ಕೆಲ ತೊಂದರೆಯಾಗಿರುವ ಮತ್ತು ಕೆಲವೊಂದು ಪರಿಶೀಲನೆ ನಡೆಯಬೇಕಿರುವ ಕಾರಣದಿಂದ ವೇತನ ಬಿಡುಗಡೆ ಮಾಡಲಾಗುತ್ತಿಲ್ಲ ಎಂಬುದಾಗಿ ವಿಶ್ವವಿದ್ಯಾಲಯ ಕುಲಪತಿಯ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ.

ಅಲ್ಲದೇ, ಎಚ್‌ಆರ್‌ಎಂಎಸ್ ಮಾದರಿಯಲ್ಲಿ ಬಿಲ್ ಸಲ್ಲಿಸಲು ಸಾಧ್ಯವಿದೆ. ಈ ವಿಚಾರದಲ್ಲಿ ಕುಲಪತಿ ಮತ್ತು ರಿಜಿಸ್ಟ್ರರ್ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂಬುದಾಗಿ 2023ರ ಅಕ್ಟೋಬರ್​ 11ರಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ತಿಳಿಸಿದ್ದಾರೆ. ಎಚ್‌ಆರ್‌ಎಂಎಸ್ ಮಾದರಿಯಲ್ಲಿ ಬಿಲ್ ಅನ್ನು ಸಲ್ಲಿಸಲು ಅಂತಿಮ ಕ್ರಮ ಜರುಗಿಸಲು ಕುಲಪತಿ ನಿರಾಕರಿಸುತ್ತಿರುವುದು ಖಂಡನೀಯ. ಉದ್ದೇಶಪೂರ್ವಕವಾಗಿ ವೇತನ ತಡೆಹಿಡಿಯುವ ಕ್ರಮ ಎಂಬುದಾಗಿ ಇದು ತೋರುತ್ತಿದೆ. ಮೇಲಾಗಿ ಅರ್ಜಿದಾರರಿಗೆ ಕುಲಪತಿ ವೇತನ ಪಾವತಿಸುತ್ತಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದ ಪರಿಣಾಮ ವೇತನ ಪಾವತಿ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಂತಿಮವಾಗಿ, ಅರ್ಜಿದಾರರ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಬಿಲ್‌ಗಳನ್ನು ಪರಿಷ್ಕೃತ ಎಚ್‌ಆರ್‌ಎಂಎಸ್ ಮಾದರಿಯಲ್ಲಿ ವಿಶ್ವವಿದ್ಯಾಲಯ ಮತ್ತು ಮಹಾರಾಣಿ ಮಹಿಳೆಯರ ವಿಜ್ಞಾನ ಕಾಲೇಜು ಪ್ರಾಂಶುಪಾಲರು ಸಲ್ಲಿಸಬೇಕು. ವೇತನ ಬಿಡುಗಡೆಗೆ ಕ್ರಮ ಜರುಗಿಸಬೇಕು. ತಪ್ಪಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಮಹಾರಾಣಿ ಕಾಲೇಜು ಅನ್ನು ಕ್ಲಸ್ಟರ್ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿ 2019ರಲ್ಲಿ ಆದೇಶಿಸಿದ್ದ ಸರ್ಕಾರ, ಅಲ್ಲಿನ 64 ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿ ವಿಲೀನಗೊಳಿಸಿ 2022ರ ಜೂನ್​ 30ರಂದು ಆದೇಶಿಸಿದೆ. ಇದಕ್ಕೂ ಮುನ್ನ 2022ರ ಜನವರಿ 14ರಂದು ಆ ವರ್ಷ ಸೇವೆಯಿಂದ ಬಿಡುಗಡೆಯಾಗುವ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು.

ಆ ಪಟ್ಟಿಯಲ್ಲಿ ಅರ್ಜಿದಾರರ ಹೆಸರಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಕಾಲೇಜು ಸಿಬ್ಬಂದಿಯಾಗಿದ್ದರೆ 60 ವರ್ಷಕ್ಕೆ ಸೇವೆಯಿಂದ ನಿವೃತ್ತರಾಗುತ್ತಿದ್ದೆವು. ಆದರೆ, ಕ್ಲಸ್ಟರ್ ವಿಶ್ವವಿದ್ಯಾಲಯ ಸಿಬ್ಬಂದಿಯಾಗಿ ವಿಲೀನವಾದ ನಂತರ ನಿವೃತ್ತಿ ವಯಸ್ಸು 62 ಆಗಿದೆ. ಇದೇ ಕಾರಣ ಮುಂದಿಟ್ಟುಕೊಂಡು 2022ರ ಜಲೈನಿಂದ ತಮಗೆ ವೇತನ ಪಾವತಿಸದೆ ತಡೆಹಿಡಿಯಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

ಇದನ್ನೂ ಓದಿ: 15 ವರ್ಷದ ಅಪ್ರಾಪ್ತನ ನೇಮಕಾತಿ ಹಿಂಪಡೆದಿದ್ದ ಸಾಹಿತ್ಯ ಅಕಾಡೆಮಿ ಕ್ರಮ ಎತ್ತಿಹಿಡಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.